ಮುಂಡಗೋಡಿನಲ್ಲಿ ಭೀಕರ ಹತ್ಯೆ, NMD ಜಮೀರ್ ಅಹ್ಮದ್ ದರ್ಗಾವಾಲೆಯ ಹತ್ಯೆ..! ಬಸ್ ಸ್ಟಾಂಡ್ ಎದುರಿನ ಹೊಟೆಲ್ ನಲ್ಲೇ ಘಟನೆ..!


ಮುಂಡಗೋಡ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಇಲ್ಲಿನ NMD ಜಮೀರ್ ಅಹ್ಮದ್ ದರ್ಗಾವಾಲೆಯನ್ನ ದುಷ್ಕರ್ಮಿಗಳು ಕೊಚ್ಚಿ ಭೀಕರ ಹತ್ಯೆ ಮಾಡಿದ್ದಾರೆ. ಮುಂಡಗೋಡ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೆಲ್ ನಲ್ಲಿ ಘಟನೆ ನಡೆದಿದೆ.

ಹಲವು ದುಷ್ಕರ್ಮಿಗಳ ತಂಡ ಹೊಟೇಲ್ ನಲ್ಲಿ ಕುಳಿತಿದ್ದ ಜಮೀರ್ ಗೆ ಮೊದಲು ಗುಂಡು ಹಾರಿಸಿದೆ. ನಂತರ ಕುತ್ತಿಗೆ ಸೀಳಿ ಭೀಕರವಾಗಿ ಹತ್ಯೆ ಮಾಡಿ ಹೋಗಿದ ಅನ್ನೋ ಅನುಮಾನ ವ್ಯಕ್ತವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.