ಮುಂಡಗೋಡಿನಲ್ಲಿ ಮತ್ತೊಂದು ಲೋಕಾ ದಾಳಿ, ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ (RI)ಲೋಕಾ ಬಲೆಗೆ..!

ಮುಂಡಗೋಡಿನಲ್ಲಿ ಮತ್ತೊಂದು ಲೋಕಾಯುಕ್ತ ದಾಳಿ ನಡೆದಿದೆ. ಮುಂಡಗೋಡಿನ ಕಂದಾಯ ನಿರೀಕ್ಷಕ ಲೋಕಾ ಬಲೆಗೆ ಬಿದ್ದಿದ್ದಾರೆ. ಬಸವರಾಜ್ ಬಿಸನಾಳ ಎಂಬುವವರೇ ಲೋಕಾ ಬಲೆಗೆ ಬಿದ್ದಿದ್ದು, 15 ಸಾವಿರ ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನಾರಾಯಣ ರಾಮಣ್ಣ ಅರೆಜೋಗಿ ಎಂಬುವ ರೈತ ನೀಡಿದ ದೂರಿನನ್ವಯ ದಾಳಿ ನಡೆದಿದೆ. ಫಾರ್ಮ ಹೌಸ್ ಗೆ ಅನುಮತಿ ನೀಡಲು ಲಂಚ ಕೇಳಿದ್ದರಂತೆ ಕಂದಾಯ ನೀರಿಕ್ಷಕ. ಹೀಗಾಗಿ, ರೈತ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪರಿಣಾಮ ಇಂದು ದಾಳಿ ಮಾಡಿರೋ ಲೋಕಾ ಅಧಿಕಾರಿಗಳು ಇಬ್ಬರು ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ‌.

ಮೂರು ತಂಡಗಳಲ್ಲಿ ದಾಳಿ ಮಾಡಿರೋ ಲೋಕಾ ಅಧಿಕಾರಿಗಳು, ಕಾರವಾರ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.