ಅಯ್ಯೋ ದೇವ್ರೇ, ಇವತ್ತು ಮುಂಡಗೋಡ ತಾಲೂಕಿನಲ್ಲಿ ಕಳ್ಳತನವಾಗಿದ್ದು ಎರಡಲ್ಲ, ಮೂರು ಕೇಸ್..! ಕರಗಿನಕೊಪ್ಪದ ಸೇವಾಲಾಲ್ ಮಂದಿರದ ಹುಂಡಿ ಕಳ್ಳತನ..!

ಮುಂಡಗೋಡ ತಾಲೂಕಿನಲ್ಲಿ ಕಳ್ಳಕಾಕರ ಅಟ್ಟಹಾಸ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಬದಲಾಗಿ ನಿರಾತಂಕವಾಗಿ ಸರಣೀ ಕಳ್ಳತನ ಮಾಡುತ್ತ ಹೊರಟಿದ್ದಾರೆ ಖದೀಮರು. ಅಂದಹಾಗೆ, ಇವತ್ತು ನಡೆದಿರೋ ಕಳ್ಳತನಗಳು ಕೇವಲ ಎರಡೇ ಅಲ್ಲ. ಬದಲಾಗಿ ಮೂರು. ಪಟ್ಟಣಕ್ಕೆ ಹೊಂದಿಕೊಂಡೇ ಇರೋ ಕರಗಿನಕೊಪ್ಪದ ಸೇವಾಲಾಲ್ ದೇವಸ್ಥಾನದ ಹುಂಡಿಯನ್ನೇ ಎತ್ತಾಕೊಂಡು ಹೋಗಿದ್ದಾರೆ ಕಳ್ಳರು..!

ಸೇವಾಲಾಲರ ದೇವಸ್ಥಾನ..!
ಅಂದಹಾಗೆ, ನಿನ್ನೆ ರಾತ್ರಿ ನಂದಿಪುರದ ಶ್ರೀನಿವಾಸರ ಅಂಗಡಿ ಹಾಗೂ ಬಾಚಣಕಿಯ ಕರಿಯಮ್ಮ ದೇವಿ ದೇವಸ್ಥಾನದ ಜೊತೆ ಜೊತೆಗೇ ಕರಗಿನಕೊಪ್ಪ ತಾಂಡಾದಲ್ಲಿ ಅಲ್ಲಿನ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲರ ದೇವಸ್ಥಾನದ ಹುಂಡಿಯನ್ನೂ ದೋಚಿದ್ದಾರೆ ಕಳ್ಳರು. ದೇವಸ್ಥಾನದ ಬೀಗ ಮುರಿದು ಒಳ ಹೊಕ್ಕಿರೋ ಖದೀಮರು, ದೇವರ ರೊಕ್ಕವನ್ನೇ ಎಗರಿಸಿದ್ದಾರೆ.

ಏನಿಲ್ಲವೆಂದರೂ ಒಂದೂವರೇ ಲಕ್ಷ..!
ಅಸಲು, ಇಡೀ ಕರಗಿನಕೊಪ್ಪ ತಾಂಡಾ ಜನರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲರ ಕಾಣಿಕೆ ಹುಂಡಿಯನ್ನು ಕಳ್ಳರು ಕಂತ್ರಿ ಮಾಡಿದ್ದಾರೆ. ಇಲ್ಲಿನ ಗ್ರಾಮಸ್ಥರು ಹೇಳುವ ಪ್ರಕಾರ ಏನಿಲ್ಲವೆಂದರೂ ಒಂದೂವರೇ ಲಕ್ಷ ರೂ. ದೇವರ ರೊಕ್ಕ ಕಳ್ಳತನವಾಗಿದೆ ಅಂತೆ. ಹೀಗಾಗಿ, ಸದ್ಯ ಇಡೀ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಯಥಾರೀತಿ ನಮ್ಮ ಮುಂಡಗೋಡಿನ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ,👉 ಮುಂಡಗೋಡ ತಾಲೂಕಿನಲ್ಲಿ ಮತ್ತೇ ಎರಡು ಕಳ್ಳತನ..! ಬಾಚಣಕಿ ದೇವಸ್ಥಾನ ಹಾಗೂ ನಂದಿಪುರದಲ್ಲಿ ಅಂಗಡಿ ದೋಚಿದ ಕಳ್ಳರು..! ದೇವ್ರೇ ನೀನೇ ಕಾಪಾಡು..!