ಮುಂಡಗೋಡಿನ NMD ಜಮೀರ್ ಅಹ್ಮದ್ ದರ್ಗಾವಾಲೆ ಭೀಕರ ಹತ್ಯೆ ಪ್ರಕರಣದಲ್ಲಿ ಸದ್ಯ 11 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಅದ್ರಂತೆ, ಈ ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸ್ರು, ಬಹುತೇಕ ಮುಂಡಗೋಡಿನಲ್ಲಿ ಇನ್ಮುಂದೆ ಕ್ರಿಮಿನಲ್ ಗಳಿಗೆ ಜಾಗವಿಲ್ಲ ಅಂತಾ ಖಡಕ್ ಎಚ್ಚರಿಕೆ ಕೊಡಲು ತಯಾರಾದ್ರಾ ಅಂತಾ ಅನಿಸ್ತಿದೆ. ಯಾಕಂದ್ರೆ, ಸದ್ಯ ಅರೆಸ್ಟ್ ಆಗಿರೋ ಆರೋಪಿಗಳ ಮನೆಗಳಮೇಲೆ ಇಂದು 7 ತಂಡಗಳಾಗಿ ಪೊಲೀಸ್ರು ದಾಳಿ ಮಾಡಿ ಮನೆ ಸರ್ಚ್ ಮಾಡಿದ್ದಾರೆ.

ಬಂಧಿತರ ಮನೆ ಮೇಲೆ ದಾಳಿ..!
ಅಂದಹಾಗೆ, ಮುಂಡಗೋಡ ಬಡ್ಡಿ ಮಾಫಿಯಾದ ಕಿಂಗ್ ಪಿನ್ NMD ಜಮೀರನ ಹತ್ಯೆ ಕೇಸಲ್ಲಿ, ನಿನ್ನೆಯಷ್ಟೇ ಪೊಲೀಸರು ದಾಳಿ ನಡೆಸಿ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಬಳಸಲಾಗಿತ್ತು. ಅಲ್ದೆ ಈಗಾಗಲೇ 3 ಪಿಸ್ತೂಲ್ ಗಳನ್ನು, 6 ಸಜೀವ ಗುಂಡುಗಳನ್ನು ಪೊಲೀಸ್ರು ಆರೋಪಿಗಳಿಂದ ಜಪ್ತಿ ಮಾಡಿದ್ದರು. ಅಸಲು, ಎರಡು ವರ್ಷದ ಹಿಂದೆಯೇ ಹತ್ಯೆಗೆ ಪ್ಲ್ಯಾನ್ ರಚಿಸಿದ್ದ ಹಂತಕರು, ಅದಕ್ಕಾಗೇ ಅವತ್ತೇ ಕಂಟ್ರಿಮೇಡ್ ಪಿಸ್ತೂಲ್ ಖರೀದಿಸಲು ರೆಡಿಯಾಗಿದ್ದರು. ಹೀಗಾಗಿ, ಪ್ರಮುಖ ಆರೋಪಿ ಮಂಜು ಕಾಜಗಾರಗೆ ಅವತ್ತು ಶಿರಸಿ ಜೈಲಲ್ಲಿ ಪರಿಚಯವಾಗಿದ್ದ “ಪಿಸ್ತೂಲ್ ಕಾ “ದಿಲ್” ರಾಜ್” ನ ಮೂಲಕ ಉತ್ತರ ಪ್ರದೇಶಕ್ಕೆ ಹಾರಿದ್ದರು.

ಆತ “ಪಿಸ್ತೂಲ್ ಕಾ ದಿಲ್ ರಾಜ್”..!
ಅಂದಹಾಗೆ ಎರಡು ವರ್ಷಗಳ ಹಿಂದೆಯೇ “ಪಿಸ್ತೂಲ್ ಕಾ ದಿಲ್ ರಾಜ್” ಮಾರ್ಗದರ್ಶನದಲ್ಲೇ ಪಿಸ್ತೂಲು ಖರೀದಿಸಲು ಕೊಲೆ ಆರೋಪಿ ಮಂಜು ಕಾಜಗಾರ್ ಜೊತೆ ಉತ್ತರ ಪ್ರದೇಶದ ಗೋರಕಪುರಕ್ಕೆ ತೆರಳಿದ್ದವರು ಇದೇ ನಾಲ್ವರು ಆರೋಪಿಗಳು. ತನಿಖೆ ವೇಳೆ ದಿಲ್ ರಾಜ್ ಹಾಗೂ ಮಂಜು ಕಾಜಗಾರ್ ಬಾಯಿಬಿಟ್ಟ ಹಿನ್ನೆಲೆಯಲ್ಲಿ ಪೊಲಿಸ್ರು ಅಲರ್ಟ್ ಆಗಿದ್ದರು. ಹೀಗಾಗಿ ಇವತ್ತು 7 ತಂಡಗಳಲ್ಲಿ ಪೊಲೀಸ್ರು ಆರೋಪಿಗಳ ಮನೆಗಳಮೇಲೆ ದಾಳಿ ಮಾಡಿದ್ದಾರೆ. ಮಾರಕಾಸ್ತ್ರಗಳು ಸೇರಿದಂತೆ ಇನ್ನೂ ಏನಾದ್ರೂ ಕ್ರಿಮಿನಲ್ ಹಿನ್ನೆಲೆಯ ದಾಖಲೆಗಳು ಸಿಗಬಹುದಾ ಅಂತಾ ಸರ್ಚಿಂಗ್ ಮಾಡಿದ್ದಾರೆ.

ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಾಲಗಾಂವಿಯ ಮಂಜು ಕಾಜಗಾರ ಮನೆ, ಮುಂಡಗೋಡ ಕಿಲ್ಲೆ ಓಣಿಯ ಮಲ್ಲಿಕಜಹಾನ @ ಜಹೀರ ತಂದೆ ಶಬ್ಬೀರ ಶೇಖ್, ಮಹಮ್ಮದ ಸಾಧೀಕ ತಂದೆ ಅಬ್ದುಲ್ ರಜಾಕ ದರ್ಗಾವಾಲೆ ಮುಂಡಗೋಡ ಮಾರಿಕಾಂಬಾ ನಗರದ ಅಸಗರ ಅಲಿ ತಂದೆ ಮಕ್ತುಮ ಅಲಿ ದೊಡ್ಮನಿ , ಹಾಗೂ ಸಾಹೀಲ್ ತಂದೆ ಬಾಬಾಬುಡನ್ ಶೇಖ @ ನಂದಿಕಟ್ಟಿ ಸೇರಿದಂತೆ ಆರೋಪಿಗಳಮನೆಗಳ ಮೇಲೆ ದಾಳಿ ನಡೆಸಿ ಸರ್ಚ್ ಮಾಡಿದ್ದಾರೆ.
