ಮುಂಡಗೋಡ ತಾಲೂಕ ಕ್ಷತ್ರೀಯ ಮರಾಠ ಮಂಡಳದ ಅಧ್ಯಕ್ಷರಾಗಿ ನಾಗರಾಜ್ ಸಂಕನಾಳ, ಉಪಾಧ್ಯಕ್ಷರಾಗಿ ಜ್ಞಾನದೇವ ಗುಡಿಯಾಳ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಮುಂಡಗೋಡಿನ ಮರಾಠಾ ಸಭಾಭವನದಲ್ಲಿ ರವಿವಾರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಇನ್ನು ಕಾರ್ಯದರ್ಶಿಯಾಗಿ ಸಣ್ಣಪ್ಪ ಕಾಶಿಬಾನವರ ಆಯ್ಕೆಯಾದರು. ಅದ್ರಂತೆ, ಸದಸ್ಯರುಗಳಾಗಿ ವಿಠ್ಠಲ ಬಾಳಂಬೀಡ, ಸಂಪತ್ ಕುಮಾರ್ ಕ್ಯಾಮಣಕೇರಿ, ಅಶೋಕ್ ಕೀರ್ತಪ್ಪನವರ್, ನಾರಾಯಣ ಗುರಪ್ಪನವರ್, ಮಾರುತಿ ಚೌಹಾಣ್, ಗಿರೀಶ್ ಓಣಿಕೇರಿ, ಪರಶುರಾಮ್ ತಹಶೀಲ್ದಾರ್, ಶ್ರೀಮತಿ ನಾಗವೇಣಿ ಮುರುಳಿಧರ್ ರಾಣೋಜಿ ಹಾಗೂ ಶ್ರೀಮತಿ ಶಶಿಕಲಾ ದಶರಥ ಸಾಳೊಂಕಿ ಆಯ್ಕೆಯಾಗಿದ್ದಾರೆ.
