ಮುಂಡಗೋಡ ಪೊಲೀಸರ ದಾಳಿ; ದೇವಸ್ಥಾನದ ಮುಂಭಾಗದಲ್ಲೇ ಇಸ್ಪೀಟ್ ಆಡುತ್ತಿದ್ದ ಐವರ ವಿರುದ್ಧ ಕೇಸು..!

ಮುಂಡಗೋಡ: ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಐವರ ವಿರುದ್ಧ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜೂಜಾಟಕ್ಕೆ ಬಳಸಿದ್ದ ₹6,700 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಆ.27ರಂದು ಬೆಳಗಿನ ಜಾವ ಸುಮಾರು 3.10 ಗಂಟೆಗೆ ಕಾಳಗಿನಕೊಪ್ಪ ಗಣಪತಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಐವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ₹6,700 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಪತ್ತೆಯಾಗಿವೆ.
ಪ್ರಕರಣದಲ್ಲಿ ಪರಶುರಾಮ ಕಲ್ಲಪ್ಪ ಛಲವಾದಿ (46), ಅಕ್ಬರಶಾ ಅಕ್ತರ್‌ಶಾ ಮಿರಾಶಿ (32), ಗೌಸಮೊದ್ದಿನ್ ಸರವರಸಾಬ್ ಉಸ್ತಾದ್ (27), ಗಣೇಶ ಫಕ್ಕೀರಪ್ಪ ಲಮಾಣಿ (43) ಹಾಗೂ ನಾಗರಾಜ ಹನುಮಂತಪ್ಪ ವಾಲ್ಮೀಕಿ (56) ಎಂವುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದ್ರೊಂದಿಗೆ ದೇವಸ್ಥಾನದ ಮುಂಭಾಗವೇ ಜೂಜಾಟಕ್ಕೆ ಸ್ಥಳವಾಗಿಸಿಕೊಂಡಿದ್ದ ಪ್ರಕರಣ ಇದೀಗ ಸಾರ್ವಜನಿಕರ ಗಮನ ಸೆಳೆದಿದ್ದು, ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.