ಮುಂಡಗೋಡ ACF ಈರೇಶ್ ಎಂ. ಕಬ್ಬಿನ್ ಮತ್ತೆ ಮುಂಡಗೋಡಿಗೆ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಾರೆ. ಕಳೆದ ತಿಂಗಳು 17 ರಂದೇ ವರ್ಗಾವಣೆಗೊಂಡು ಬಂದಿದ್ದ ಕಬ್ಬಿನ್ ರವರಿಗೆ, ಇಲ್ಲಿಂದ ವರ್ಗಾವಣೆಗೊಂಡಿದ್ದ ACF ರವಿ ಹುಲಕೋಟಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ, ಕಬ್ಬಿನ್ ರವರು ತಾಲೂಕಿಗೆ ಬರಲು ಕೊಂಚ ತಡೆಯಾಗಿತ್ತು. ಆದ್ರೆ, ಕೋರ್ಟ್ ಸಮಗ್ರ ವಿಚಾರಣೆ ಬಳಿಕ ಹಳೆಯ ಸಾಹೇಬ್ರು ಹಾಕಿದ್ದ ಕೇಸನ್ನು ವಜಾ ಮಾಡಿದೆ. ಜೊತೆಗೆ ಅವತ್ತು ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ, ಹೀಗಾಗಿ, ಮತ್ತೀಗ ಈರೇಶ್ ಕಬ್ಬಿನ್ ಮುಂಡಗೋಡ ACF ಆಗಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

ಬಂದ ದಿನವೇ ಭರ್ಜರಿ ಕಾರ್ಯ..!
ಅಸಲು, ಈರೇಶ್ ಕಬ್ಬಿನ ACF ಆಗಿ ಮುಂಡಗೋಡಿಗೆ ಬಂದಿದ್ದ ದಿನವೇ ನಂದಿಕಟ್ಟಾ ಗ್ರಾಮದಲ್ಲಿ ಜಿಂಕೆ ಮಾಂಸದ ಕೇಸ್ ಬೇಧಿಸಿದ್ದರು. ಅವತ್ತು, ಇದೇ ACF ರವರ ನಿರ್ಬೀಡೆಯ ಖಡಕ್ ನಿರ್ಧಾರದಿಂದಲೇ, ಆ ಕೇಸಿನ ಪ್ರಮುಖ ಆರೋಪಿಯನ್ನು ಬೆನ್ನು ಬಿದ್ದು, ಬಿಟ್ಟು ಬಿಡದೇ ಎಳೆದು ತರಲಾಗಿತ್ತು.

ಗಬ್ಬೆದ್ದು ಹೋಗಿತ್ತು..!
ನಿಜ ಅಂದ್ರೆ, ಕಳೆದ ಎರಡು ಮೂರು ವರ್ಷದಲ್ಲಿ ಗಬ್ಬೆದ್ದು ಗಟಾರಕ್ಕಿಳಿದಂತಾಗಿದ್ದ ಮುಂಡಗೋಡ ಅರಣ್ಯ ಇಲಾಖೆಯ ಅಂಗಳದಲ್ಲಿ, ಆಟ ಬಲ್ಲವರದ್ದೇ “ಭಂಡಾಟ” ಅನ್ನೋ ಹಾಗಿತ್ತು. ಅದೇಲ್ಲೋ ದೂರದ ಜಿಲ್ಲೆಯಲ್ಲಿ ಕೂತು ಅಧಿಕಾರ ನಡೆಸ್ತಿದ್ದ ಕೆಲ ಅಧಿಕಾರಿಗಳು, ಮುಂಡಗೋಡಿನ ಅರಣ್ಯ ದೇವಿಯ ರಕ್ಷಣೆ ಅನ್ನೋ ಕೆಲಸವನ್ನು ಬಹುತೇಕ ಮರೆತಂತಾಗಿತ್ತು. ಹೀಗಾಗಿ, ಸದ್ಯ ವನದೇವಿಗೂ ಒಂದಿಷ್ಟು ನೆಮ್ಮದಿಯ ಭರವಸೆ ಸಿಕ್ಕಂತಾಗಿದೆ.

ಸಾಹೇಬ್ರೆ..!
ಮುಂಡಗೋಡ ಅರಣ್ಯ ಇಲಾಖೆಯಲ್ಲಿ ಮೊದಲು ಆಗಬೇಕಾಗಿರೋ ಕೆಲಸ ಅಂದ್ರೆ, ಪ್ರತೀ ಬೀಟುಗಳಲ್ಲಿನ ಅರಣ್ಯ ರಕ್ಷಕರು “ಸಿಟಿ”ಯ ಹಂಗು ತೊರೆದು ಅರಣ್ಯ ದೇವಿಯ ಉಡಿಯಲ್ಲೇ ಜೀವಿಸಬೇಕಿದೆ. ನಿಜ ಅಂದ್ರೆ, ಅರಣ್ಯ ಕಾಮಗಾರಿಗಳು ನಡೆಯುವಾಗ ಮಾತ್ರ ಅಡವಿಯಲ್ಲಿ ಅಲೆದಾಡುವ DyRfo ಗಳು, ಸತತವಾಗಿ ಅವ್ರಿಗೆ ವಹಿಸಿರೋ ಬೀಟುಗಳಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಬೇಕಿದೆ. ಬೀಟ್ ಗಾರ್ಡುಗಳು, ವಾಚರ್ಸ್ ಗಳು ತಮಗೊಪ್ಪಿಸಿದ ಅರಣ್ಯ ರಕ್ಷಣೆಯ ಕೆಲಸ ಅಚ್ಚುಕಟ್ಟಾಗಿ ಮಾಡಬೇಕಿದೆ. ಅದನ್ನ ಮಾಡಿಸುವ ಜವಾಬ್ದಾರಿ ನೂತನ ACF ಸಾಹೇಬ್ರ ಹೆಗಲ ಮೇಲಿದೆ.
