ಮುಂಡಗೋಡ ತಾಲೂಕಿನಲ್ಲಿ ಮತ್ತೇ ಎರಡು ಕಳ್ಳತನ..! ಬಾಚಣಕಿ ದೇವಸ್ಥಾನ ಹಾಗೂ ನಂದಿಪುರದಲ್ಲಿ ಅಂಗಡಿ ದೋಚಿದ ಕಳ್ಳರು..! ದೇವ್ರೇ ನೀನೇ ಕಾಪಾಡು..!

ಮುಂಡಗೋಡ ತಾಲೂಕಿನಲ್ಲಿ ಮತ್ತೆ ಎರಡು ಕಡೆ ಕಳ್ಳತನವಾಗಿದೆ. ತಾಲೂಕಿನ ಬಾಚಣಕಿ ದೇವಸ್ಥಾನ ಹಾಗೂ ನಂದಿಪುರ ಗ್ರಾಮದಲ್ಲಿ ಕಳ್ಳರು ಮತ್ತೆ ಕೈಚಳಕ ತೋರಿಸಿ ಹೋಗಿದ್ದಾರೆ. ಹೀಗಾಗಿ, ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ನಿಲ್ಲುವ ಯಾವುದೇ ಸೂಚನೆಗಳು ಸದ್ಯಕ್ಕೆ ಕಾಣುತ್ತಿಲ್ಲ.

ದೇವಸ್ಥಾನದ ಹುಂಡಿ ಕದ್ದರು..!
ಬಾಚಣಕಿ ಗ್ರಾಮದಲ್ಲಿ ಮರಿಯಮ್ಮ ದೇವಸ್ಥಾನದ ಬೀಗ ಮುರಿದು ಒಳನುಗ್ಗಿರೋ ಕಳ್ಳರು, ಕಾಣಿಕೆ ಪೆಟ್ಟಿಗೆಯನ್ನೇ ಹೊತ್ತುಕೊಂಡು ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಆ ಕಾಣಿಕೆ ಡಬ್ಬಿಯನ್ನ ತೆಗೆದಿರಲೇ ಇಲ್ಲ. ಹೀಗಾಗಿ, ಹಣ ಸ್ವಲ್ಪ ಜಾಸ್ತಿನೇ ಹೋಗಿರಬಹುದು ಅನ್ನೋ ಅನುಮಾನ ಇದೆ.

ನಂದಿಪುರದಲ್ಲಿ..!
ಇನ್ನು ನಂದಿಪುರ ಗ್ರಾಮದ ಶ್ರೀನಿವಾಸ್ ಎಂಬುವವರ ಅಂಗಡಿಯೊಂದಕ್ಕೆ ಬೀಗ ಮುರಿದು ಕಳ್ಳರು ನುಗ್ಗಿದ್ದಾರೆ. ಅಂಗಡಿಯೊಳಗೆ ಎನೇನು ಕದ್ದು ಹೋಗಿದ್ದಾರೆ ಅನ್ನೋದು ಪೊಲೀಸ್ರು ಬಂದು ನೋಡಿದಾಗಲಷ್ಟೇ ಬಹಿರಂಗವಾಗಲಿದೆ. ಅಸಲು, ಇವತ್ತು ರಾತ್ರಿಯೊಂದರಲ್ಲೇ ಈ ಎರಡು ಪ್ರಕರಣಗಳು ನಡೆದಿವೆ. ಎಂದಿನಂತೆ ಪೊಲೀಸ್ರು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಆದ್ರೆ, ಘಟನೆಗಳು ಮಾತ್ರ ಖುಲ್ಲಂ ಖುಲ್ಲಾ..!

ಇರಾನಿ “ಮೊಹಮ್ಮದ್” ಎಲ್ಲಿ ಹೋದ..?
ದುರಂತ ಅಂದ್ರೆ, ಮುಂಡಗೋಡ ಪಟ್ಟಣದಲ್ಲಿ ಮೊನ್ನೆ ಹಾಡಹಗಲೇ ಕಳ್ಳತನ ಮಾಡಿದ್ದ ಇರಾನಿ ಗ್ಯಾಂಗ್ ನ ಕಳ್ಳ ಮೊಹಮ್ಮದ ಸೇಫ್ ಆಗಿ ಮತ್ತೆ ತನ್ನ ಕಾಯಕಕ್ಕೆ ಇಳಿದಿದ್ದಾನೆ. ಆತನು ಅಂತಹ ದೊಡ್ಡ ಕಳ್ಳನಲ್ಲ‌ ಅನ್ನೊ ಕಾರಣಕ್ಕೆ ಆತನಿಗೆ ಸಿಂಪಲ್ಲಾಗಿ ಬೇಲ್ ಸಿಕ್ಕಿದೆ. ಅಸಲು, ಅವತ್ತಿನ ಘಟನೆಯಲ್ಲಿ ಇಬ್ಬರ ಪೈಕಿ ತಪ್ಪಿಸಿಕೊಂಡವನೇ ದೊಡ್ಡ ಕಳ್ಳನಂತೆ, ಆತ ನಮ್ಮ‌ ಪೊಲೀಸ್ರಿಗೆ ಸಿಗಲೇ ಇಲ್ಲ. ಹೀಗಾಗಿ, “ಗುಡ್ಡ ಅಗೆದು ಹಿಲಿ ಹಿಡಿದ ಹಾಗೆ” ಸಿಕ್ಕವನನ್ನೇ ಕರೆತಂದು ಹಾಗೇ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ ನಮ್ಮ ಪೊಲೀಸ್ರು.

ಛೇ ಬದುಕೊದಾದ್ರೂ ಹೇಗೆ..?
ಮುಂಡಗೋಡಿನಲ್ಲಿ ಕಳೆದ 15 ದಿನದಲ್ಲೇ 5 ಕಳ್ಳತನ ಪ್ರಕರಣಗಳು ನಡೆದು ಹೋಗಿವೆ. ಆದ್ರೆ, ಅದ್ರಲ್ಲಿ ಅದೇನೊ ಇರಾನಿ ಗ್ಯಾಂಗ್ ನ ಅವನೊಬ್ಬನನ್ನ ಹಿಡಿದು ತಂದಿದ್ದರು ಪೊಲೀಸ್ರು. ಅದರ ಹೊರತಾಗಿ ಇನ್ನುಳಿದ ಯಾವ ಪ್ರಕರಣಗಳೂ ಇನ್ನೂ “ಹೇಗಾಯ್ತು..? ಅನ್ನೋ ಕನಿಷ್ಟ ಖಬರನ್ನೂ ಹೆಕ್ಕಿ ತೆಗೆಯಲು ಸಾಧ್ಯವಾಗಿಲ್ಲ. ಅದರ ನಡುವೆ ಮತ್ತೆ ಇವತ್ತು ಎರಡು ಪ್ರಕರಣಗಳು ನಡೆದು ಹೋಗಿದೆ. ಇದೂ ಕೂಡ ಮತ್ತೆ ಮರೆತು ಹೋಗತ್ತೆ ಬಿಡಿ. ಹೀಗಿದ್ದಾಗ ನಮ್ಮ ಮುಂಡಗೋಡ ತಾಲೂಕು ಕಳ್ಳಕಾಕರಿಗೆ ತವರು ಮನೆ ಆಯ್ತಾ..? ಒಟ್ನಲ್ಲಿ ಆತಂಕದಲ್ಲಿದೆ ಮುಂಡಗೋಡ ತಾಲೂಕಿನ ಜನತೆ..! ಯಾರಿಗೆ ಹೇಳೋದು ನಮ್ಮ ಪ್ರಾಬ್ಲೆಮ್ಮು..?