ಇಂದಿನಿಂದ ಜಿಲ್ಲೆಯಲ್ಲಿ ಮನೆಗಳ ಗಣತಿ ಕಾರ್ಯ ಶುರು; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ

ಕಾರವಾರ; ಭಾರತೀಯ ಜನಗಣತಿ ಪ್ರಯುಕ್ತ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವು ಏ.16 ರಿಂದ ಮೇ.15 ರವರೆಗೆ ನಡೆಯಲಿದ್ದು, ಸದ್ರಿ ಕಾರ್ಯಕ್ಕೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3216 ಮನೆಯ ಪಟ್ಟಿಯ ಬ್ಲಾಕ್‌ಗಳಿದ್ದು, ಈ ಬ್ಲಾಕ್‌ಗಳಿಗೆ 3255 ಗಣತಿದಾರರು ಹಾಗೂ 586 ಮೇಲ್ವಿಚಾರಕರಿಗೆ ಗಣತಿ ಕಾರ್ಯವನ್ನು ನಿರ್ವಹಿಸಿಲು ನೇಮಕ ಮಾಡಲಾಗಿದೆ.

ಸದ್ರಿಯವರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಮಾಹಿತಿಯನ್ನುಯ ಒದಗಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ತಿಳಿಸಿದೆ. ಸಾರ್ವಜನಿಕರು ನೀಡಿದ ಮಾಹಿತಿಯು ಸುರಕ್ಷಿತ ಹಾಗೂ ಗೌಪ್ಯವಾಗಿ ಉಳಿಯುತ್ತದೆ. ಈ ಗಣತಿಯ ಮಾಹಿತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಪ್ರಧಾನ ಗಣತಿ ಅಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.