Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಉತ್ತರ ಕನ್ನಡದಲ್ಲಿ ಮಕ್ಕಳಿಗೂ ಬಿಡ್ತಿಲ್ಲ ಮಹಾಮಾರಿ..! ಪೋಷಕರೇ, 3 ನೇ ಅಲೆಯಲ್ಲಿ ಮಕ್ಕಳ ಬಗ್ಗೆ ಇರಲಿ ಕಾಳಜಿ..!!

ಉತ್ತರ ಕನ್ನಡದಲ್ಲಿ ಮಕ್ಕಳಿಗೂ ಬಿಡ್ತಿಲ್ಲ ಮಹಾಮಾರಿ..! ಪೋಷಕರೇ, 3 ನೇ ಅಲೆಯಲ್ಲಿ ಮಕ್ಕಳ ಬಗ್ಗೆ ಇರಲಿ ಕಾಳಜಿ..!!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲೂ ಕೊರೋನಾ 3 ನೇ ಅಲೆಯ ಭೀತಿ ಶುರುವಾಗಿದೆ. ಕೊರೋನಾ ಸೋಂಕು ಇಷ್ಟು ದಿನ ವಯಸ್ಕರಿಗೆ, ವೃದ್ಧರಿಗಷ್ಟೇ ಅನ್ನುವಂತಿತ್ತು, ಆದ್ರೆ ಇದೀಗ ಮಕ್ಕಳಲ್ಲೂ ಹೆಚ್ಚಿನ ಸೋಂಕು ಕಾಡತೊಡಗಿದ್ದು ಜಿಲ್ಲೆಯಲ್ಲಿ ಈ ವರೆಗೆ 5338 ಮಕ್ಕಳಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಯಾವ ತಾಲೂಕಲ್ಲಿ ಎಷ್ಟು..? ಜಿಲ್ಲೆಯಲ್ಲಿ ಮಕ್ಕಳಲ್ಲಿ ಈ ವರೆಗೆ ಕಾರವಾರ-387, ಅಂಕೋಲ- 319, ಕುಮಟಾ-511, ಭಟ್ಕಳ- 338, ಹಳಿಯಾಳ- 728, ಜೋಯಿಡಾ- 296, ಹೊನ್ನಾವರ- 568, ಮುಂಡಗೋಡು- 491, ಸಿದ್ದಾಪುರ-498, ಶಿರಸಿ-681,ಯಲ್ಲಾಪುರ- 527 ಪಾಸಿಟಿವ್...

Post
ಯೋಗ ದಿನಾಚರಣೆ; ಸೋಂದಾ ಸ್ವರ್ಣವಲ್ಲಿ ಶ್ರೀಗಳ ಯೋಗಾಶೀರ್ವಚನ..!

ಯೋಗ ದಿನಾಚರಣೆ; ಸೋಂದಾ ಸ್ವರ್ಣವಲ್ಲಿ ಶ್ರೀಗಳ ಯೋಗಾಶೀರ್ವಚನ..!

ಶಿರಸಿ: ಜೀವನದ ಸಮತೆ ಪಡೆಯೋಕೆ ಯೋಗಾನುಷ್ಠಾನ ಮಹತ್ವದ್ದು ಅಂತ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ರು. ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶಿರಸಿಯ ಸೋಂದಾದಲ್ಲಿ ಯೋಗಾನುಷ್ಠಾನ ನಡೆಸಿದ ಶ್ರೀಗಳು ಆಶೀರ್ವಚನ ನುಡಿದರು. ಆಸನ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ. ಆದರೆ ಯೋಗ ದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಆಗದು. ಯೋಗ ದಿನಾಚರಣೆಯ ಮರು ದಿನ ಯೋಗ ಮಾಡದೇ ಇದ್ದವರೂ ಇದ್ದಾರೆ....

Post
ಪ್ರಯಾಣಿಕರ ಕೊರತೆಯಲ್ಲೇ ಉತ್ತರ ಕನ್ನಡದಲ್ಲಿ ಬಸ್ ಸಂಚಾರ ಶುರು..!

ಪ್ರಯಾಣಿಕರ ಕೊರತೆಯಲ್ಲೇ ಉತ್ತರ ಕನ್ನಡದಲ್ಲಿ ಬಸ್ ಸಂಚಾರ ಶುರು..!

ಶಿರಸಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಇದರ ಭಾಗವಾಗಿ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಜಿಲ್ಲೆಯ ವಾಯವ್ಯ ಸಾರಿಗೆ ಸಂಸ್ಥೆಯ ಮುಖ್ಯ ಘಟಕವಾದ ಶಿರಸಿಯಿಂದ ಬಸ್ ಗಳು ಕಾರ್ಯ ಆರಂಭಿಸಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಈಗಾಗಲೇ ಬಸ್ ಗಳು ಸಂಚಾರವನ್ನ ಆರಂಭಿಸಿದ್ದು, ಸದ್ಯಕ್ಕೆ ಜಿಲ್ಲೆಯಿಂದ ಜಿಲ್ಲೆಗಳಿಗೆ, ತಾಲೂಕುಗಳಿಂದ ತಾಲೂಕುಗಳಿಗೆ ಮಾತ್ರ ಬಸ್ ಗಳು ಸಂಚಾರ ಪ್ರಾರಂಭಿಸಿವೆ. ಆದ್ರೆ ಪ್ರಯಾಣಿಕರ ಕೊರತೆ ಸಾರಿಗೆ ಸಂಸ್ಥೆಯನ್ನ ಕಾಡುತ್ತಿದೆ. ಪ್ರಯಾಣಿಕರಿಲ್ಲದೆ...

Post
ಮಾಗೋಡು ಜಲಪಾತದ ದೃಶ್ಯ ವೈಭವ ಕಣ್ತುಂಬಿಕೊಳ್ಳಿ..! ಈಗಲೇ ಒಮ್ಮೆ ಭೇಟಿ ಕೊಡಿ..!!

ಮಾಗೋಡು ಜಲಪಾತದ ದೃಶ್ಯ ವೈಭವ ಕಣ್ತುಂಬಿಕೊಳ್ಳಿ..! ಈಗಲೇ ಒಮ್ಮೆ ಭೇಟಿ ಕೊಡಿ..!!

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿಡುತ್ತಿದ್ದಾನೆ‌. ಎಲ್ಲೆಂದರಲ್ಲಿ ಮಳೆ ಮಳೆ ಮಳೆ. ಹೀಗಾಗಿ ಮಳೆಯ ಅವಾಂತರಗಳು ಒಂದೆಡೆಯಾದ್ರೆ, ಮತ್ತೊಂದೆಡೆ ಅದೇ ಮಳೆಯಿಂದ ಉತ್ತರ ಕನ್ನಡದ ಮಲೆನಾಡಿನ ಪ್ರಕೃತಿ ಸೌಂದರ್ಯ ಕಣ್ಮನ ಸೆಳೆಯುತ್ತಿದೆ. ಪಶ್ಚಿಮ ಘಟ್ಟದ ರಮಣೀಯತೆ..! ಅಂದಹಾಗೆ, ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳನ್ನ ನೋಡೋದೇ ಒಂದು ರೀತಿಯ ಆನಂದ. ಪಶ್ಚಿಮ ಘಟ್ಟಗಳ ಸಾಲು ಹಸಿರನ್ನು ಹೊದ್ದು ನೋಡುಗರ ಮನ ಸೆಳೆಯುತ್ತದೆ. ಅದೇ ರೀತಿ ಜಲಪಾತಗಳ ಜಿಲ್ಲೆ ಉತ್ತರ ಕನ್ನಡ ಈ ಪಶ್ಚಿಮ ಘಟ್ಟಗಳ ಸಾಲಿನಲ್ಲೇ ಬರೋದ್ರಿಂದ...

Post
ನಾಳೆಯಿಂದ ಬಸ್ ಸಂಚಾರ ಆರಂಭ: ಏನಿದೆ ರೂಲ್ಸ್..?

ನಾಳೆಯಿಂದ ಬಸ್ ಸಂಚಾರ ಆರಂಭ: ಏನಿದೆ ರೂಲ್ಸ್..?

ಬೆಂಗಳೂರು: ನಾಳೆಯಿಂದ ಅನ್ ಲಾಕ್ ಆರಂಭವಾಗಿತ್ತಿರುವುದರಿಂದ ರಾಜ್ಯಾದ್ಯಂತ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. 3 ಸಾವಿರ ಬಸ್ ಗಳು ರಸ್ತೆಗೆ..! ನಾಳೆಯಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಕೆ ಎಸ್ ಆರ್ ಟಿಸಿ ಬಸ್ ಸಂಚಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 3000 ಬಸ್ ಗಳು ಸಂಚರಿಸಲಿವೆ. ಆದರೆ ಅಂತರಾಜ್ಯಗಳಿಗೆ ಸದ್ಯಕ್ಕೆ ಬಸ್ ಸಂಚಾರ ಲಭ್ಯವಿರುವುದಿಲ್ಲ. ಪ್ರಯಾಣಿಕರು ಹಾಗೂ ಚಾಲಕರು, ನಿರ್ವಾಹಕರು...

Post
ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!

ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!

ಮುಂಡಗೋಡ: ತಾಲೂಕಿನಲ್ಲಿ ಇಂದು 5 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 19 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ತಾಲೂಕಿನಲ್ಲಿ ಒಟ್ಟೂ 84 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 43 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 13 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ಇಂದು ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ತಾಲೂಕಿನ ತಟ್ಟಿಹಳ್ಳಿಯ 65 ವರ್ಷದ ಓರ್ವ ಪುರುಷ ವ್ಯಕ್ತಿ, ಹಾಗೂ...

Post
ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ: ಉತ್ತರ ಕನ್ನಡದಲ್ಲೂ ಇಂದು ರೆಡ್ ಅಲರ್ಟ್..!

ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ: ಉತ್ತರ ಕನ್ನಡದಲ್ಲೂ ಇಂದು ರೆಡ್ ಅಲರ್ಟ್..!

ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ಮೂರು ದಿನ ರಾಜ್ಯಾದ್ಯಂತ ಮಳೆ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಇಂದು ಬೆಂಗಳೂರಿನಲ್ಲಿಯೂ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನಿಗಾ ವಹಿಸಲು ಸಿಎಂ ಸೂಚನೆ ಮಳೆಯಿಂದ ಕರ್ನಾಟಕದ 20 ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿನ್ನೆ ಜಿಲ್ಲಾಧಿಕಾರಿಗಳೊಂದಿಗೆ...

Post
ಯರೇಬೈಲ್ ಗ್ರಾಮದಲ್ಲಿ ಸರಾಯಿ ಮಾರಾಟ ನಿಷೇಧಕ್ಕೆ ಆಗ್ರಹ: ತಹಶೀಲ್ದಾರರಿಗೆ ಮನವಿ

ಯರೇಬೈಲ್ ಗ್ರಾಮದಲ್ಲಿ ಸರಾಯಿ ಮಾರಾಟ ನಿಷೇಧಕ್ಕೆ ಆಗ್ರಹ: ತಹಶೀಲ್ದಾರರಿಗೆ ಮನವಿ

ಮುಂಡಗೋಡ: ತಾಲೂಕಿನ ಯರೇಬೈಲು ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ಮುಂಡಗೋಡ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಯರೆಬೈಲು ಗ್ರಾಮದಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಸೇರಿ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಗ್ರಾಮದಲ್ಲಿ ಇನ್ನು ಮುಂದೆ ಸರಾಯಿ ಮಾರಾಟ ಮಾಡದಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ಯಾರಾದ್ರೂ ಸರಾಯಿ ಮಾರಾಟ ಮಾಡಿದರೇ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.

Post
ವಡಗಟ್ಟಾ ಅಗಡಿ ರಸ್ತೆ ಬಂದ್; ಹುನಗುಂದ ರೈತರ ಗೋಳು ಕೇಳೋರ್ಯಾರು..?

ವಡಗಟ್ಟಾ ಅಗಡಿ ರಸ್ತೆ ಬಂದ್; ಹುನಗುಂದ ರೈತರ ಗೋಳು ಕೇಳೋರ್ಯಾರು..?

ಮುಂಡಗೋಡ: ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ವಡಗಟ್ಟಾ-ಅಗಡಿ ರಸ್ತೆ ಬಂದ್ ಆಗಿದೆ. ಮುಂಡಗೋಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಅನ್ನದಾತರ ಆಕ್ರೋಶದ ಕಟ್ಟೆಯೊಡೆದಿದೆ. ಆಗಿದ್ದೇನು..? ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ರೈತರು ಆಕ್ರೋಶಗೊಂಡಿದ್ದಾರೆ. ಈಗಾಗಲೇ ತಮ್ಮ ಗದ್ದೆಗಳಲ್ಲಿ ಬೀಜ ಬಿತ್ತಿ, ಇನ್ನೇನು ಮೊಳಕೆ ಒಡೆದು ಸಸಿಯಾಗುವ ಹಂತದಲ್ಲಿರುವಾಗಲೇ ಭಾರೀ ಮಳೆಯ ಕಾರಣಕ್ಕೆ ಇನ್ನಿಲ್ಲದ ಆತಂಕ ಶುರುವಾಗಿದೆ‌. ಅರಶಿಣಗೇರಿ ಕೆರೆ ಕಾಲುವೆ ಫುಲ್‌.! ಈ ಮದ್ಯೆ, ಅರಶಿಣಗೇರಿ ಕೆರೆಯಿಂದ ರೈತರ ಜಮೀನುಗಳಿಗೆ ಸಂಪರ್ಕಿಸೋ ಕಾಲುವೆಯಲ್ಲಿ ಭಾರೀ ಪ್ರಮಾಣದಲ್ಲಿ...

Post
ಜಿಲ್ಲೆಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್: ಹೆಚ್ಚಿದ ಆತಂಕ, ತನಿಖೆ ಚುರುಕು..!

ಜಿಲ್ಲೆಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಪೋನ್ ಆಕ್ಟಿವ್: ಹೆಚ್ಚಿದ ಆತಂಕ, ತನಿಖೆ ಚುರುಕು..!

ಕಾರವಾರ: ಕಾರವಾರ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಕಾರವಾರದ ಶಿರವಾಡ ಸಮೀಪದ ಜಾಂಬಾ ಗ್ರಾಮದ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆಕ್ಟಿವ್ ಆಗಿದೆ. ಯಾವಾಗಿಂದ..? ಕಳೆದ ಸೋವವಾರದಿಂದ ಸತತ ಟ್ರ್ಯಾಕ್ ಆಗುತ್ತಿರುವ ನಿರ್ಬಂಧಿತ ಸ್ಯಾಟಲೈಟ್ ಫೋನ್ ಸಂಬಂಧ, ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ವಿಭಾಗದಿಂದ ತನಿಖೆ ಶುರುವಾಗಿದೆ. ಟ್ರ್ಯಾಕ್ ಆದ ಹಿನ್ನಲೆಯಲ್ಲಿ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ), ಅರಣ್ಯ ಇಲಾಖೆ ಸ್ಥಳೀಯ ಪೊಲೀಸರೊಳಗೊಂಡ ಐದು ಜನರ ತಂಡ ಜಾಂಬಾ ಗ್ರಾಮ ವ್ಯಾಪ್ತಿಯ ಅರಣ್ಯ ದಲ್ಲಿ ಕೂಮಿಂಗ್ ಕಾರ್ಯಾಚರಣೆ...

error: Content is protected !!