ಮುಂಡಗೋಡ ಠಾಣೆಗೆ ರವೀಂದ್ರ ಬಿರಾದಾರ ನೂತನ ಕ್ರೈಂ ಪಿಎಸ್ಐ..!

ಮುಂಡಗೋಡ ತಾಲೂಕಿನಲ್ಲಿ ಅತ್ಯಾಚಾರದ ಹೇಯ ಕೃತ್ಯದ ವಿರುದ್ಧ ಪ್ರತಿಭಟನೆ, ಬಂದ್ ಗಳ ಮದ್ಯೆ ಇಡೀ ತಾಲೂಕಿಗರೇ ಅಲರ್ಟ್ ಆಗಿರೋವಾಗ, ಸದ್ದು ಗದ್ದಳಗಳ ನಡುವೆ ಮುಂಡಗೋಡ ಠಾಣೆಗೆ ನೂತನ ಕ್ರೈಂ ಪಿಎಸ್ಐ ಬಂದಿಳಿದಿದ್ದಾರೆ.

ಬನವಾಸಿ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸ್ತಿದ್ದ, ರವೀಂದ್ರ ಬಿರಾದಾರ ಈಗ ಮುಂಡಗೋಡಿಗೆ ನೂತನ ಕ್ರೈಂ ಪಿಎಸ್ಐ.

ಅಸಲು, ಆಲಳ್ಳಿ ವೃದ್ದೆಯ ಕೊಲೆ ಪ್ರಕರಣದ ತನಿಖೆಯಲ್ಲಿದ್ದ ಮುಂಡಗೋಡ ಹಾಗೂ ಶಿರಸಿಯ ಕ್ರೈಂ ಟೀಂ ಗೆ, ಮುಂಡಗೋಡ ಪಿಐ ರಮೇಶ ಹನಾಪುರ ಹೇಗೆ ಬಲ ತುಂಬಿದ್ದರೋ ಹಾಗೇ ಹೆಗಲು ಕೊಟ್ಟವರು ಇದೇ ಕ್ರೈಂ ಪಿಎಸ್ಐ. ಈ ಕಾರಣಕ್ಕಾಗೇ ವೃದ್ದೆಯ ಕೊಲೆ ಆರೋಪಿಯ ಮಾಹಿತಿ ತಿಳಿದ ತಕ್ಷಣವೇ ಎಳೆದು ತರಲು ಹೋಗಿದ್ದ ಟೀಂ ಗೆ ಇವ್ರೇ ಸಾರಥ್ಯ ವಹಿಸಿದ್ರು.
ಪರಿಣಾಮ ಸವಾಲಾಗಿದ್ದ ಕೊಲೆ ಕೇಸ್ ಬಟಾಬಯಲಾಗಿತ್ತು..