ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!

ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯ ಬ್ಲೂಹಿಲ್ ಹೋಟೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಮುಂಡಗೋಡ ಪಟ್ಟಣದ ಹಳೂರು ಓಣಿ ನಿವಾಸಿ ಇಸ್ಮಾಯಿಲ್ ಬಾಬುಸಾಬ್ ಜಮಖಂಡಿ (40) ಎಂದು ಗುರುತಿಸಲಾಗಿದೆ.

​ಆರೋಪಿಯು ಹಳದಿ ಬಣ್ಣದ ಬ್ಯಾಗ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು, ಯಲ್ಲಾಪುರ ರಸ್ತೆಯ ಬ್ಲೂಹಿಲ್ ಹೊಟೇಲ್ ಬಳಿ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಳಿ ಇದ್ದ ಸುಮಾರು 25,000 ರೂ. ಮೌಲ್ಯದ 436 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು 30,000 ರೂ. ಮೌಲ್ಯದ ಬೈಕ್ ಸೇರಿದಂತೆ ಒಟ್ಟು 55,000 ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್,
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ರವರ ಮಾರ್ಗದರ್ಶನದಲ್ಲಿ ಅಕ್ರಮ ಗಾಂಜಾವನ್ನು ಮಾರಾಟ ಮಾಡುವ ಆರೋಪಿತನನ್ನು ಬಂಧಿಸುವಲ್ಲಿ ಮುಂಡಗೋಡ ಪಿಐ ರಮೇಶ್ ಹನಾಪುರ, ಪಿಎಸ್ಐ ಮಂಜುನಾಥ ಗೌಡರ ಸಿಬ್ಬಂದಿಗಳಾದ ಪ್ರೊಬೇಷನರಿ ಪಿಎಸ್‌ಐ ಕಾಸಿಮಸಾ ವಾಗಣಗೇರಿ, ಸಿಬ್ಬಂದಿಗಳಾದ ಶಿದ್ದಲಿಂಗೇಶ ಎಸ್, ಅಣ್ಣಪ್ಪ ಬುಡಿಗೇರ, ಕೆಂಚಪ್ಪ ಜಾಲಿಕಟ್ಟಿ, ಮುತ್ತು ಭೋವಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ,ಮತ್ತು ಬಸವರಾಜ ಒಡೇಯರ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರುಗಳಿಗೆ ಎಸ್ಪಿ ದೀಪನ್ ಎಂ.ಎನ್ ಪ್ರಶಂಶಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ‌.