ಮುಂಡಗೋಡ: ಮುಂಬರುವ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಕಾನೂನು-ಸುವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ, ಮುಂಡಗೋಡ ಪೊಲೀಸ್ ಠಾಣೆಯ ವತಿಯಿಂದ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಂಡಗೋಡ ಪಿಐ ರಮೇಶ್ ಹನಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಟ್ಟಣದ ಗಣ್ಯ ಮುಖಂಡರು ಭಾಗವಹಿಸಿದ್ದರು. ಶಾಂತಿ ಮತ್ತು ಸುವ್ಯವಸ್ಥೆ..! ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ...
Top Stories
ಮುಂಡಗೋಡ (ಕ್ರೈಂ) ಪಿಎಸ್ಐ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್ಐ ಗಳು ಸಸ್ಪೆಂಡ್..! “ಮಂತ್ಲಿ ಡೀಲಿಂಗ್” ಆಡಿಯೋ ವೈರಲ್ ಹಿನ್ನೆಲೆ ; ಎಸ್ಪಿ ದೀಪನ್ ದಿಟ್ಟ ಕ್ರಮ..!
ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!
ಈದ್ ಮೀಲಾದ್ ಹಬ್ಬದ ಸಂಭ್ರಮಕ್ಕೂ ಮುನ್ನ ಖಾಕಿ ಪಡೆ ಸಜ್ಜು..! ಮುಂಡಗೋಡದಲ್ಲಿ ಪೊಲೀಸರ ರೂಟ್ ಮಾರ್ಚ್ ಮೂಲಕ ಭದ್ರತೆಯ ಭರವಸೆ..!
ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!
ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!
NMD ಜಮೀರ್ ಬರ್ಬರ ಹತ್ಯೆ ಕೇಸ್..! ಮತ್ತೋರ್ವ ಪ್ರಮುಖ ಆರೋಪಿ ಅರೆಸ್ಟ್..! ಕಾಜಗಾರ ಮಂಜುಗೆ ಕಂಟ್ರಿಮೇಡ್ ಪಿಸ್ತೂಲ್ ಸಪ್ಲೈ ಮಾಡಿದ್ದವ ಅಂದರ್..!
ಮುಂಡಗೋಡ ಹಿಂದೂ ಮಹಾಗಣಪತಿ 2026: ಅಧಿಕೃತ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ..!
ಎತ್ತಂಗಡಿಯಾಗಿದ್ದ ACF ರವಿ ಹುಲಕೋಟಿ ಕೇಸು ಕೋರ್ಟಲ್ಲಿ ವಜಾ ಆಯ್ತಂತೆ..! ನೂತನ ACF ಈರೇಶ್ ಎಂ. ಕಬ್ಬಿನ್ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ..!
ಮುಂಡಗೋಡ ತಾಲೂಕಿನ ಕೊಪ್ಪದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ..! ಸೊಸೈಟಿ ಗೋಡೌನ್‌ನ ಧ್ವಜಾರೋಹಣದಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ..!
ಕಾತೂರಿನಲ್ಲಿ ನೇಣಿಗೆ ಶರಣಾದ್ನಾ ನಂದಿಪುರದ ಯುವಕ..? ಖುಷಿಖುಷಿಯಾಗಿ ಚಿಕನ್ ತರ್ತಿನಿ ಅಂತಾ ಹೋಗಿದ್ದವ ಸಾವು ಕಂಡ..!
ಕಳ್ಳತನಕ್ಕೆ ಕಡಿವಾಣ ಹಾಕಲು ಮುಂಡಗೋಡ ಖಾಕಿ ಆಕ್ಷನ್..! ಖುದ್ದು ಇನ್ಸ್ಪೆಕ್ಟರ್ ರಮೇಶ್ ಹನಾಪುರ ನೇತೃತ್ವದಲ್ಲಿ ನೈಟ್ ಪೆಟ್ರೋಲಿಂಗ್..!
ಮುಂಡಗೋಡಕ್ಕೆ ಕಳ್ಳರ ಎಂಟ್ರಿಗೆ ಬ್ರೇಕ್..! ಸರಣಿ ಕಳ್ಳತನ ಕಂಡು ರೊಚ್ಚಿಗೆದ್ದ ಖಾಕಿ; ತಾಲೂಕಿಗೆ ಅಷ್ಟ ದಿಗ್ಬಂಧನ, ನಾಲ್ಕೂ ದಿಕ್ಕುಗಳಲ್ಲಿ ನಾಕಾಬಂದಿ..! ಸಾರ್ವಜನಿಕರೂ ಸಾಥ್..!
ಅಯ್ಯೋ ದೇವ್ರೇ, ಇವತ್ತು ಮುಂಡಗೋಡ ತಾಲೂಕಿನಲ್ಲಿ ಕಳ್ಳತನವಾಗಿದ್ದು ಎರಡಲ್ಲ, ಮೂರು ಕೇಸ್..! ಕರಗಿನಕೊಪ್ಪದ ಸೇವಾಲಾಲ್ ಮಂದಿರದ ಹುಂಡಿ ಕಳ್ಳತನ..!
ಮುಂಡಗೋಡ ತಾಲೂಕಿನಲ್ಲಿ ಮತ್ತೇ ಎರಡು ಕಳ್ಳತನ..! ಬಾಚಣಕಿ ದೇವಸ್ಥಾನ ಹಾಗೂ ನಂದಿಪುರದಲ್ಲಿ ಅಂಗಡಿ ದೋಚಿದ ಕಳ್ಳರು..! ದೇವ್ರೇ ನೀನೇ ಕಾಪಾಡು..!
ಮುಂದಿನ ಎರಡು ದಿನಗಳ ಕಾಲ ಉತ್ತರ ಕನ್ನಡ ಸೇರಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ; ಆರೆಂಜ್ ಅಲರ್ಟ್ ಘೋಷಣೆ..!
ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು; 3 ಅಂತರ್ರಾಜ್ಯ ಕಳ್ಳರ ಬಂಧನ, 52.70 ಲಕ್ಷ ರೂ. ಮೌಲ್ಯದ ಬೆಳ್ಳಿ ವಶ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.100 ರಷ್ಟು ಎನುಮರೇಷನ್ ಫಾರಂ ಗಣಕೀಕರಣ..!
ಶುಕ್ರವಾರ ದಿ.7 ರಂದು ಮುಂಡಗೋಡಕ್ಕೆ ಸಚಿವ ಲಕ್ಷ್ಮಣ ಸವದಿ ಭೇಟಿ, ಅಧಿಕಾರಿಗಳೊಂದಿಗೆ ಸಭೆ, ಮಳೆ ಹಾನಿ ಪ್ರದೇಶಗಳ ಪರಿಶೀಲನೆ..!
ಮುಂಡಗೋಡ ಪೊಲೀಸ್ರ ಚಾಣಾಕ್ಷ ಕಾರ್ಯ, ಕೊನೆಗೂ ಸಿಕ್ಕಿಬಿದ್ದ “ಇರಾನಿ ಗ್ಯಾಂಗ್” ನ ಓರ್ವ ಕಳ್ಳ “ಮೊಹಮ್ಮದ್”..! ಮತ್ತೋರ್ವ ಪರಾರಿ, “ಥ್ಯಾಂಕ್ಯೂ ಪೊಲೀಸ್ರೇ” ಅಂದ್ರು ಜನ..!
Category: ಮುಂಡಗೋಡ ಸುದ್ದಿ
ಮುಂಡಗೋಡ (ಕ್ರೈಂ) ಪಿಎಸ್ಐ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್ಐ ಗಳು ಸಸ್ಪೆಂಡ್..! “ಮಂತ್ಲಿ ಡೀಲಿಂಗ್” ಆಡಿಯೋ ವೈರಲ್ ಹಿನ್ನೆಲೆ ; ಎಸ್ಪಿ ದೀಪನ್ ದಿಟ್ಟ ಕ್ರಮ..!
ಮುಂಡಗೋಡ: ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆಯ ಪೋಸ್ಟಿಂಗ್‌ಗಾಗಿ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಕ್ರೈಂ ಪಿಎಸ್ಐ ಆಗಿದ್ದ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ. ಮೂವರು ಸಸ್ಪೆಂಡ್..! ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ, ಹಳಿಯಾಳದ L&O ಪಿಎಸ್‌ಐ ಕಿರಣ್ ಪಾಟೀಲ್ ಹಾಗೂ ಕ್ರೈಂ ವಿಭಾಗದ ಪಿಎಸ್‌ಐ ಕೃಷ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಈ ಮೂವರು ಅಧಿಕಾರಿಗಳ ನಡುವೆ ನಡೆದ ಮಾತುಕತೆ...
ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!
ಮುಂಡಗೋಡ: ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರ ವಿರುದ್ಧ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜೂಜಾಟಕ್ಕೆ ಬಳಸಿದ್ದ ₹6,700 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಆ.27ರಂದು ಬೆಳಗಿನ ಜಾವ ಸುಮಾರು 3.10 ಗಂಟೆಗೆ ಕಾಳಗಿನಕೊಪ್ಪ ಗಣಪತಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಐವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ...
ಈದ್ ಮೀಲಾದ್ ಹಬ್ಬದ ಸಂಭ್ರಮಕ್ಕೂ ಮುನ್ನ ಖಾಕಿ ಪಡೆ ಸಜ್ಜು..! ಮುಂಡಗೋಡದಲ್ಲಿ ಪೊಲೀಸರ ರೂಟ್ ಮಾರ್ಚ್ ಮೂಲಕ ಭದ್ರತೆಯ ಭರವಸೆ..!
ಮುಂಡಗೋಡ: ಈದ್ ಮೀಲಾದ್ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುಂಡಗೋಡ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಹಬ್ಬದ ಮುನ್ನಾದಿನವೇ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರೂಟ್ ಮಾರ್ಚ್ ನಡೆಸಿ ಶಾಂತಿ–ಸುವ್ಯವಸ್ಥೆಯ ಸಂದೇಶ ಸಾರಿದರು. ಪೊಲೀಸ್ ಠಾಣೆಯಿಂದ ಆರಂಭಗೊಂಡ ರೂಟ್ ಮಾರ್ಚ್ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಾಗಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮವಸ್ತ್ರದ ರೂಟ್ ಮಾರ್ಚ್ ಸಾರ್ವಜನಿಕರ ಗಮನ ಸೆಳೆಯಿತು. ಹಬ್ಬದ ಸಂದರ್ಭದಲ್ಲಿ ಶಾಂತಿ,...
ಮುಂಡಗೋಡದಲ್ಲಿ ರಾಯಣ್ಣ ಮೂರ್ತಿ–ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ವಿವಾದ; ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ..!
ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಆಂಜನೇಯ ದೇವಸ್ಥಾನದ ಸಮೀಪ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ವಿವಾದಿತ ಸ್ಥಳಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆಯ ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇದೇ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ಕೆಲವರು...
ಟಿಬೇಟನ್ ಕಾಲೋನಿಯಲ್ಲಿ ಕಟ್ಟಡದಿಂದ ಬಿದ್ದು ಯುವ ಕಾರ್ಮಿಕ ದಾರುಣ ಸಾವು..! ಎರಡು ತಿಂಗಳಲ್ಲಿ ಎರಡು ಹೆಣ..! ಕಾರ್ಮಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ..!
ಮುಂಡಗೋಡ: ತಾಲೂಕಿನ ಟಿಬೇಟನ್ ಕಾಲೋನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಯುವ ಕಟ್ಟಡ ಕಾರ್ಮಿಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಬಸಾಪುರ ಗ್ರಾಮದ ಸಂದೇಶ ನಾಗರಾಜ ಚಲವಾದಿ (23) ಎಂದು ಗುರುತಿಸಲಾಗಿದೆ. ಲಾಮಾ ಕ್ಯಾಂಪ್ ನಂಬರ್-1ರಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ...
ಮುಂಡಗೋಡ ಹಿಂದೂ ಮಹಾಗಣಪತಿ 2026: ಅಧಿಕೃತ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ..!
ಮುಂಡಗೋಡಿನ ಪ್ರತಿಷ್ಠಿತ ಹಿಂದೂ ಮಹಾಗಣಪತಿ ಕಾರ್ಯಕ್ರಮದ 2026 ನೇ ವರ್ಷದ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ. ಮಂಗಳವಾರ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ನೂತನ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಸಂಘಟನೆಯಲ್ಲಿ ಹೊಸ ಉತ್ಸಾಹ ಮೂಡಿದೆ. ನೂತನ ಪದಾಧಿಕಾರಿಗಳು..! ಸಭೆಯ ಪ್ರಮುಖ ಘಟ್ಟದಲ್ಲಿ ಮುಂಬರುವ ಕಾರ್ಯಕ್ರಮದ ನಿರ್ವಹಣೆಗಾಗಿ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. 2026 ನೇ ಹಿಂದು ಮಹಾ ಗಣಪತಿ ಉತ್ಸವದ ಅಧ್ಯಕ್ಷರಾಗಿ, ತಂಗಂ ಚಿನ್ನಣ್ಣ ಆಯ್ಕೆಯಾಗಿದ್ದಾರೆ, ಅದ್ರಂತೆ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗೌಳಿ,...
ಎತ್ತಂಗಡಿಯಾಗಿದ್ದ ACF ರವಿ ಹುಲಕೋಟಿ ಕೇಸು ಕೋರ್ಟಲ್ಲಿ ವಜಾ ಆಯ್ತಂತೆ..! ನೂತನ ACF ಈರೇಶ್ ಎಂ. ಕಬ್ಬಿನ್ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ..!
ಮುಂಡಗೋಡ ACF ಈರೇಶ್ ಎಂ. ಕಬ್ಬಿನ್ ಮತ್ತೆ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಾರೆ. ಕಳೆದ ತಿಂಗಳು 17 ರಂದೇ ವರ್ಗಾವಣೆಗೊಂಡು ಬಂದಿದ್ದ ಕಬ್ಬಿನ್ ರವರಿಗೆ, ಇಲ್ಲಿಂದ ವರ್ಗಾವಣೆಗೊಂಡಿದ್ದ ACF ರವಿ ಹುಲಕೋಟಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ, ಕಬ್ಬಿನ್ ರವರು ತಾಲೂಕಿಗೆ ಬರಲು ಕೊಂಚ ತಡೆಯಾಗಿತ್ತು. ಆದ್ರೆ, ಕೋರ್ಟ್ ಸಮಗ್ರ ವಿಚಾರಣೆ ಬಳಿಕ ಹಳೆಯ ಸಾಹೇಬ್ರು ಹಾಕಿದ್ದ ಕೇಸನ್ನು ವಜಾ ಮಾಡಿದೆ. ಜೊತೆಗೆ ಅವತ್ತು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ, ಹೀಗಾಗಿ, ಮತ್ತೀಗ ಈರೇಶ್ ಕಬ್ಬಿನ್...
ಮುಂಡಗೋಡ ತಾಲೂಕಿನ ಕೊಪ್ಪದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ..! ಸೊಸೈಟಿ ಗೋಡೌನ್‌ನ ಧ್ವಜಾರೋಹಣದಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ..!
ಮುಂಡಗೋಡ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಪ್ಪ ಗ್ರಾಮದ ಸೊಸೈಟಿ ಗೋಡೌನ್ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದಾರೆ. ಇದು ಒಂದು ಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಆತಂಕಕ್ಕೂ ಕಾರಣವಾಗಿತ್ತು. ಇಂದೂರು ಸೊಸೈಟಿ ಮುಂದಾಳತ್ವದಲ್ಲಿ..! ಅಂದಹಾಗೆ, ಇಂದೂರು ಸೊಸೈಟಿ ಆಡಳಿತದ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಸರಿ ಬಣ್ಣ ಕೆಳಭಾಗದಲ್ಲಿದ್ದು, ಹಸಿರು ಬಣ್ಣ ಮೇಲ್ಭಾಗದಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ನಿರ್ಲಕ್ಷವಲ್ಲವಾ..? ಸ್ವಾತಂತ್ರ್ಯೋತ್ಸವದಂತಹ...
ಕಾತೂರಿನಲ್ಲಿ ನೇಣಿಗೆ ಶರಣಾದ್ನಾ ನಂದಿಪುರದ ಯುವಕ..? ಖುಷಿಖುಷಿಯಾಗಿ ಚಿಕನ್ ತರ್ತಿನಿ ಅಂತಾ ಹೋಗಿದ್ದವ ಸಾವು ಕಂಡ..!
ಮುಂಡಗೋಡ ತಾಲೂಕು ಕಾತೂರಿನ ಆಲಳ್ಳಿ ರಸ್ತೆ ಪಕ್ಕದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತನನ್ನು ನಂದಿಪುರ ಗ್ರಾಮದ ಮಾರುತಿ ಕರಿಯಪ್ಪ ತಳವಾರ (26) ಎಂದು ಗುರುತಿಸಲಾಗಿದೆ. ಘಟನೆ ನಿನ್ನೆ ಸಂಜೆ ನಡೆದಿದ್ದು, ಮಾರುತಿ ಕಾತೂರಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ‘ಕಾತೂರಿಗೆ ಹೋಗಿ ಬರ್ತೀನಿ’ ಎಂದು ಮನೆಯಿಂದ ಹೊರಟಿದ್ದ ಮಾರುತಿ, ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ಮಾರುತಿ ಉಡುಪಿಯ...









