ಮುಂಡಗೋಡಿನಲ್ಲಿ ಕಳ್ಳರ ಹೊಸ ಗ್ಯಾಂಗ್ ಆ್ಯಕ್ಟಿವ್..! ಚಿಲ್ಲರೇ ಕೊಟ್ಟು ನೋಟು ಪಡೆಯೊ “ಕಳ್ಳಾಟ”..! ಇವ್ರೇ ನೋಡಿ ಖದೀಮರು, ಇವ್ರು ಕಂಡ್ರೆ ಮಾಹಿತಿ ನೀಡಿ..!


ಮುಂಡಗೋಡ ಪೊಲೀಸ್ರು ಅಲರ್ಟ್ ಆಗಿದ್ದಾರೆ. ಪಟ್ಟಣದಲ್ಲಿ ಅಂಗಡಿಗಳಿಗೆ ಬಂದು ನಾಣ್ಯಗಳನ್ನು ನೀಡಿ ನೋಟುಗಳನ್ನು ಬದಲಾಯಿಸಿಕೊಳ್ಳುವ ನೆಪದಲ್ಲಿ ಅಥವಾ ಹೊಸ ಅಂಗಡಿ ಆರಂಭಿಸುತ್ತಿದ್ದೇವೆ ಎಂದು ನಂಬಿಸಿ ಮಾಲೀಕರ ಗಮನ ಬೇರೆಡೆ ಸೆಳೆದು ನಗದು ಹಾಗೂ ಒಡವೆಗಳನ್ನು ಕಳ್ಳತನ ಮಾಡುತ್ತಿರೋ ವಂಚಕರ ಗ್ಯಾಂಗ್ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫುಲ್ ಆ್ಯಕ್ಟಿವ್ ಆಗಿದೆ. ಹೀಗಾಗಿ, ಸಾರ್ವಜನಿಕರು ಮತ್ತು ವರ್ತಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸ್ರು ಮನವಿ ಮಾಡಿದ್ದಾರೆ.

​ವಂಚಕರ ವಂಚನಾ ಸ್ಟೈಲ್ ಇದು..!
​ಈ ಖದೀಮರು ಸಾಮಾನ್ಯವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಅಂಗಡಿಯವರ ಬಳಿ ಚಿಲ್ಲರೆ ನಾಣ್ಯಗಳನ್ನು ನೀಡಿ ದೊಡ್ಡ ಮುಖಬೆಲೆಯ ನೋಟುಗಳನ್ನು ಕೇಳುವುದು, ಅಥವಾ ‘DL’ ಸೀರೀಸ್‌ನ ನೋಟುಗಳನ್ನು ಕೇಳುವುದು ಹಾಗೂ ಹೊಸ ಅಂಗಡಿ ಓಪನ್ ಮಾಡುತ್ತಿದ್ದೇವೆ ಎಂದು ಹರಟೆ ಹೊಡೆಯುವುದು ಇವರ ತಂತ್ರ. ಈ ನಡುವೆ ಮಾಲೀಕರ ಗಮನ ಬೇರೆಡೆಗೆ ತಿರುಗಿ ಕಣ್ಣು ತಪ್ಪಿಸಿ ಅಂಗಡಿಯಲ್ಲಿರುವ ಹಣ, ಚಿನ್ನಾಭರಣ ಹಾಗೂ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸಿ ಪರಾರಿಯಾಗುತ್ತಾರೆ.

​ಪೊಲೀಸರ ಮನವಿ, ತುರ್ತು ಸಂಪರ್ಕ ಸಂಖ್ಯೆ..!
​ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಬಂದು ಇಂತಹ ಅನುಮಾನಸ್ಪದ ವರ್ತನೆ ತೋರಿದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು ಅಂತಾ ​ಪೊಲೀಸ್ರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಫೋಟೋದಲ್ಲಿರುವ ಅಥವಾ ಇಂತಹ ಸಂಶಯಾಸ್ಪದ ವ್ಯಕ್ತಿಗಳು ನಿಮ್ಮ ಸುತ್ತಮುತ್ತ ಅಥವಾ ಅಂಗಡಿಗಳ ಬಳಿ ಕಂಡುಬಂದಲ್ಲಿ ತಕ್ಷಣವೇ ಮುಂಡಗೋಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ತಕ್ಷಣವೇ 112 ಪೊಲೀಸ್ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮುಂಡಗೋಡ ಪೊಲೀಸ್ ಠಾಣೆಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ👉 ಮುಂಡಗೋಡ ಪಟ್ಟಣದಲ್ಲಿ ಹಾಡಹಗಲೇ ಮತ್ತೊಂದು ಕಳ್ಳತನ..! ಎಸ್ಪಿ ಸಾಹೇಬ್ರೇ ಈ ಕಡೆ ಒಂದಿಷ್ಟು ಗಮನ ಕೊಡಿ, ಆತಂಕದಲ್ಲಿದೆ ತಾಲೂಕಿನ ಜನತೆ..!