ಆಲಳ್ಳಿ ವೃದ್ದೆಯ ಮರ್ಡರ್ ಕೇಸಲ್ಲಿ ಮುಂಡಗೋಡಿಗರ ತಲೆಕೆಡಿಸಿದ ಪ್ರಶ್ನೆ, ಅಷ್ಟಕ್ಕೂ ಆ ವೃದ್ದೆಯ ಶವ ಬೆತ್ತಲೆಯಾಗಿದ್ದು ಯಾಕೆ..? ಹಂತಕನು ಸಿಕ್ಕಿದ್ದು ಹೇಗೆ..?

ಮುಂಡಗೋಡ ತಾಲೂಕಿನ ಆಲಳ್ಳಿ ಒಂಟಿ ವೃದ್ದೆಯ ಮರ್ಡರ್ ಕೇಸಿನಲ್ಲಿ ಒಂದು ಪ್ರಶ್ನೆ ಎಲ್ರಿಗೂ ತಲೆಗೆ ಹೊಕ್ಕು ಹೊರಳಾಡ್ತಿದೆ.. ಅಷ್ಟಕ್ಕೂ ಆ ವೃದ್ದೆಯ ಶವ ಬೆತ್ತಲೆಯಾಗಿ ಸಿಕ್ಕಿದ್ದು ಯಾಕೆ..? ಕೊಲೆಗಾರ ಶವವನ್ನ ಬೆತ್ತಲೆ ಮಾಡಿದ್ನಾ..? ಅಲ್ಲೇನಾದ್ರೂ ವೃದ್ದೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತಾ..? ಇವೇಲ್ಲ ಪ್ರಶ್ನೆಗಳನ್ನ ತಲೆಗೆ ಹೊಕ್ಕಿಸಿಕೊಂಡಿದ್ದಾರೆ ಕೆಲವ್ರು..! ಆದ್ರೆ, ಪೊಲೀಸ್ರ ತನಿಖೆ ವೇಳೆ ಸಿಕ್ಕಿರೋ ಅಸಲಿ ಸಂಗತಿಗಳು ಬೇರೆಯ ಕತೆಯನ್ನೇ ಹೇಳ್ತಿವೆ.. 

ಅರ್ಥವಾಗದ ಪ್ರಶ್ನೆಗಳು..!
ಅಸಲು, ಶವದ ಸ್ಥಿತಿ ನೋಡಿದ್ದಾಗ, ರವಿಕೆ ಸೇರಿದಂತೆ ಬಟ್ಟೆಗಳನ್ನು ಬೇರೆಯವರು ಒತ್ತಾಯ ಪೂರ್ವಕವಾಗಿ ಬಿಚ್ಚಿರೋ ಹಾಗೆ ಕಂಡಿರಲಿಲ್ಲ. ಹಾಗಿದ್ರೆ, ಆ ವೃದ್ದೆಯೇ ಬಟ್ಟೆ ಬಿಚ್ಚಿಕೊಂಡು ಬೆತ್ತಲೆಯಾದ್ಲಾ..? ಹಾಗೆ ಬೆತ್ತಲೆಯಾಗೋ ಅನಿವಾರ್ಯತೆಯಾದ್ರೂ ಆ ತಾಯಿಗೆ ಏನಿತ್ತು..? ಅಸಲಿಗೆ ಅಲ್ಲಿ ವೃದ್ದೆಯ ಜೊತೆ ಲೈಂಗಿಕ ದೌರ್ಜನ್ಯ ನಡೆದಿರೋ ಕುರುಹುಗಳು ಪತ್ತೆಯಾಗಿಲ್ಲವಂತೆ. ಮೇಲ್ನೋಟಕ್ಕೆ ಅದು ಸತ್ಯವೂ ಕೂಡ. ಹಾಗಿದ್ರೆ ವೃದ್ದೆ ಬೆತ್ತಲೆಯಾಗಿರೋ ಮರ್ಮ ಏನು ಅಂತಾ ಎಲ್ಲರಿಗೂ ಅರ್ಥವಾಗದ ಪ್ರಶ್ನೆಗಳಿವೆ.

ಇದ್ರಲ್ಲಿ ಕೆಲವ್ರು ಪೊಲೀಸ್ರೇ ಇದನ್ನೇಲ್ಲ ಸರಿಯಾಗಿ ತನಿಖೆ ಮಾಡಿಲ್ಲ. ಹೀಗಾಗಿ ಅದೇಲ್ಲ ಪ್ರಶ್ನೆಯಾಗೇ ಉಳಿದಿದೆ ಅಂತ ಅನಕೊತಿದಾರೆ. ಆದ್ರೆ ಸತ್ಯ ಏನಂದ್ರೆ, ಅಲ್ಲಿ ಹಂತಕ ವೃದ್ದೆಯನ್ನ ಮರ್ಡರ್ ಮಾಡಿದ್ದು, ಯಾವುದೇ ಆಯುಧದಿಂದಾಗಲಿ, ಉಸಿರು ಗಟ್ಟಿಸಿಯಾಗಲಿ ಅಲ್ಲ ಬದಲಿಗೆ ನಿದ್ದೆ ಮಾತ್ರೆ ನೀಡಿ ಮುದುಕಿಯನ್ನ ಲೀಲಾಜಾಲವಾಗಿ ಮುಗಿಸಿಬಿಟ್ಟಿದ್ದ ಹಂತಕ. ಇದೇಲ್ಲ ನಮ್ಮ ಮುಂಡಗೋಡಿನ ಚಾಣಾಕ್ಷ ಪೊಲೀಸ್ರ ತನಿಖೆ ಹೊತ್ತಲ್ಲೇ ಬಯಲಾಗಿದೆಯಂತೆ.

ನಿದ್ದೆ ಮಾತ್ರೆಯ ಏಟಿಗೆ ಬೆತ್ತಲೆಯಾದ್ಲಾ..?
ಇನ್ನು, ವೃದ್ದೆಯ ಚಿನ್ನಾಭರಣ ಎಗರಿಸಕೊಳ್ಳಲೇ ಬೇಕಿ ಅಂತ, ಕಾದು ಕುಳಿತಿದ್ದ ಆರೋಪಿಗೆ ಅಕ್ಟೋಬರ್ 25 ರ ದಿನ, ಮುದುಕಿಯ ಮನೆ ಪಕ್ಕದಲ್ಲಿದ್ದ ಮಗ, ಸೊಸೆ ಊರಿಗೆ ಹೋಗಿದ್ದಾರೆ ಅನ್ನೋ ಮಾಹಿತಿ ತಿಳಿದು, ಅವತ್ತೇ ಮೂಹೂರ್ತ ಪಿಕ್ಸ್ ಮಾಡಿಕೊಂಡಿದ್ದ, ಏನಿಲ್ಲವೆಂದರೂ 10 ನಿದ್ದೆ ಮಾತ್ರೆಯನ್ನ ಜ್ಯೂಸ್ ನಲ್ಲಿ ಬೆರೆಸಿ ಸಂಜೆ ಸರಿಸುಮಾರು ಆರೂವರೆಯಿಂದ ಏಳು ಗಂಟೆಯಷ್ಟೊತ್ತಿಗೆ ನೀಡಿದ್ದನಂತೆ. ಹಾಗೆ ಮಾತ್ರೆ ಕೊಟ್ಟು ಆ ಮನೆಯಿಂದ ಹೊರಗೆ ಹೋಗಿದ್ದ ಹಂತಕ, ರಾತ್ರಿ ಒಂಬತ್ತೂವರೆಗೆ ವೃದ್ದೆಯ ಮನೆಗೆ ವಾಪಸ್ ಬಂದಿದ್ದ. ಆ ಹೊತ್ತಲ್ಲಿ ವೃದ್ದೆ ಬೆತ್ತಲೆಯಾಗಿ ಮಲಗಿದ್ದಳಂತೆ. ಹತ್ತಿರ ಹೋಗಿ ನೋಡಿದ ಆರೋಪಿಗೆ, ವೃದ್ದೆ ಹೆಣವಾಗಿದ್ದಾಳೆ ಅನ್ನೋದು ಕನ್ಫರ್ಮ್ ಆಗಿದೆ. ತಕ್ಷಣವೇ ಮನೆಯಲ್ಲಿ ಗೆಬರಾಡಿ ಸಿಕ್ಕ ಹಣ ಬಂಗಾರ ಎಗರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ ಆರೋಪಿ..!

ಹಾಗಿದ್ರೆ ಬೆತ್ತಲೆಯಾಗಿದ್ದು ಹೇಗೆ..?
ಒಂದು ಅಂದಾಜಿನ ಪ್ರಕಾರ, ಹಂತಕ ನೀಡಿದ್ದ ನಿದ್ದೆ ಮಾತ್ರೆ, ವೃದ್ದೆಗೆ ಏಕದಂ ಸಂಕಟ ಶುರು ಮಾಡಿದೆ. ಬಹುಶಃ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗಿ ಒದ್ದಾಟ ಶುರುವಾಗಿದೆ. ಆ ಹೊತ್ತಲ್ಲಿ ಆ ತಾಯಿ ತಾನೇ ಸಂಕಟ ತಾಳಲಾರದೆ ಬಟ್ಟೆ ಬಿಚ್ಚಿ ಒದ್ದಾಡಿ ಜೀವ ಬಿಟ್ಟಿರಬೇಕು ಅನ್ನೋ ಅನುಮಾನ ಇದೆ‌.

ಹೆಣ ಕೆಡವಿ ಕಾಡು ಸೇರಿದ..!
ಇನ್ನು, ಆ ವೃದ್ದೆ ಹೆಣವಾಗಿದಾಳೆ ಅಂತಾ ಅರಿತು, ಅಲ್ಲಿಂದ ಬಂಗಾರದ ಒಡವೆಗಳೊಂದಿಗೆ ಆ ರಾತ್ರಿ ಅದೇ ಊರಿನ ಆತನದ್ದೇ ಸೆಡ್ಡಿನಲ್ಲಿ ಮಲಗಿದ ಹಂತಕ, ಮಾರನೇ ದಿನ ಕಾಡು ಸೇರಿ ಬಿಡ್ತಾನೆ. ಹಾಗೆ ಕಾಡು ಸೇರಿದವನು ಬರೋಬ್ಬರಿ ಒಂದು ವಾರ ಹೊರಗೆ ಬಂದೇ ಇರಲಿಲ್ಲ..! ಯಾವಾಗ ಪೊಲೀಸರಿಗೆ ವಿಷಯ ಗೊತ್ತಾಗಿದೆ ಅಂತಾ ಆತನಿಗೆ ತಿಳಿಯಿತೊ, ಕಾಡಿನಿಂದ ಹೊರಬಂದು ತನ್ನ ಬೈಕ್ ಮೂಲಕ ನೇರವಾಗಿ ಸವಣೂರಿಗೆ ಹೋಗಿರ್ತಾನೆ. ವಿಪರ್ಯಾಸ ಅಂದ್ರೆ, ಅಜ್ಜಿಯ ಮನೆಯಿಂದ ಎಗರಿಸಿದ್ದ ಚಿನ್ನಾಭರಣವನ್ನು ತನ್ನ ಬೈಕ್ ನ ಸ್ಪೈನರ್ ಬಾಕ್ಸ್ ನಲ್ಲಿ ಅಡಗಿಸಿ ಇಟ್ಟು, ಬೈಕನ್ನು ಗದಗ್ ಕಡೆ ಬಿಟ್ಟು ಬರ್ತಾನೆ. ಆ ನಂತ್ರ ಗೌಂಡಿ( ಗಾರೆ) ಕೆಲಸಕ್ಕಾಗಿ ಏನೂ ಆಗೇ ಇಲ್ಲದವರ ಹಾಗೆ ಸಾಮಾನ್ಯವಾಗಿ ಉಳಿದು ಬಿಡ್ತಾನೆ.. ಅಷ್ಟೆ..!

ಅದೊಂದು ಫೋನ್ ಕಾಲ್..!
ಇತ್ತ ಪೊಲೀಸ್ರಿಗೆ ಗ್ರಾಮಸ್ಥರ ಮಾಹಿತಿಯ ಪ್ರಕಾರ, ಮರ್ಡರ್ ಆದ ದಿನ, ಆ ಮನೆಯ ಹತ್ರ ಅವನೊಬ್ಬ ಇದ್ದ ಅಂತಾ ಮಾಹಿತಿ ನೀಡಿರ್ತಾರೆ. ಆ ಮಾಹಿತಿ ಆದರಿಸಿ ಫಿಲ್ಡಿಗಿಳಿದಿದ್ದ ಪೊಲೀಸ್ರಿಗೆ ಆ ಹಂತಕನ ಸುಳಿವು ಹಿಡಿಯೋದೇ ಸವಾಲಾಗಿರತ್ತೆ. ಯಾಕಂದ್ರೆ ಅವನ ಬಳಿ ಮೊಬೈಲ್ ಇಲ್ಲ, ಆ ಊರಲ್ಲಿ ದುರ್ಬಿನ್ ಹಚ್ಚಿ ಹುಡುಕಿದ್ರೂ CCTV ಗಳ ಸೊಲ್ಲೇ ಇಲ್ಲ. ಹೀಗಾಗಿ, ಚಾಣಾಕ್ಷ ಪೊಲೀಸ್ ಟೀಂ ಗೆ ಬಂದ ಅದೊಂದು ಫೋನ್ ಕಾಲ್ ಅಸಲೀ ಹಂತಕನ ಹೆಡೆಮುರಿ ಕಟ್ಟುವಂತೆ ಮಾಡುತ್ತದೆ. ಸವಣೂರಿನಿಂದ ಆರೋಪಿಯನ್ನು ಹಿಡಿದು ತಂದ ಪೊಲೀಸ್ರು ಮುಂದಿನ ಕ್ರಮ ಕೈಗೊಂಡಿದ್ದಾರೆ. ತನಿಖೆ ಇನ್ನೂ ಮುಂದುವರೆದಿದೆ.