ಮುಂಡಗೋಡ ತಾಲೂಕಿನಲ್ಲಿ ಸರಣಿ ಕಳ್ಳತನ ಪ್ರಕರಣಗಳ ಆತಂಕದ ನಡುವೆ ಮುಂಡಗೋಡ ಪೊಲೀಸ್ರು ಮತ್ತಷ್ಟು ಅಲರ್ಟ್ ಆಗಿದ್ದಾರೆ. ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹಾಗೂ ತಪಾಸಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇಲ್ಲಿನ ಪಿಐ ರಮೇಶ ಹನಾಪುರ ನೇರವಾಗಿ ಫಿಲ್ಡಿಗೆ ಇಳಿದು ಜನರೊಟ್ಟಿಗೆ ಬೆರೆತಿದ್ದಾರೆ. ಜನರ ನೋವಿಗೆ ಸ್ಪಂಧಿಸಿದ್ದಾರೆ. ನಿಮ್ಮೊಂದಿಗೆ ನಾನಿದ್ದಿನಿ, ಭಯ ಬೇಡ ಅನ್ನೋ “ಅಭಯ” ನೀಡಿದ್ದಾರೆ.

ಯಸ್, ಮುಂಡಗೋಡ ತಾಲೂಕಿನ ಕೋಡಂಬಿ, ಓಣಿಕೇರಿ ಹಾಗೂ ಚೌಡಳ್ಳಿ ಗ್ರಾಮಗಳಲ್ಲಿ ಖುದ್ದು ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಹನಾಪುರ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ಗಸ್ತು ಸಂಚರಿಸುತ್ತಿದ್ದಾರೆ. ಗ್ರಾಮಗಳ ಪ್ರಮುಖ ರಸ್ತೆಗಳು, ಸಂಪರ್ಕ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ವಿಶೇಷ ನಿಗಾ ವಹಿಸುತ್ತಿದ್ದಾರೆ.

ರಾತ್ರಿ ವೇಳೆ ಖಾಕಿ ಪಡೆ ಫೀಲ್ಡ್ಗೆ..!
ಕಳ್ಳತನದಂತಹ ಅಪರಾಧಗಳನ್ನು ತಡೆಯಲು ರಾತ್ರಿ ವೇಳೆಯೇ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಚಲನವಲನದ ಮೇಲೆ ಪೊಲೀಸರು ನಿಗಾ ಇಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೇರಿಕೊಂಡು ರಾತ್ರಿ ಗಸ್ತು ನಡೆಸುತ್ತಿರುವುದು ಗ್ರಾಮಸ್ಥರಲ್ಲೂ ಭದ್ರತೆಯ ಭಾವನೆ ಮೂಡಿಸಿದೆ.

ಚೆಕ್ಪೋಸ್ಟ್ಗಳ ಮೂಲಕ ಕಣ್ಣಿಟ್ಟ ಖಾಕಿ..!
ಇದರ ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ಏರ್ಪಾಟು ಮಾಡಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳು ಹಾಗೂ ಅನುಮಾನಾಸ್ಪದ ಚಲನವಲನಗಳ ಬಗ್ಗೆ ಪೊಲೀಸರು ತೀವ್ರ ನಿಗಾ ಇಡುತ್ತಿದ್ದಾರೆ. ಯಾವುದೇ ಅಪರಾಧಿ ತಂಡಗಳು ಅಥವಾ ಕಳ್ಳರು ತಾಲೂಕಿನಲ್ಲಿ ಓಡಾಡದಂತೆ ಮುಂಜಾಗ್ರತಾ ಕ್ರಮವಾಗಿ ಈ ತಪಾಸಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಪೊಲೀಸ್ರ ಜೊತೆ ಸಾರ್ವಜನಿಕರೂ ಸಾಥ್..!
ಕಳ್ಳತನ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರವೂ ಪ್ರಮುಖವಾಗಿದ್ದು, ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಾಹನಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗುತ್ತಿದೆ. ‘ನಮ್ಮ ಊರು–ನಮ್ಮ ಸುರಕ್ಷತೆ’ ಎನ್ನುವ ಮನೋಭಾವದೊಂದಿಗೆ ಪೊಲೀಸರು ಹಾಗೂ ಸಾರ್ವಜನಿಕರು ಕೈಜೋಡಿಸಿದರೆ ಕಳ್ಳತನ ಪ್ರಕರಣಗಳಿಗೆ ಮತ್ತಷ್ಟು ಕಡಿವಾಣ ಹಾಕಬಹುದು ಎಂಬುದು ಪೊಲೀಸರ ಆಶಯ.

ಥ್ಯಾಂಕ್ಯೂ ಪಿಐ ರಮೇಶ ಹನಾಪುರ..!
ಅಸಲು, ಮುಂಡಗೋಡ ತಾಲೂಕಿನಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿದ್ದವು. ಇಡೀ ತಾಲೂಕಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು, ಇದನ್ನರಿತ ಮುಂಡಗೋಡ ಪಿಐ ರಮೇಶ್ ಹನಾಪುರ ತಕ್ಷಣವೇ ಅಲರ್ಟ್ ಆಗಿದ್ರು. ತಮ್ಮ ಸಿಬ್ಬಂದಿಗಳಿಗೆ ಖಡಕ್ ಸೂಚನೆ ಕೊಟ್ಟು ತಾಲೂಕಿನೆಲ್ಲಡೆ ಹದ್ದಿನಕಣ್ಣಿಡಲು ಸೂಚಿಸಿದ್ರು. ನಿಜ ಅಂದ್ರೆ, ತಾವೇ ಖುದ್ದಾಗಿ ಫಿಲ್ಡಿಗೆ ಇಳಿದಿರೋ ರಮೇಶ್ ಹನಾಪುರ ಸಾಹೇಬ್ರು ರಾತ್ರಿಯಿಡಿ, ಗ್ರಾಮ ಗ್ರಾಮಗಳಿಗೆ ತೆರಳಿ ತಮ್ಮ ಸಿಬ್ಬಂದಿ ಜೊತೆ ಸೇರಿ ಗ್ರಾಮಸ್ಥರೊಂದಿಗೆ ಗಸ್ತು ತಿರುಗಿದ್ದಾರೆ. ಹೀಗಾಗಿ ಈ ಅಧಿಕಾರಿಯ ಕಾರ್ಯ ನಿಜಕ್ಕೂ ತಾಲೂಕಿನ ಜನರ ಮನಗೆದ್ದಿದೆ. ಇಂಥ ಆಫೀಸರ್ ಮುಂಡಗೋಡಿಗೆ ಬೇಕಿತ್ತು ಅಂತಿದಾರೆ ಜನ.. ಥ್ಯಾಂಕ್ಯೂ ಪಿಐ ಸಾಹೇಬ್ರೆ..!
