ಬಾಚಣಕಿ ಬಳಿ ಟಿಪ್ಪರ್, ಬೈಕ್ ಮುಖಾಮುಕಿ ಡಿಕ್ಕಿ, ಜೇನಮುರಿಯ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಹುಬ್ಬಳ್ಳಿ ರಸ್ತೆಯಲ್ಲಿ ಭೀಕರ ಅಫಘಾತವಾಗಿದೆ. ಟಿಪ್ಪರ್ ಹಾಗೂ ಬೈಕ್‌ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ

ಮುಂಡಗೋಡ ತಾಲೂಕಿನ ಜೇನಮುರಿ ಗೌಳಿದಡ್ಡಿಯ ಬಾಬು(50) ಎಂಬುವವನೇ ಅಪಘಾತದಲ್ಲಿ ಸಾವು ಕಂಡಿದ್ದಾನೆ. ಈತ ತನ್ನ ಬೈಕ್ ನಲ್ಲಿ ಬರುತ್ತಿರುವಾಗ, ಟಿಪ್ಪರ್ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.