ಬೊಮ್ಮಾಯಿಯವ್ರೇ ಸಿಎಂ ಆಗಿದ್ರೂ, ಶಿಶುನಾಳ ಶರೀಫರ ಪ್ರಾಧಿಕಾರ ಯಾಕೆ‌ ಮಾಡಲಿಲ್ಲ ನೀವು..? ಶಿಗ್ಗಾವಿಯಲ್ಲಿ ಯಾಸಿರಖಾನ್ ಪಠಾಣ್ ವಾಗ್ದಾಳಿ..!


ಶಿಗ್ಗಾವಿ; ಬಜೆಟ್ ನಲ್ಲಿ ಶಿಶುನಾಳ ಶರೀಫರ ಪ್ರಾಧಿಕಾರ ಘೋಷಣೆ ಹಿನ್ನೆಲೆ, ಶಿಗ್ಗಾವಿಯಲ್ಲಿ ಕೈ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿತ್ತು. ಶಾಸಕ ಯಾಸೀರ್ ಖಾನ್ ಪಠಾಣ್ ನೇತೃತ್ವದಲ್ಲಿ ಪಟ್ಟಣದ ಚನ್ನಮ್ಮ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ರು.

ಇದೇ ವೇಳೆ ಮಾತನಾಡಿದ ಶಾಸಕ ಯಾಸಿರಖಾನ್ ಫಠಾಣ, ಬೊಮ್ಮಾಯಿಗೆ ಸವಾಲು ಹಾಕಿದ್ರು, ಬೊಮ್ಮಾಯಿಯವ್ರೇ, ಶಿಶುನಾಳ ಶರೀಫರ ಪ್ರಾಧಿಕಾರ ಯಾಕೆ ಮಾಡಲಿಲ್ಲ ನೀವು..? ನಿಮಗೆ ಕೆಲಸ ಮಾಡಲು ಯಾರಾದರೂ ಕೈ ಹಿಡಿದಿದ್ರಾ..? ನಾನು ಏನಾದರೂ ತರಬೇಕು ಅಂದ್ರೆ 10 ಮಂದಿ ಕಾಲು ಹಿಡಿಬೇಕು.. ಆದ್ರೆ, ನಿಮ್ದು ಹಾಗಲ್ಲ, ನೀವು ದೊಡ್ಡ ಸ್ಥಾನದಲ್ಲಿ ಇದ್ದಿರಲ್ವಾ, ಒಂದು ಸಹಿ ಮಾಡಿದ್ರೆ ಆಗತ್ತಿತ್ತು.. ಹಾಗಿದ್ರೆ ಯಾಕೆ ಮಾಡಲಿಲ್ಲ..?

ಬಸವರಾಜ್ ಬೊಮ್ಮಾಯಿ ವೇದಿಕೆಯಲ್ಲಿ ಚರ್ಚೆಗೆ ಬರಲಿ..ನಾನು ದಾಖಲೆಗಳನ್ನ ಕೊಡ್ತೀನಿ,ಅವರು ದಾಖಲೆಗಳನ್ನ ಕೊಡ್ಲಿ..

ನನ್ನ ಕಾಲಾವಧಿಯಲ್ಲಿ ಸಾಮಾನ್ಯ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಆಗಿದೆ. ಚನ್ನಮ್ಮ ಸರ್ಕಲ್ ನಲ್ಲಿ ಅವರು ಬಹಿರಂಗವಾಗಿ ಚರ್ಚೆ ಬರಲಿ. ತಾವು ಅಧಿಕಾರದಲ್ಲಿದ್ದಾಗ ಯಾಕೆ ಬಸ್ ಫ್ರೀ ಮಾಡಲಿಲ್ಲ..ಬಿಜೆಪಿಯವರು ಯಾಕೆ 10 ಕೆಜಿ ಅಕ್ಕಿ ಕೊಟ್ಟಿಲ್ಲ..?

ಶಿಶುನಾಳ ಶರೀಫ ಪ್ರಾಧಿಕಾರ ರಚನೆ ಬಹುದಿನಗಳ ಕನಸಾಗಿತ್ತು, ಶಿಶುನಾಳವನ್ನ ಭಾವೈಕ್ಯ ಕೇಂದ್ರವನ್ನಾಗಿ ಸರಕಾರ ಮಾಡಿದೆ. 36 ರೆಸಿಡೆನ್ಸಿ ಸ್ಕೂಲ್ ಗಳಿಗೆ ಶಿಶುನಾಳ ಶರೀಫರ ಹೆಸರಿಡಲಾಗಿದೆ..ಶಿಶುನಾಳ ಶರೀಫರಿಗೆ ದೊಡ್ಡ ಗೌರವವನ್ನ ಸರಕಾರ ಕೊಟ್ಟಿದೆ. ಕಾರ್ಮಿಕ ರೆಸಿಡೆನ್ಸಿ ಸ್ಕೂಲ್ ಮಂಜೂರು ಮಾಡಲಾಗಿದೆ. ಮಹಿಳಾ ಕಾಲೇಜ್ ಸೇರಿದಂತೆ ಚೆಕ್ ಡ್ಯಾಂ ಗಳಿಗೆ ಅನುದಾನ ನೀಡಿದ್ದಾರೆ. ಸರಕಾರಕ್ಕೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಅಂತಾ ಶಾಸಕ ಪಠಾಣ್ ತಿಳಿಸಿದ್ರು.