ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡಗಟ್ಟಾದಲ್ಲಿ ಗಾವಠಾಣ ಜಾಗ ಅನ್ನೋದು ಕಂಡವರ ಪಾಲಾಗಿದೆ. ಇಲ್ಲಿ ಎಕರೇಗಟ್ಟಲೇ ಬೇಕಾಬಿಟ್ಟಿಯಾಗಿ ಜಾಗ ಕಬಳಿಸಿಕೊಂಡು ಕೆಲವ್ರು ಮುಕ್ಕಾಂ ಹೂಡಿದ್ದಾರೆ. ಹೀಗಾಗಿ, ಸಂಬಂಧ ಪಟ್ಟ ಅಧಿಕಾರಿಗಳು ಈಗ ಎಚ್ಚರಗೊಂಡಿದ್ದಾರೆ. ವಡಗಟ್ಟಾದ ಗಾವಠಾಣ ಜಾಗದಲ್ಲಿನ ಒತ್ತುವರಿ ತೆರವು ಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಇವತ್ತು..!
ಅಂದಹಾಗೆ, ಇವತ್ತು ಮಂಗಳವಾರ ಮುಂಡಗೋಡ ತಾಲೂಕಾ ಪಂಚಾಯತಿ ಇಒ ಟಿ.ವೈ ದಾಸನಕೊಪ್ಪ ನೇತ್ರತ್ವದಲ್ಲಿ ಅಧಿಕಾರಿಗಳು,ಸಿಬ್ಬಂದಿಗಳ ತಂಡ ವಡಗಟ್ಟಾ ಗ್ರಾಮದ ಗಾವಠಾಣ ಜಾಗಕ್ಕೆ ಬಂದಿದ್ದರು. ಇಲ್ಲಿ ಮನಬಂದಂತೆ, ಬೇಕಾಬಿಟ್ಟಿಯಾಗಿ ಗಾವಠಾಣ ಜಾಗವನ್ನು ಒತ್ತುವರಿ ಮಾಡಿಕೊಂಡು ಕುಳಿತಿದ್ದವರಿಗೆ ಶಾಕ್ ನೀಡಿದ್ದಾರೆ. ಎಕೆರೆಗಟ್ಟಲೇ ಜಮೀನನ್ನು ಕಬಳಿಸಿದ್ದ ಜಾಗವನ್ನು ಖುಲ್ಲಾ ಪಡಿಸಲು ನಾಂದಿ ಹಾಡಿದ್ದಾರೆ.

ಮನೆಯ ಜಾಗಗಳೋ..?
ಅಸಲು, ಈ ವಡಗಟ್ಟಾ ಗ್ರಾಮದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಹ ಸ್ಥಿತಿ ಇತ್ತು, ಬಾಚಣಕಿ ಗ್ರಾಮ‌ ಪಂಚಾಯತಿ ಬಹುಶಃ ಈ ವಡಗಟ್ಟಾ ಅನ್ನೋ ಗ್ರಾಮವೊಂದಿತ್ತು ಅನ್ನೋದನ್ನೆ ಮರೆತಂತಿತ್ತು. ಈ ಕಾರಣಕ್ಕೆ ಇಲ್ಲಿ ಹಲವರು ಬೇಕಾಬಿಟ್ಟಿಯಾಗಿ ಗಾವಠಾಣ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಆದ್ರೆ ಈಗಷ್ಟೆ ಎಚ್ಚೆತ್ತುಕೊಂಡಿರೋ ಅಧಿಕಾರಿಗಳು, ಒತ್ರುವರಿ ತೆರವು ಕಾರ್ಯಕ್ಕೆ ಇಳಿದಿದ್ದಾರೆ.

ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಬಾಚಣಕಿ ಗ್ರಾ.ಪಂ ಆಡಳಿತಾಧಿಕಾರಿ, ಪಿಡಿಓ, ಪಂಚಾಯತ ವ್ಯವಸ್ಥಾಪಕರು ಮತ್ತು ಸರ್ವೇ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದು ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಿದ್ದಾರೆ.