Police Root March; ಮುಂಡಗೋಡ ಪೊಲೀಸರಿಂದ ಪಟ್ಟಣದಲ್ಲಿ ರೂಟ್ ಮಾರ್ಚ್ ನಡೆಯಿತು. ಮೊಹರಮ್ ಆಚರಣೆ ಹಿನ್ನೆಲೆಯಲ್ಲಿ ,ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ AREA DOMINATION ಮತ್ತು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪಟ್ಟಣದಲ್ಲಿ ರೂಟ್ ಮಾರ್ಚ್ ಮಾಡಲಾಯಿತು. ಈ ವೇಳೆ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ್ ಮಿರ್ಜಿಗಿ, ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ಸೇರಿದಂತೆ ಠಾಣೆಯ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ರು.
Top Stories
ಇನ್ನೂ ಮೂರು ದಿನ ಉತ್ತರ ಕನ್ನಡ ಜಿಲ್ಲೆ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..!
ಲಾರಿಗಳ ನಡುವೆ ಅಪಘಾತ; ಚಾಲಕನ ಕಾಲು ಕಟ್..!
ಹುನಗುಂದದ ಈ ರಸ್ತೆ, ರಸ್ತೆಯೋ ಕೆರೆಯೋ..? PWD ಅಧಿಕಾರಿಗಳೇ ದಯವಿಟ್ಟು ಗಮನಿಸಿ..!
School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!
ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..!
ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!
ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ನಿರ್ಲಕ್ಷ ಆರೋಪ PSI ಸಸ್ಪೆಂಡ್..!
ಬಾಂಬ್ ಸ್ಪೋಟದ ಆರೋಪಿ ಬಂಧನ, 30 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕ ಆರೋಪಿ..!
ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?
ಚಿಗಳ್ಳಿ ಪ್ರೌಢಶಾಲೆಯಲ್ಲಿ ಆ “ಮಾಜಿ”ಗಳ ವಿರುದ್ಧ ಪಾಲಕರ ಆಕ್ರೋಶ; ಅಷ್ಟಕ್ಕೂ, ಆ ಆರೋಪಗಳೇಲ್ಲ ನಿಜವಾ..? ಹಾಗಿದ್ರೆ ತನಿಖೆ ಯಾವಾಗ..?
ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡ ಪೊಲೀಸರ ಮುತುವರ್ಜಿ, ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ..!
ಇನಸ್ಟಾಗ್ರಾಂ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ 15 ಲಕ್ಷರೂ ವಂಚನೆ..!
ಪಾಕಿಸ್ಥಾನದಲ್ಲಿ ಆತ್ಮಾಹುತಿ ದಾಳಿ; 13 ಸೈನಿಕರು ಸಾವು, 29 ಜನ ಗಾಯ..!
ಮಣಿಪಾಲದಲ್ಲಿ ಬೈಕ್ ಅಪಘಾತ, ಮುಂಡಗೋಡಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕ ದಾರುಣ ಸಾವು..!
ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಖಾನಾಪುರದಲ್ಲಿ ಕಡವೆ ಬೇಟೆಯಾಡಿದ್ದ 9ಜನರ ಬಂಧನ..!
ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು..!
ಉತ್ತರ ಕನ್ನಡ ಜಿಲ್ಲೆಯ ಇಂದಿನ ಸಂಕ್ಷಿಪ್ತ ಸುದ್ದಿಗಳು..!
ಇನ್ನೂ ಮೂರು ದಿನ ಉತ್ತರ ಕನ್ನಡ ಜಿಲ್ಲೆ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..!
Rain Alert; ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾನುವಾರದ ವರೆಗೆ ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜುಲೈ 7 ರವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಳಿಕ ಯೆಲ್ಲೋ ಅಲರ್ಟ್ ಇದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿಗೂ ಜುಲೈ 5 ರಂದು, ಆರೆಂಜ್ ಅಲರ್ಟ್ ನೀಡಲಾಗಿದೆ. ನಂತರ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ವೇಳೆ ಜೋರಾದ ಗಾಳಿ ಬೀಸಲಿದ್ದು, ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸಲಿದೆ. ಧಾರವಾಡ, ಗದಗ, ಕಲಬುರಗಿ ಹಾಗೂ ಬೀದರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ,ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬೀ...
ಲಾರಿಗಳ ನಡುವೆ ಅಪಘಾತ; ಚಾಲಕನ ಕಾಲು ಕಟ್..!
Accident News; ಹುಬ್ಬಳ್ಳಿ: ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ, ನಿಂತ ಲಾರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ, ಚಾಲಕನ ಎರಡು ಕಾಲು ಕಟ್ ಆದ ಘಟನೆ ಹುಬ್ಬಳ್ಳಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಹೊನ್ನಾಪುರ ಬಳಿ ನಡೆದಿದೆ. ಬೆಂಗಳೂರಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಲಾರಿ ಚಾಲಕ ವೇಗವಾಗಿ ಬಂದಿದ್ದಾನೆ. ಆತನಿಗೆ ನಿಯಂತ್ರಣ ತಪ್ಪಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಗುದ್ದಿದ್ದಾನೆ. ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆತನ ಎರಡು ಕಾಲ ಕಟ್ ಆಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಹುನಗುಂದದ ಈ ರಸ್ತೆ, ರಸ್ತೆಯೋ ಕೆರೆಯೋ..? PWD ಅಧಿಕಾರಿಗಳೇ ದಯವಿಟ್ಟು ಗಮನಿಸಿ..!
Road Problem; ಮುಂಡಗೋಡ ತಾಲೂಕಿನ ಹುನಗುಂದದ ವಡಗಟ್ಟಾ ರಸ್ತೆ ಗೋಳು ಕೇಳುವವರೇ ಇಲ್ಲವೆನೊ..? ಯಾಕಂದ್ರೆ ಗ್ರಾಮದ ವಿರಕ್ತ ಮಠದ ಹತ್ತಿರ, ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಹತ್ತಿರ ರಸ್ತೆ ಅನ್ನೋದು ಹೊಂಡ ಮಯವಾಗಿದೆ. ವಾಹನಗಳಿರಲಿ, ಇಲ್ಲಿ ನಡೆದಾಡಲೂ ಆಗದ ಸ್ಥಿತಿ ಇದೆ. ಆದ್ರೆ, PWD ಅಧಿಕಾರಿಗಳು ಮಾತ್ರ ಈ ಕಡೆ ತಿರುಗಿಯೂ ನೋಡಿಲ್ಲ. ನೀವು, ಹುನಗುಂದ ಗ್ರಾಮಕ್ಕೆ ಬಂದಿದ್ದರೆ, ಗ್ರಾಮ ಪಂಚಾಯತಿಯ ಎದುರಿನ ವಡಗಟ್ಟಾ ರಸ್ತೆಗೆ ಬರಬೇಕು, ಅಸಲು, ಇಲ್ಲಿ ಕಾಂಕ್ರೀಟ್ ರಸ್ತೆ ಇದೆ. ಅದ್ರಿಂದ ಹಾಗೇ, ಮುಂದೆ ಬಂದ್ರೆ ಅಲ್ಲಿ ವಿರಕ್ತ ಮಠದ ಪಕ್ಕದ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದೆ. ಮಳೆಗಾಲವಾದ್ರಿಂದ ಗುಂಡಿಯಲ್ಲಿ ನೀರು ತುಂಬಿ ಅಕ್ಷರಶಃ ಕೆರೆಯಂತಾಗಿದೆ. ಈ ಬಗ್ಗೆ ಅದೇಷ್ಟು ಸಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಕ್ಯಾರೇ ಅಂದಿಲ್ಲ ಅನ್ನೋದು ಗ್ರಾಮಸ್ಥರ ಆಕ್ರೋಶವಾಗಿದೆ. ಗುಂಡಿಯಾದ್ರೂ ಮುಚ್ಚಬೇಕಲ್ವಾ..? ಈ ಲೋಕೋಪಯೋಗಿ ಅಧಿಕಾರಿಗಳಿಗೆ ಇವೇಲ್ಲ ಬಹುಶಃ ಕಣ್ಣಿಗೆ ಕಂಡಿಲ್ಲ ಅನಿಸತ್ತೆ. ಭಾರೀ ಪ್ರಮಾಣದ ಗುಂಡಿಗಳು ಬಿದ್ದು ವಾಹನ ಸವಾರರು...
School holiday News; ನಿರಂತರ ಮಳೆ; ಜಿಲ್ಲೆಯ 4 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆ ರಜೆ..!
School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ನಾಳೆ ಜುಲೈ 4 ರಂದು ಉತ್ತರ ಕನ್ನಡ ಜಿಲ್ಲೆಯ 4 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..!
Hebbar News; ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಶಾಸಕ ಶಿವರಾಮ್ ಹೆಬ್ಬಾರ್, ಗ್ರಾಮದ ಅನಾರೋಗ್ಯಕ್ಕೆ ಈಡಾಗಿರೋ ಶಿವಯ್ಯ ತೋಟಯ್ಯ ತೋಟಯ್ಯನವರ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು. ಕೆಲಹೊತ್ತು ಕುಳಿತು ಶಿವಯ್ಯರವರನ್ನು ಮಾತನಾಡಿಸಿ, ದೈರ್ಯ ತುಂಬಿದ್ರು. ಬೇಗ ಗುಣಮುಖರಾಗುವಂತೆ ಹಾರೈಸಿದರು. ಈ ವೇಳೆ ಹಲವರು ಶಾಸಕರಿಗೆ ಸಾಥ್ ನೀಡಿದ್ರು. ಇದನ್ನೂ ಓದಿ👉 ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..! ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!
Death News; ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿದ್ದಾಳೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗಡಿ ಗ್ರಾಮದ ಅನ್ನಪೂರ್ಣ ರಾಮಣ್ಣ ಲಮಾಣಿ(20), ಎಂಬುವವಳೆ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಅಸಲೀ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ👉 ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..! ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!
Shivaram Hebbar; ಮುಂಡಗೋಡ; ಶಾಸಕ ಶಿವರಾಮ ಹೆಬ್ಬಾರ್ ಅವರು ಇಂದು ಹುನಗುಂದ ಗ್ರಾಮದ ವಿರಕ್ತಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಮ.ನಿ.ಪ್ರ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಹಾಗೂ ಮಾತೆ ಬಸವೇಶ್ವರಿ ಬಸವಧಾಮ ಅತ್ತಿವೇರಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ನಿರ್ಲಕ್ಷ ಆರೋಪ PSI ಸಸ್ಪೆಂಡ್..!
PSI Suspended; ಬೆಳಗಾವಿ ಜಿಲ್ಲೆಯ ಇಂಗಳಿ ಗ್ರಾಮದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣದಲ್ಲಿ ಓರ್ವ ಪೊಲೀಸ್ ಅಧಿಕಾರಿ ತಲೆದಂಡವಾಗಿದೆ. ಗೋವು ಸಮೇತ ಠಾಣೆಗೆ ಹೋಗಿದ್ದ ಶ್ರೀರಾಮ ಸೇನೆ ಕಾರ್ಯಕರ್ತರ ದೂರು ಆಲಿಸದೇ, ಫ್ಐಆರ್ ಮಾಡದೇ ಬಿಟ್ಟು ಕಳ್ಸಿ ನಿರ್ಲಕ್ಷ್ಯ ತೋರಿದ ಪಿಎಸ್ಐ ಅಮಾನತುಗೊಂಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್ಐ ನಿಖಿಲ್ ಕಾಂಬ್ಳೆ ಅಮಾನತು ಆಗಿದ್ದು, ಅಮಾನತು ಮಾಡಿ ಎಸ್ಪಿ ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ. ಜೂನ್ 26 ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು. ಈ ವೇಳೆ ಕೇಸ್ ದಾಖಲಿಸದೇ ಬಿಟ್ಟು ಕಳ್ಸಿದ್ದ ಪಿಎಸ್ಐ. ಘಟನೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ತೋರಿದ್ದ ಆರೋಪ, ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಪಿಎಸ್ಐ ಬಿಟ್ಟು ಕಳ್ಸಿದ್ದರು . ಹೀಗಾಗಿ, ಎಲ್ಲ ಅಂಶಗಳನ್ನ ಪರಿಗಣಿಸಿ ಎಸ್ಪಿ ಅಮಾನತು ಆದೇಶ ಮಾಡಿದ್ದಾರೆ. ಜುಲೈ 3ರಂದು ಇಂಗಳಿ ಚಲೋ...
ಬಾಂಬ್ ಸ್ಪೋಟದ ಆರೋಪಿ ಬಂಧನ, 30 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕ ಆರೋಪಿ..!
Suspect Arrested; ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿಯನ್ನು 30 ವರ್ಷಗಳ ಬಳಿಕ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ ಎಂದು ಹೇಳಲಾಗಿದೆ. ಈತ 1995ರಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತ ನಿಷೇಧಿತ ಸಂಘಟನೆಗಳಾದ ತಮಿಳುನಾಡಿದ ಅಲ್ ಉಮ್ಮ ಸೇರಿ ಹಲವು ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ ಆರೋಪಿಯಾಗಿದ್ದ. ಈತನ ಜೊತೆಗಿದ್ದ ಮೊಹಮ್ಮದ್ ಅಲಿಯನ್ನು ಕೂಡಾ ಪೊಲೀಸರು ಬಂಧಿಸಿದ್ದಾರೆ. ಈತ 1999ರಿಂದ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. Suspect Arrested; ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಸಿದ್ದಿಕ್ ಆರೋಪಿಯಾಗಿದ್ದಾನೆ. 1999ರ ಬೆಂಗಳೂರು ಸ್ಫೋಟ, 2013ರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟ, 2011ರಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ನೇತೃತ್ವದ ರಥಯಾತ್ರೆಯ ಮೇಲೆ ಮಧುರೈಯಲ್ಲಿ ನಡೆದ ಪೈಪ್ ಬಾಂಬ್ ದಾಳಿ, 1991ರ ಚೆನ್ನೈ ಹಿಂದೂ ಮುನ್ನಣಿ ಕಾರ್ಯಾಲಯದ ಮೇಲೆ...