ಮುಂಡಗೋಡ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ 108 ಅಂಬ್ಯುಲೆನ್ಸ್‌ನಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಸಿಬ್ಬಂದಿಗಳು ಮಾನವೀಯತೆ ಮೆರೆದ ಘಟನೆ ಭಾನುವಾರ ಮುಂಡಗೋಡ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಕೆಂದಲಗೇರಿ ಗ್ರಾಮದ ನಿವಾಸಿ ಶ್ರೀಮತಿ ನಿಖಿತಾ ಕಲ್ಮೇಶ ದಳವಿ (20) ಅವರಿಗೆ ಇಂದು ಭಾನುವಾರ ನಸುಕಿನ ಜಾವ ಸುಮಾರು 4:24ರ ಸುಮಾರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮದ ಆಶಾ ಕಾರ್ಯಕರ್ತೆ ಸುಜಾತಾ ಅವರು 108 ತುರ್ತು ಆರೋಗ್ಯ ಸೇವೆಗೆ ಕರೆ...
Top Stories
ಮುಂಡಗೋಡ ಠಾಣೆಗೆ ರವೀಂದ್ರ ಬಿರಾದಾರ ನೂತನ ಕ್ರೈಂ ಪಿಎಸ್ಐ..!
ಆಲಳ್ಳಿ ವೃದ್ದೆಯ ಮರ್ಡರ್ ಕೇಸಲ್ಲಿ ಮುಂಡಗೋಡಿಗರ ತಲೆಕೆಡಿಸಿದ ಪ್ರಶ್ನೆ, ಅಷ್ಟಕ್ಕೂ ಆ ವೃದ್ದೆಯ ಶವ ಬೆತ್ತಲೆಯಾಗಿದ್ದು ಯಾಕೆ..? ಹಂತಕನು ಸಿಕ್ಕಿದ್ದು ಹೇಗೆ..?
ಆಲಳ್ಳಿ ವೃದ್ಧೆಯ ಭೀಕರ ಹತ್ಯೆ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸ್ರು, ಚಿನ್ನಾಭರಣಕ್ಕಾಗಿ ಒಂಟಿ ಮುದುಕಿಯನ್ನೇ ಕೊಂದಿದ್ದ ಹಂತಕ ಅಂದರ್..!
ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಖಂಡನೆ, ಮುಂಡಗೋಡ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ; ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ
ಮುಂಡಗೋಡಿನ ಆಲಳ್ಳಿ ಒಂಟಿ ಮಹಿಳೆಯ ಸಾವು ಸಹಜವಲ್ಲ, ಅದೊಂದು ಪ್ಲ್ಯಾನ್ಡ್ ಮರ್ಡರ್ ಅಂತೆ..! ಅಷ್ಟಕ್ಕೂ, ಒಂಟಿ ಜೀವಗಳ ರಕ್ಷಣೆಗಿರೋ ‘ಆಸರೆ’ ಯೋಜನೆ ಎಲ್ಲೋಯ್ತು ಪೊಲೀಸ್ರೆ..?
ನಾಳೆ ಮುಂಡಗೋಡ ಬಂದ್ ಹಿನ್ನೆಲೆ, ಖಾಕಿ ಕಟ್ಟೇಚ್ಚರ, ಪಟ್ಟಣದಲ್ಲಿ ಪೊಲೀಸರಿಂದ ರಾತ್ರಿಯೇ ರೂಟ್ ಮಾರ್ಚ್..!
ನಾಳೆ ಗುರುವಾರ ಮುಂಡಗೋಡ ಬಂದ್ ಹಿನ್ನೆಲೆ; ಪಟ್ಟಣದಲ್ಲಿ ಖುದ್ದು SP ದೀಪನ್ ನೇತೃತ್ವದ ಬಿಗಿ ಪೊಲೀಸ್ ಬಂದೋಬಸ್ತ್..!
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಖಬರಸ್ಥಾನ ಬಳಿ ಗಾಂಜಾ ಮಾರುತ್ತಿದ್ದ ಕಲಘಟಗಿ ವ್ಯಕ್ತಿ ಬಂಧನ..!
ತಾಂತ್ರಿಕ ದೋಷ: ಶಿಗ್ಗಾಂವ ತಾಲೂಕಿನ ಕಾಮನಹಳ್ಳಿ ಬಳಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
ರಾಜ್ಯದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಇಂದೇ ಬಿಡುಗಡೆ ಆಗತ್ತಾ..? ಸಿದ್ದಪ್ಪ ಹಡಪದಗೆ ಒಲಿಯಲಿದೆಯೇ ಹಡಪದ ಅಪ್ಪಣ್ಣ ನಿಗಮದ ಪಟ್ಟ..!?
ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಅಗ್ನಿ ಅವಘಡ: ಕಬ್ಬು ಸಾಗಿಸಲು ಗದ್ದೆಗೆ ಬಂದಿದ್ದ ಲಾರಿ ಸಂಪೂರ್ಣ ಭಸ್ಮ..!
ನಾಳೆ ಗುರುವಾರ 12 ರಂದು ಮುಂಡಗೋಡ ಬಂದ್‌ಗೆ ಕರೆ..! ರಾಕ್ಷಸೀ ಕೃತ್ಯ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಬಂದ್ ಗೆ ಕರೆ..!!
ಪ್ರಿಡ್ಜ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್..!? ಮುಂಡಗೋಡಿನ ಹಳೂರಿನಲ್ಲಿ 21 ವರ್ಷದ ಯುವಕ ದುರಂತ ಸಾವು..!
ಯಲ್ಲಾಪುರ “ಭಟ್ಟರ ಮನೆ” ದರೋಡೆ ಕೇಸ್ ಬೇಧಿಸಿದ ಪೊಲೀಸ್ರು; ಇಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದವನ ಹೆಸ್ರೇ “ಆನಂದ”ಸಾಬ”..!!
ಮುಂಡಗೋಡ; ಅಟ್ಟಣಗಿ ಬಳಿ ಮಾಸ್ತಿಹಳ್ಳದಲ್ಲಿ ದನ ಮೇಯಿಸಲು ತೆರಳಿದ್ದ ವ್ಯಕ್ತಿ ನೀರುಪಾಲು..? ಈ ಸಾವಿನಲ್ಲಿ ಅನುಮಾನವಂತೆ..!
ಮುಂಡಗೋಡಿನ ಕೂರ್ಲಿ ಜಂಬೆಕೊಪ್ಪದಲ್ಲಿ ಕಾಡಾನೆಗಳ ಹಾವಳಿ: ಬೆಳೆ ನಾಶ, ಪರಿಹಾರಕ್ಕೆ ರೈತರ ಆಗ್ರಹ
ಮುಂಡಗೋಡಿನ ಜ್ಯುವೆಲ್ಲರಿಯಲ್ಲಿ ಕಾಲುಚೈನು ದೋಚಿದ್ದ ಇಬ್ಬರು ಖತರ್ನಾಕ “ಶಾಂತಾ” ಬಾಯಿಗಳ ಬಂಧನ..!
ಮುಂಡಗೋಡ; ನೀರಿನ ಮೋಟಾರ್ ಗೆ ಕರೆಂಟ್ ವೈಯರ್ ಹಾಕುವಾಗ ವಿದ್ಯುತ್ ಶಾಕ್ ತಗುಲಿ ಗೃಹಿಣಿ ಸಾವು..!
ಕೊನೆಗೂ ಅಂತ್ಯಗೊಂಡ ಕಬ್ಬು ಬೆಳೆಗಾರರ 2 ತಿಂಗಳ ಹೋರಾಟ, ಪ್ರಾಫಿಟ್ ಶೇರಿಂಗ್ ಸೂತ್ರ ಜಾರಿ..!
Category: ಉತ್ತರ ಕನ್ನಡ
ಮುಂಡಗೋಡ ಠಾಣೆಗೆ ರವೀಂದ್ರ ಬಿರಾದಾರ ನೂತನ ಕ್ರೈಂ ಪಿಎಸ್ಐ..!
ಮುಂಡಗೋಡ ತಾಲೂಕಿನಲ್ಲಿ ಅತ್ಯಾಚಾರದ ಹೇಯ ಕೃತ್ಯದ ವಿರುದ್ಧ ಪ್ರತಿಭಟನೆ, ಬಂದ್ ಗಳ ಮದ್ಯೆ ಇಡೀ ತಾಲೂಕಿಗರೇ ಅಲರ್ಟ್ ಆಗಿರೋವಾಗ, ಸದ್ದು ಗದ್ದಳಗಳ ನಡುವೆ ಮುಂಡಗೋಡ ಠಾಣೆಗೆ ನೂತನ ಕ್ರೈಂ ಪಿಎಸ್ಐ ಬಂದಿಳಿದಿದ್ದಾರೆ. ಬನವಾಸಿ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸ್ತಿದ್ದ, ರವೀಂದ್ರ ಬಿರಾದಾರ ಈಗ ಮುಂಡಗೋಡಿಗೆ ನೂತನ ಕ್ರೈಂ ಪಿಎಸ್ಐ. ಅಸಲು, ಆಲಳ್ಳಿ ವೃದ್ದೆಯ ಕೊಲೆ ಪ್ರಕರಣದ ತನಿಖೆಯಲ್ಲಿದ್ದ ಮುಂಡಗೋಡ ಹಾಗೂ ಶಿರಸಿಯ ಕ್ರೈಂ ಟೀಂ ಗೆ, ಮುಂಡಗೋಡ ಪಿಐ ರಮೇಶ ಹನಾಪುರ ಹೇಗೆ ಬಲ ತುಂಬಿದ್ದರೋ...
ಆಲಳ್ಳಿ ವೃದ್ದೆಯ ಮರ್ಡರ್ ಕೇಸಲ್ಲಿ ಮುಂಡಗೋಡಿಗರ ತಲೆಕೆಡಿಸಿದ ಪ್ರಶ್ನೆ, ಅಷ್ಟಕ್ಕೂ ಆ ವೃದ್ದೆಯ ಶವ ಬೆತ್ತಲೆಯಾಗಿದ್ದು ಯಾಕೆ..? ಹಂತಕನು ಸಿಕ್ಕಿದ್ದು ಹೇಗೆ..?
ಮುಂಡಗೋಡ ತಾಲೂಕಿನ ಆಲಳ್ಳಿ ಒಂಟಿ ವೃದ್ದೆಯ ಮರ್ಡರ್ ಕೇಸಿನಲ್ಲಿ ಒಂದು ಪ್ರಶ್ನೆ ಎಲ್ರಿಗೂ ತಲೆಗೆ ಹೊಕ್ಕು ಹೊರಳಾಡ್ತಿದೆ.. ಅಷ್ಟಕ್ಕೂ ಆ ವೃದ್ದೆಯ ಶವ ಬೆತ್ತಲೆಯಾಗಿ ಸಿಕ್ಕಿದ್ದು ಯಾಕೆ..? ಕೊಲೆಗಾರ ಶವವನ್ನ ಬೆತ್ತಲೆ ಮಾಡಿದ್ನಾ..? ಅಲ್ಲೇನಾದ್ರೂ ವೃದ್ದೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತಾ..? ಇವೇಲ್ಲ ಪ್ರಶ್ನೆಗಳನ್ನ ತಲೆಗೆ ಹೊಕ್ಕಿಸಿಕೊಂಡಿದ್ದಾರೆ ಕೆಲವ್ರು..! ಆದ್ರೆ, ಪೊಲೀಸ್ರ ತನಿಖೆ ವೇಳೆ ಸಿಕ್ಕಿರೋ ಅಸಲಿ ಸಂಗತಿಗಳು ಬೇರೆಯ ಕತೆಯನ್ನೇ ಹೇಳ್ತಿವೆ.. ಅರ್ಥವಾಗದ ಪ್ರಶ್ನೆಗಳು..! ಅಸಲು, ಶವದ ಸ್ಥಿತಿ ನೋಡಿದ್ದಾಗ, ರವಿಕೆ ಸೇರಿದಂತೆ ಬಟ್ಟೆಗಳನ್ನು ಬೇರೆಯವರು...
ಆಲಳ್ಳಿ ವೃದ್ಧೆಯ ಭೀಕರ ಹತ್ಯೆ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸ್ರು, ಚಿನ್ನಾಭರಣಕ್ಕಾಗಿ ಒಂಟಿ ಮುದುಕಿಯನ್ನೇ ಕೊಂದಿದ್ದ ಹಂತಕ ಅಂದರ್..!
ಮುಂಡಗೋಡ ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ನಡೆದಿದ್ದ 75 ವರ್ಷದ ವೃದ್ಧೆ ಕಮಲವ್ವ ತಿರಕಪ್ಪ ಆಡೂರ ಭೀಕರ ಹತ್ಯೆ ಕೇಸನ್ನು ಬೇಧಿಸುವಲ್ಲಿ ಮುಂಡಗೋಡ ಹಾಗೂ ಶಿರಸಿಯ ಚಾಣಾಕ್ಷ ಪೊಲೀಸ್ ಕ್ರೈಂ ಟೀಂ ಯಶಸ್ವಿಯಾಗಿದೆ. ಅಕ್ಷರಶಃ ಸವಾಲಾಗಿದ್ದ ಈ ಪ್ಲ್ಯಾನ್ಡ್ ಮರ್ಡರನ ಹಂತಕನನ್ನು ಬಂಧಿಸಿದ್ದಾರೆ, ಹಂತಕನ ಜೊತೆ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅವತ್ತು ಅಕ್ಟೋಬರ್ 25 ರ ರಾತ್ರಿ..! ಅಕ್ಟೋಬರ್ 25ರ ರಾತ್ರಿ, ತನ್ನ ಮನೆಯಲ್ಲೇ ಮಲಗಿದ್ದ, ವೃದ್ದೆ ಕಮಲವ್ವ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದರು....
ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಖಂಡನೆ, ಮುಂಡಗೋಡ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ; ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ
ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಹೇಯ ಲೈಂಗಿಕ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ, ಆರೋಪಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶುಕ್ರವಾರ ಮುಂಡಗೋಡ ಮುಸ್ಲಿಂ ಸಮುದಾಯದ ವತಿಯಿಂದ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಮುಂಡಗೋಡ ಮುಸ್ಲಿಂ ಸಮುದಾಯದ ‘ಅಹ್ಲ್-ಎ-ಸುನ್ನತ್ ಜಮಾತ್’, ‘ನೂರಾನಿ ಜಮಾತ್’ ಹಾಗೂ ‘ಕರ್ನಾಟಕ ರಾಜ್ಯ ಉಲಮಾ ಸೊಸೈಟಿ (ರಿ)’ ಮುಂಡಗೋಡ ತಾಲೂಕು ಶಾಖೆಯ ನೇತೃತ್ವದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ನೂರಾನಿ ಮಸೀದಿಯಿಂದ ಮೆರವಣಿಗೆಯ ಮೂಲಕ ಮುಂಡಗೋಡ ಪೊಲೀಸ್ ಠಾಣೆಗೆ...
ಮುಂಡಗೋಡಿನ ಆಲಳ್ಳಿ ಒಂಟಿ ಮಹಿಳೆಯ ಸಾವು ಸಹಜವಲ್ಲ, ಅದೊಂದು ಪ್ಲ್ಯಾನ್ಡ್ ಮರ್ಡರ್ ಅಂತೆ..! ಅಷ್ಟಕ್ಕೂ, ಒಂಟಿ ಜೀವಗಳ ರಕ್ಷಣೆಗಿರೋ ‘ಆಸರೆ’ ಯೋಜನೆ ಎಲ್ಲೋಯ್ತು ಪೊಲೀಸ್ರೆ..?
ಮುಂಡಗೋಡತಾಲೂಕಿನಲ್ಲಿ ಚಿನ್ನದ ಆಸೆಗೆ ಬಲಿಯಾಗ್ತಿವೆ ಒಂಟಿ ಜೀವಗಳು..! ಅಷ್ಟಕ್ಕೂ ಬೀಟ್ ಪೊಲೀಸರ ನಿರ್ಲಕ್ಷ್ಯಕ್ಕೆ ಕಡಿವಾಣ ಇಲ್ವಾ..? ಕಾಗದದಲ್ಲೇ ಉಳಿಯಿತೇ ಪೊಲೀಸ್ ಇಲಾಖೆಯ ‘ಆಸರೆ’ ಯೋಜನೆ..? ಮುಂಡಗೋಡ ತಾಲೂಕಿನಲ್ಲಿ ಒಂಟಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಸುರಕ್ಷತೆಯೇ ಇಲ್ವಾ..? ಒಂಟಿಯಾಗಿ ವಾಸಿಸುವ, ಏಕಾಂಗಿಯಾಗಿಯೇ ಬದುಕು ಕಟ್ಟಿಕೊಂಡಿರೋ ಹಿರಿಯ ಜೀವಗಳಿಗೆ ರಕ್ಷಣೆಯೇ ಇಲ್ವಾ..? ಇಂತಹದ್ದೊಂದು ಆತಂಕ, ಇಂತಹದ್ದೊಂದು ಪ್ರಶ್ನೆ ಇಡೀ ತಾಲೂಕಿನಲ್ಲಿ ಪ್ರಜ್ಙಾವಂತರನ್ನ ಕಾಡ್ತಿದೆ..! ಯಾಕಂದ್ರೆ, ಕಳೆದ ಒಂದೇ ಒಂದು ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ ಎರಡೆರಡು ಒಂಟಿ, ಹಿರಿಯ ಜೀವಗಳು...
ನಾಳೆ ಮುಂಡಗೋಡ ಬಂದ್ ಹಿನ್ನೆಲೆ, ಖಾಕಿ ಕಟ್ಟೇಚ್ಚರ, ಪಟ್ಟಣದಲ್ಲಿ ಪೊಲೀಸರಿಂದ ರಾತ್ರಿಯೇ ರೂಟ್ ಮಾರ್ಚ್..!
ಮುಂಡಗೋಡ: ನಾಳೆ ಗುರುವಾರ ಹಿಂದೂಪರ ಸಂಘಟನೆ ಸೇರಿದಂತೆ ಹಲವು ಸಂಘಟನೆಯವರು ಕರೆ ನೀಡಿರುವ “ಮುಂಡಗೋಡ ಬಂದ್” ಹಿನ್ನೆಲೆಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಮುಂಡಗೋಡ ಪೊಲೀಸರು ಹಾಗೂ ಡಿ.ಎ.ಆರ್ (DAR) ಸಿಬ್ಬಂದಿಗಳು ಜಂಟಿಯಾಗಿ ಮುಂಡಗೋಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿಯೇ ರೂಟ್ ಮಾರ್ಚ್ ನಡೆಸಿದ್ರು. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಡಗೋಡ ಪಿಐ ರಮೇಶ್ ಹನಾಪುರ ನೇತೃತ್ವದಲ್ಲಿ ಪೊಲೀಸರು...
ನಾಳೆ ಗುರುವಾರ ಮುಂಡಗೋಡ ಬಂದ್ ಹಿನ್ನೆಲೆ; ಪಟ್ಟಣದಲ್ಲಿ ಖುದ್ದು SP ದೀಪನ್ ನೇತೃತ್ವದ ಬಿಗಿ ಪೊಲೀಸ್ ಬಂದೋಬಸ್ತ್..!
ಮುಂಡಗೋಡ: ಅಪ್ರಾಪ್ತ ಬಾಲಕಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಾಳೆ (ಗುರುವಾರ) ಮುಂಡಗೋಡ ಬಂದ್‌ಗೆ ಕರೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯು ಸಂಪೂರ್ಣ ಅಲರ್ಟ್ ಆಗಿದೆ.ವಿವಿಧ ಹಿಂದುಪರ ಸಂಘಟನೆಗಳು ಹಾಗೂ ತಾಲೂಕಿನ ವಿವಿಧ ಸಂಘಟನೆಗಳು ಈ ಬಂದ್‌ಗೆ ಬೆಂಬಲ ಸೂಚಿಸಿದ್ದು, ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. SP ನೇತೃತ್ವದಲ್ಲಿ ಬಂದೋಬಸ್ತ್..! ಮುಂಡಗೋಡ್ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಭಾರೀ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ಉತ್ತರ...
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಖಬರಸ್ಥಾನ ಬಳಿ ಗಾಂಜಾ ಮಾರುತ್ತಿದ್ದ ಕಲಘಟಗಿ ವ್ಯಕ್ತಿ ಬಂಧನ..!
ಮುಂಡಗೋಡ ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 7000 ರೂ. ಮೌಲ್ಯದ 140 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮುಂಡಗೋಡ ಪಟ್ಟಣದ ಕಲಘಟಗಿ ರಸ್ತೆಯ ಖಬರಸ್ಥಾನ ಹತ್ತಿರ ಈ ಕಾರ್ಯಾಚರಣೆ ನಡೆಸಲಾಗಿದೆ. ಕಲಘಟಗಿ ಮಹಮ್ಮದತೌಸಿಫ್ ರುಸ್ತುಂಸಾಬ ಕಾಳಗೆ ಎಂಬಾತನು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಈ ದಾಳಿ ನಡೆಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಮೇಶ ಹನಾಪುರ, ಪಿಎಸ್‌ಐ ಮಂಜುನಾಥ ಗೌಡರ, ಪಿಎಸ್‌ಐ ನಿಂಗರಾಜ...
ರಾಜ್ಯದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಇಂದೇ ಬಿಡುಗಡೆ ಆಗತ್ತಾ..? ಸಿದ್ದಪ್ಪ ಹಡಪದಗೆ ಒಲಿಯಲಿದೆಯೇ ಹಡಪದ ಅಪ್ಪಣ್ಣ ನಿಗಮದ ಪಟ್ಟ..!?
ಮುಂಡಗೋಡ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿಯ ಅಂತಿಮ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಶಾಸಕಾಂಗ ಪಕ್ಷದ ನಾಯಕರ ಜೊತೆಗಿನ ಅಂತಿಮ ಹಂತದ ಚರ್ಚೆಯ ಬಳಿಕ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೂ ವಿಶೇಷ ಸ್ಥಾನಮಾನ ಸಿಗಲಿದೆಯೇ ಎಂಬ ಚರ್ಚೆಗಳು ತಾಲೂಕಿನಾದ್ಯಂತ ಬಿಸಿಯೇರಿವೆ. ಸಿಎಂ-ಡಿಸಿಎಂ ಅಂತಿಮ ಕಸರತ್ತು..! ನಿಗಮ-ಮಂಡಳಿ ಸ್ಥಾನಗಳಿಗಾಗಿ ಪಕ್ಷದ ಹಿರಿಯ ನಾಯಕರು ಮತ್ತು ಶ್ರಮಿಕ ಕಾರ್ಯಕರ್ತರ ನಡುವೆ ತೀವ್ರ...









