SSLC ಫಲಿತಾಂಶ..! ಹುನಗುಂದದ ಭಾಗ್ಯಲಕ್ಷ್ಮೀ ಪ್ರಥಮ, ರಿಷಿಕ್ ದ್ವಿತೀಯ, ಸಿಂಚನಾ ತೃತೀಯ..!

SSLC ಫಲಿತಾಂಶ ಪ್ರಕಟವಾಗಿದೆ‌. ಹುನಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಬಸವರಾಜ್ ಬಿಸನಳ್ಳಿ 616 ಅಂಕ ಪಡೆಯುವ ಮೂಲಕ
ಮುಂಡಗೋಡ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಅದ್ರಂತೆ ಮುಂಡಗೋಡಿನ ಬ್ಲೂಮಿಂಗ್ ಬಡ್ಸ್ ಶಾಲೆತ ವಿದ್ಯಾರ್ಥಿ ರಿಷಿಕ್ ರಮೇಶ್ ಭೋವಿ 607 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ.

ಇನ್ನು ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಸಿಂಚನಾ ನಿಂಗಪ್ಪ ಬಾರ್ಕರ 606 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.