ಮುಂಡಗೋಡಿನಲ್ಲಿ NMD ಜಮೀರ ಅಹ್ಮದ್ ದರ್ಗಾವಾಲೆಯ ಭೀಕರ ಹತ್ಯೆಯಾಗಿದೆ. ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೆಲ್ಲಿನಲ್ಲಿ ರಣಭೀಕರವಾಗಿ ಹತ್ಯೆ ಮಾಡಲಾಗಿದೆ. ಮೊದಲಿಗೆ ಗುಂಡು ಹಾರಿಸಿ ನಂತರ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಇನ್ನು ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪಿಎಸ್ಐ ಮಂಜುನಾಥ ಗೌಡರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿರಸಿ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇನ್ನು ಹತ್ಯೆಯಾದ NMD ಜಮೀರನ ಶವವನ್ನು ಅಂಬುಲೆನ್ಸ್ ಮೂಲಕ ತಾಲೂಕಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಪ್ರಮುಖ ಸುದ್ದಿ; ಮುಂಡಗೋಡಿನಲ್ಲಿ ಭೀಕರ ಹತ್ಯೆ, NMD ಜಮೀರ್ ಅಹ್ಮದ್ ದರ್ಗಾವಾಲೆಯ ಹತ್ಯೆ..! ಬಸ್ ಸ್ಟಾಂಡ್ ಎದುರಿನ ಹೊಟೆಲ್ ನಲ್ಲೇ ಘಟನೆ..!
