ನಾಳೆ ಮುಂಡಗೋಡ ಬಂದ್ ಹಿನ್ನೆಲೆ, ಖಾಕಿ ಕಟ್ಟೇಚ್ಚರ, ಪಟ್ಟಣದಲ್ಲಿ ಪೊಲೀಸರಿಂದ ರಾತ್ರಿಯೇ ರೂಟ್ ಮಾರ್ಚ್..!

​ಮುಂಡಗೋಡ: ನಾಳೆ ಗುರುವಾರ ಹಿಂದೂಪರ ಸಂಘಟನೆ ಸೇರಿದಂತೆ ಹಲವು ಸಂಘಟನೆಯವರು ಕರೆ ನೀಡಿರುವ “ಮುಂಡಗೋಡ ಬಂದ್” ಹಿನ್ನೆಲೆಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಮುಂಡಗೋಡ ಪೊಲೀಸರು ಹಾಗೂ ಡಿ.ಎ.ಆರ್ (DAR) ಸಿಬ್ಬಂದಿಗಳು ಜಂಟಿಯಾಗಿ ಮುಂಡಗೋಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿಯೇ ರೂಟ್ ಮಾರ್ಚ್ ನಡೆಸಿದ್ರು.

​ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಡಗೋಡ ಪಿಐ ರಮೇಶ್ ಹನಾಪುರ ನೇತೃತ್ವದಲ್ಲಿ ಪೊಲೀಸರು ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಂಚರಿಸಿ ಬಂದೋಬಸ್ತ್ ಕೈಗೊಂಡಿದ್ದಾರೆ.