ಮುಂಡಗೋಡಿನ ಟಿಬೇಟಿಯನ್ ಕಾಲೋನಿಯ ಲಾಮಾನ ಹತ್ಯೆ ಮಾಡಿದ ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ ಪೊಲೀಸ್ರು. ಮೊನ್ನೆ ಎಪ್ರೀಲ್ 29 ರಂದು ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ತಾಶಿ ದೊಂಡುಪ ಎಂಬಾತನನ್ನು ಹತ್ಯೆ ಮಾಡಿ, ಕೈಕಾಲು ಕಟ್ಟಿ ಧಾರವಾಡ ಹೊರವಲಯದಲ್ಲಿ ಶವ ಎಸೆದು ಹೋಗಿದ್ದ ಹಂತಕರನ್ನು ಧಾರವಾಡ ಪೋಲೀಸರು ಕೊನೆಗೂ ಬಂಧಿಸಿದ್ದಾರೆ.

ಹಣಕ್ಕಾಗಿ ನಡೀತು ಕೊಲೆ..!
ಅಂದಹಾಗೆ, ಸಾದಾ ಸಂಪನ್ನನಾಗಿದ್ದ ತಾಸಿ ದೊಂಡುಪ್ ಸದ್ಯ ಹೆಣವಾಗಿರೋದರ ಹಿಂದೆ ಝಣ ಝಣ ಕಾಂಚಾಣದ ಕಾರಣವಿದೆ. ಲಾಮಾನ ಬಳಿ ಹಣ ಇದೆ ಅಂತಾ ಆತನನ್ನ ಕಿಡ್ನ್ಯಾಪ್ ಮಾಡಿ, ಆತನ ಬಳಿ ನಯಾಪೈಸೆಯೂ ಸಿಗಲಿಲ್ಲ‌ ಅಂದಾಗ, ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ ಹಂತಕರು.

ಅವ್ರು ಕಬ್ಬು ಕಟಾವ್ ಗ್ಯಾಂಗನವ್ರು..!
ಅಸಲು, ಮುಂಡಗೋಡ ತಾಲೂಕಿಗೆ ಪ್ರತೀವರ್ಷವೂ ಕಬ್ಬು ಕಟಾವ್ ಮಾಡಲು ಮಹಾರಾಷ್ಟ್ರದಿಂದ ಗ್ಯಾಂಗ್ ಗಳು ಬರತ್ತೆ ಅಲ್ವಾ..? ಅಂತದ್ದೇ ಕಬ್ಬು ಕಟಾವ್ ಮಾಡುವ ಗ್ಯಾಂಗ್ ನವರೇ ಈ‌ ಲಾಮಾನ ಹತ್ಯೆ ಮಾಡಿದ್ದಾರೆ. ಅಲ್ದೆ ಹತ್ಯೆ ಮಾಡಿ ಮಹಾರಾಷ್ಟ್ರ ಕಡೆ ಹೋಗುತ್ತಿದ್ದಾಗ ದಾರಿ‌ಮದ್ಯೆ ಧಾರವಾಡದ ಸಮೀಪ ಹೆಣ ಬೀಸಾಡಿ ಹೋಗಿದ್ದಾರೆ. ಹೀಗಾಗಿ, ಪ್ರಕರಣವನ್ನು ಬೇಧಿಸಿರೋ ಧಾರವಾಡ ಪೋಲಿಸರು ಮೂವರು ನರರಾಕ್ಷಸ ಹಂತಕರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ‌

ಬಂಧಿತರನ್ನು ಮಹಾರಾಷ್ಟ್ರದ ಸಂಕೇತ ಯಾದವ್, ವೈಭವ್ ಚವ್ಹಾಣ, ಸಿದ್ದೇಶ ಭೋಸ್ಲೆ ಎಂದು ಗುರುತಿಸಲಾಗಿದೆ. ಇನ್ನುಳಿದ ಆರೋಪಿಗಳಿಗೆ ಧಾರವಾಡ ಪೋಲೀಸರು ಬಲೆ ಬೀಸಿದ್ದಾರೆ.