ಕೊಳಗಿ ಕಾಡಲ್ಲಿ ಮಳಗಿ ವೃದ್ದೆಯ ಭಯಾನಕ ಮರ್ಡರ್, ಆರೋಪಿ ಹಂತಕ ಆರೆಸ್ಟ್..! ಸಿಕ್ಕೇ ಬಿಡ್ತು ರುಂಡ, ಆರೋಪಿ ಇವನೇ ನೋಡಿ..!


ಮಳಗಿಯ ಕೊಳಗಿ ಕಾಡಲ್ಲಿ ನಡೆದ ಭಯಾನಕ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ರಾಕ್ಷಸೀ ಹಂತಕನ ಅರೆಸ್ಟ್ ಆಗಿದೆ. ಮುಂಡಗೋಡ ಪೊಲೀಸರ ಜಬರ್ದಸ್ತ್ ಕಾರ್ಯಾಚರಣೆಯಲ್ಲಿ ಆರೋಪಿ ಹಂತಕನ ಹೆಡೆಮುರಿ ಕಟ್ಟಲಾಗಿದೆ‌. ಅಂದಹಾಗೆ, ಆರೋಪಿ ಹಂತಕನ ಹೆಸರು ಕೃಷ್ಣ. ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವನು. ಸದ್ಯ ಮಳಗಿಯ ತನ್ನ ಹೆಂಡತಿ ಮನೆಯಲ್ಲೇ ವಾಸವಿದ್ದವನು. ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಆರೋಪಿಯ ಎಕ್ಸಕ್ಲೂಸಿವ್ ಪೋಟೋ ದೊರೆತಿದೆ.

ಆರೋಪಿ ಹಂತಕ ಸಿಕ್ಕಿದ್ದೇ ತಡ, ಹತ್ಯೆಯ ಅಷ್ಟೂ ಹಕೀಕತ್ತುಗಳನ್ನು ಬಾಯಿ ಬಿಟ್ಟಿದ್ದಾನಂತೆ ಹಂತಕ. ಹೀಗಾಗಿ, ರುಂಡ ಕಡಿದು ಅರ್ದಮರ್ದ ಸುಟ್ಟು ಹಾಕಿದ್ದ, ಅದ್ರಲ್ಲಿ ರುಂಡ ಹಾಗೆ ಉಳಿದಿತ್ತು, ಅದನ್ನ ಹಾನಗಲ್ ತಾಲೂಕಿನ ಶಿವಪುರ ಸಮೀಪದ ಕೆರೆಯ ಬಳಿ ಹಾಕಿದ್ದ, ಅದೀಗ ಅಲ್ಲಿನ ಗದ್ದೆಯಲ್ಲಿ ಹತ್ಯೆಗೀಡಾದ ಮಹಿಳೆಯ ತಲೆಬುರುಡೆ ಪತ್ತೆಯಾಗಿದೆ‌. ಆರೋಪಿಯ ಜೊತೆ ಸ್ಥಳ ಪರಿಶೀಲನೆ ವೇಳೆ, ಕೃತ್ಯಕ್ಕೆ ಬಳಸಿರೋ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು, ಆರೋಪಿ ಹಂತಕ ಹತ್ಯೆಗೂ ಮುಂಚೆ ಮೃತ ಶಿವಕ್ಕಳನ್ನು ಬೈಕ್‌ಮೇಲೆ ಸವಾರಿ ಮಾಡಿಸಿದ್ದ ಎಕ್ಸಕ್ಲೂಸಿವ್ CCTV ಪೂಟೇಜ್ ಗಳು ಪಬ್ಲಿಕ್ ಫಸ್ಟ್ ನ್ಯೂಸ್ ಗೆ ದೊರೆತಿವೆ. ಅಲ್ದೇ, ಆರೋಪಿಯ ಜೊತೆ ಸ್ಥಳಪರಿಶೀಲನೆ ವೇಳೆ ದೊರೆತಿರೊ ತಲೆ ಬುರುಡೆಯ ದೃಷ್ಯಗಳು ಇಲ್ಲಿವೆ.

ಇದನ್ನೂ ಓದಿ ಕೊನೆಗೂ ಸಿಕ್ತು ಕೊಳಗಿ ಮರ್ಡರ್ ಕೇಸ್ ಹಂತಕನ ಸುಳಿವು..! ರುಂಡವಿಲ್ಲದ ಬೆತ್ತಲೆ ಶವದ ಭಯಾನಕ ಹತ್ಯೆಯ ಅಸಲೀ ಕಹಾನಿ ಏನ್ ಗೊತ್ತಾ..? 

ಇದನ್ನೂ ಓದಿ  “ಕೊಳಗಿ”ಯ ಕಾಡಲ್ಲಿ ಹಾಗೆ ಶಿವಕ್ಕನ ರುಂಡ ಕಡಿದಿದ್ದವನು “ಮಳಗಿ”ಯ ಮನೆ ಅಳಿಯ..! ಅವತ್ತು ಮಟಮಟ ಮದ್ಯಾನವೇ ಆಕೆಯನ್ನ ಕೊಚ್ಚಿ ಹಾಕಿದ್ದ ಹಂತಕ..!!