ಹುನಗುಂದದಲ್ಲಿ ಎರಡು ಮನೆಗಳಲ್ಲಿ ನುಗ್ಗಿದ ಕಳ್ಳರು, ಒಂದು ಮನೆಯಲ್ಲಿ ಕಳ್ಳತನ, ಮತ್ತೊಂದು ಮನೆಯಲ್ಲಿ ವಿಫಲ ಯತ್ನ..!

ಮುಂಡಗೋಡ ತಾಲೂಕಿನ ಹುನಗುಂದದಲ್ಲಿ ಮನೆ ಕಳ್ಳತನವಾಗಿದೆ. ಇಲ್ಲಿನ ದೇಶಪಾಂಡೆ ನಗರದಲ್ಲಿ ಎರಡು ಮನೆಗಳಿಗೆ ಕಳ್ಳರು ನುಗ್ಗಿದ್ದು ಒಂದು ಮನೆಯಿಂದ 25 ಸಾವಿರ ನಗದು ಹಾಗೂ ಅರ್ದ ತೊಲೆ ಚಿನ್ನ ಎಗರಿಸಿಕೊಂಡು ಹೋಗಿದ್ದಾರೆ‌. ಮತ್ತೊಂದು ಮನೆಯ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.

ಅಂದಹಾಗೆ, ಹುನಗುಂದದ ದೇವಕ್ಕ ಹನ್ಮಂತಪ್ಪ ವಡ್ಡರ ಎಂಬುವವರ ಮನೆಗೆ ನುಗ್ಗಿರೋ ಕಳ್ಳರು 25ಸಾವಿರ ಹಣ, ಹಾಗೂ ಅರ್ಧ ತೊಲೆ ಚಿನ್ನ ಕದ್ದೊಯ್ದಿದ್ದಾರೆ. ಹಾಗೆಯೇ, ಅದೇ ಮನೆಯ ಹತ್ತಿರದ ಹಸನ್ ಸಾಬ್ ನಬಿಸಾಬ್ ಮೊರಬ ಎಂಬುವವರ ಮನೆಗೆ ನಿಗ್ಗಿರೋ ಕಳ್ಳರು, ಕಳ್ಳತನಕ್ಕೆ ವಿಫಲ ಯತ್ನ‌ ನಡೆಸಿದ್ದಾರೆ‌. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!