ಮುಂಡಗೋಡ ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 7000 ರೂ. ಮೌಲ್ಯದ 140 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮುಂಡಗೋಡ ಪಟ್ಟಣದ ಕಲಘಟಗಿ ರಸ್ತೆಯ ಖಬರಸ್ಥಾನ ಹತ್ತಿರ ಈ ಕಾರ್ಯಾಚರಣೆ ನಡೆಸಲಾಗಿದೆ. ಕಲಘಟಗಿ ಮಹಮ್ಮದತೌಸಿಫ್ ರುಸ್ತುಂಸಾಬ ಕಾಳಗೆ ಎಂಬಾತನು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಈ ದಾಳಿ ನಡೆಸಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಮೇಶ ಹನಾಪುರ, ಪಿಎಸ್ಐ ಮಂಜುನಾಥ ಗೌಡರ, ಪಿಎಸ್ಐ ನಿಂಗರಾಜ ಹೊಕ್ರಿ, ಎಎಸ್ಐ ಬಸವರಾಜ ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಅಪರಾಧ ಸಿಬ್ಬಂದಿಗಳಾದ ಬಸವರಾಜ ಮಾಗೇರಿ, ಮಂಜುಪ್ಪ ಚಿಂಚಲಿ, ತಿರುಪತಿ ಚೌಡಣ್ಣನವರ, ಮಹೇಶ ಹತ್ತಳ್ಳಿ, ಶಿವಾನಂದ ದಾನಣ್ಣವರ, ಶಂಭುಲಿಂಗ ಜಾವೂರ ಹಾಗೂ ಮಂಜುನಾಥ ಓಣಿಕೇರಿ ಅವರು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
