Home ಸಂತೋಷ ಶೆಟ್ಟೆಪ್ಪನವರ್

Author: ಸಂತೋಷ ಶೆಟ್ಟೆಪ್ಪನವರ್ (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)

Post
ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಖಡಕ್ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಖಡಕ್ ಆದೇಶ..!

ಕಾರವಾರ: ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮ) ನಿಯಮಗಳು, 2000 ರನ್ವಯ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿ.ಎನ್.ಎಸ್.ಎಸ್), 2023 ಕಲಂ 163 ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ಡಿಜಿ ವ್ಯವಸ್ಥೆಗಳು, ಬೇಸ್ ಬೂಸ್ಟರ್‌ಗಳು, ಮೊಬೈಲ್ ಡಿಜೆ ವಾಹನಗಳು ಹಾಗೂ 75 ಡೆಸಿಬೆಲ್ ಮೀರಿದ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಆದ್ದೇಶಿಸಿದ್ದಾರೆ. ರಾತ್ರಿ...

Post
ಮುಂಡಗೋಡಿನಲ್ಲಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಿದ್ಧತೆ: ಶಾಂತಿ-ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಮುಖಂಡರ ಸಭೆ..!

ಮುಂಡಗೋಡಿನಲ್ಲಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಿದ್ಧತೆ: ಶಾಂತಿ-ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಮುಖಂಡರ ಸಭೆ..!

ಮುಂಡಗೋಡ: ಮುಂಬರುವ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಕಾನೂನು-ಸುವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ, ಮುಂಡಗೋಡ ಪೊಲೀಸ್ ಠಾಣೆಯ ವತಿಯಿಂದ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಂಡಗೋಡ ಪಿಐ ರಮೇಶ್ ಹನಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಟ್ಟಣದ ಗಣ್ಯ ಮುಖಂಡರು ಭಾಗವಹಿಸಿದ್ದರು. ​ಶಾಂತಿ ಮತ್ತು ಸುವ್ಯವಸ್ಥೆ..! ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ...

Post
ಮುಂಡಗೋಡ (ಕ್ರೈಂ) ಪಿಎಸ್ಐ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್ಐ ಗಳು ಸಸ್ಪೆಂಡ್..! “ಮಂತ್ಲಿ ಡೀಲಿಂಗ್” ಆಡಿಯೋ ವೈರಲ್ ಹಿನ್ನೆಲೆ ; ಎಸ್ಪಿ ದೀಪನ್ ದಿಟ್ಟ ಕ್ರಮ..!

ಮುಂಡಗೋಡ (ಕ್ರೈಂ) ಪಿಎಸ್ಐ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್ಐ ಗಳು ಸಸ್ಪೆಂಡ್..! “ಮಂತ್ಲಿ ಡೀಲಿಂಗ್” ಆಡಿಯೋ ವೈರಲ್ ಹಿನ್ನೆಲೆ ; ಎಸ್ಪಿ ದೀಪನ್ ದಿಟ್ಟ ಕ್ರಮ..!

ಮುಂಡಗೋಡ: ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆಯ ಪೋಸ್ಟಿಂಗ್‌ಗಾಗಿ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಕ್ರೈಂ ಪಿಎಸ್ಐ ಆಗಿದ್ದ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ. ಮೂವರು ಸಸ್ಪೆಂಡ್..! ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ, ಹಳಿಯಾಳದ L&O ಪಿಎಸ್‌ಐ ಕಿರಣ್ ಪಾಟೀಲ್ ಹಾಗೂ ಕ್ರೈಂ ವಿಭಾಗದ ಪಿಎಸ್‌ಐ ಕೃಷ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಈ ಮೂವರು ಅಧಿಕಾರಿಗಳ ನಡುವೆ ನಡೆದ ಮಾತುಕತೆ...

Post
ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!

ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!

ಮುಂಡಗೋಡ: ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರ ವಿರುದ್ಧ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜೂಜಾಟಕ್ಕೆ ಬಳಸಿದ್ದ ₹6,700 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಆ.27ರಂದು ಬೆಳಗಿನ ಜಾವ ಸುಮಾರು 3.10 ಗಂಟೆಗೆ ಕಾಳಗಿನಕೊಪ್ಪ ಗಣಪತಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಐವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ...

Post
ಈದ್ ಮೀಲಾದ್ ಹಬ್ಬದ ಸಂಭ್ರಮಕ್ಕೂ ಮುನ್ನ ಖಾಕಿ ಪಡೆ ಸಜ್ಜು..! ಮುಂಡಗೋಡದಲ್ಲಿ ಪೊಲೀಸರ ರೂಟ್ ಮಾರ್ಚ್ ಮೂಲಕ ಭದ್ರತೆಯ ಭರವಸೆ..!

ಈದ್ ಮೀಲಾದ್ ಹಬ್ಬದ ಸಂಭ್ರಮಕ್ಕೂ ಮುನ್ನ ಖಾಕಿ ಪಡೆ ಸಜ್ಜು..! ಮುಂಡಗೋಡದಲ್ಲಿ ಪೊಲೀಸರ ರೂಟ್ ಮಾರ್ಚ್ ಮೂಲಕ ಭದ್ರತೆಯ ಭರವಸೆ..!

ಮುಂಡಗೋಡ: ಈದ್ ಮೀಲಾದ್ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುಂಡಗೋಡ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಹಬ್ಬದ ಮುನ್ನಾದಿನವೇ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರೂಟ್ ಮಾರ್ಚ್ ನಡೆಸಿ ಶಾಂತಿ–ಸುವ್ಯವಸ್ಥೆಯ ಸಂದೇಶ ಸಾರಿದರು. ಪೊಲೀಸ್ ಠಾಣೆಯಿಂದ ಆರಂಭಗೊಂಡ ರೂಟ್ ಮಾರ್ಚ್ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಾಗಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮವಸ್ತ್ರದ ರೂಟ್ ಮಾರ್ಚ್ ಸಾರ್ವಜನಿಕರ ಗಮನ ಸೆಳೆಯಿತು. ಹಬ್ಬದ ಸಂದರ್ಭದಲ್ಲಿ ಶಾಂತಿ,...

Post
ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!

ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!

ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಆಂಜನೇಯ ದೇವಸ್ಥಾನದ ಸಮೀಪ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ವಿವಾದಿತ ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆಯ ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇದೇ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ಕೆಲವರು...

Post
ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!

ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!

ಮುಂಡಗೋಡ: ತಾಲೂಕಿನ ಟಿಬೇಟನ್ ಕಾಲೋನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಯುವ ಕಟ್ಟಡ ಕಾರ್ಮಿಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಬಸಾಪುರ ಗ್ರಾಮದ ಸಂದೇಶ ನಾಗರಾಜ ಚಲವಾದಿ (23) ಎಂದು ಗುರುತಿಸಲಾಗಿದೆ. ಲಾಮಾ ಕ್ಯಾಂಪ್ ನಂಬರ್-1ರಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ...

Post
NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್  ಸಪ್ಲೈ ಮಾಡಿದ್ದವ ಅಂದರ್..!

NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್ ಸಪ್ಲೈ ಮಾಡಿದ್ದವ ಅಂದರ್..!

ಮುಂಡಗೋಡಿನ NMD ಜಮೀರ್ ಭೀಕರ ಹತ್ಯೆ ಕೇಸಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ‌. ಆ ಬರ್ಬರ ಹತ್ಯೆಯಲ್ಲಿ ಬಳಸಲಾಗಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲು ಪೂರೈಸಿದ್ದವ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಆರೋಪಿಯನ್ನು ಉತ್ತರ ಪ್ರದೇಶ ಗೋರಖಪುರ‌ದಿಂದ ಬಂಧಿಸಿ ಕರೆತಂದಿದ್ದಾರೆ ಪೊಲೀಸ್ರು. ಅಂದಹಾಗೆ, ಸದ್ಯ NMD ಹತ್ಯೆ ಕೇಸಲ್ಲಿ ಅರೆಸ್ಟ್ ಆಗಿರೋ ಆರೋಪಿಗಳ ಸಂಖ್ಯೆ 12 ಕ್ಕೆ ಏರಿದೆ. ಅದು ಏಪ್ರಿಲ್ 24 ರ ಮಿಡ್ ನೈಟ್..! ಯಸ್, ಅವತ್ತು ಶುಕ್ರವಾರ ಏಪ್ರಿಲ್ 24 ರ ರಾತ್ರಿ...

Post
ಮುಂಡಗೋಡ ​ಹಿಂದೂ ಮಹಾಗಣಪತಿ 2026: ಅಧಿಕೃತ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ..!

ಮುಂಡಗೋಡ ​ಹಿಂದೂ ಮಹಾಗಣಪತಿ 2026: ಅಧಿಕೃತ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ..!

ಮುಂಡಗೋಡಿನ ಪ್ರತಿಷ್ಠಿತ ಹಿಂದೂ ಮಹಾಗಣಪತಿ ಕಾರ್ಯಕ್ರಮದ 2026 ನೇ ವರ್ಷದ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ. ಮಂಗಳವಾರ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ನೂತನ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಸಂಘಟನೆಯಲ್ಲಿ ಹೊಸ ಉತ್ಸಾಹ ಮೂಡಿದೆ. ​ನೂತನ ಪದಾಧಿಕಾರಿಗಳು..! ​ಸಭೆಯ ಪ್ರಮುಖ ಘಟ್ಟದಲ್ಲಿ ಮುಂಬರುವ ಕಾರ್ಯಕ್ರಮದ ನಿರ್ವಹಣೆಗಾಗಿ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ​2026 ನೇ ಹಿಂದು ಮಹಾ ಗಣಪತಿ ಉತ್ಸವದ ಅಧ್ಯಕ್ಷರಾಗಿ, ತಂಗಂ ಚಿನ್ನಣ್ಣ ಆಯ್ಕೆಯಾಗಿದ್ದಾರೆ, ಅದ್ರಂತೆ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗೌಳಿ,...

Post
ಎತ್ತಂಗಡಿಯಾಗಿದ್ದ ACF ರವಿ ಹುಲಕೋಟಿ ಕೇಸು ಕೋರ್ಟಲ್ಲಿ ವಜಾ ಆಯ್ತಂತೆ..! ನೂತನ ACF ಈರೇಶ್ ಎಂ. ಕಬ್ಬಿನ್ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ..!

ಎತ್ತಂಗಡಿಯಾಗಿದ್ದ ACF ರವಿ ಹುಲಕೋಟಿ ಕೇಸು ಕೋರ್ಟಲ್ಲಿ ವಜಾ ಆಯ್ತಂತೆ..! ನೂತನ ACF ಈರೇಶ್ ಎಂ. ಕಬ್ಬಿನ್ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ..!

ಮುಂಡಗೋಡ ACF ಈರೇಶ್ ಎಂ. ಕಬ್ಬಿನ್ ಮತ್ತೆ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಾರೆ. ಕಳೆದ ತಿಂಗಳು 17 ರಂದೇ ವರ್ಗಾವಣೆಗೊಂಡು ಬಂದಿದ್ದ ಕಬ್ಬಿನ್ ರವರಿಗೆ, ಇಲ್ಲಿಂದ ವರ್ಗಾವಣೆಗೊಂಡಿದ್ದ ACF ರವಿ ಹುಲಕೋಟಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ, ಕಬ್ಬಿನ್ ರವರು ತಾಲೂಕಿಗೆ ಬರಲು ಕೊಂಚ ತಡೆಯಾಗಿತ್ತು. ಆದ್ರೆ, ಕೋರ್ಟ್ ಸಮಗ್ರ ವಿಚಾರಣೆ ಬಳಿಕ ಹಳೆಯ ಸಾಹೇಬ್ರು ಹಾಕಿದ್ದ ಕೇಸನ್ನು ವಜಾ ಮಾಡಿದೆ. ಜೊತೆಗೆ ಅವತ್ತು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ, ಹೀಗಾಗಿ, ಮತ್ತೀಗ ಈರೇಶ್ ಕಬ್ಬಿನ್...