ಧಾರವಾಡ ರೂರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಡಗೋಡಿನ ಟಿಬೇಟಿಯನ್ ಲಾಮಾ ಕ್ಯಾಂಪ್ ನಂಬರ್ 1ರ ಲಾಮಾನ(ಬೌದ್ದ ಸನ್ಯಾಸಿ) ಶವ ಪತ್ತೆಯಾಗಿದೆ. ಧಾರವಾಡದ ಹೊರವಲಯದ ಹೈವೇ ಪಕ್ಕದಲ್ಲಿ ಮೃತದೇಹ ರಕ್ತ ಸಿಕ್ತವಾಗಿ ದೊರೆತಿದ್ದು, ಲಾಮಾನ ಕಾಲಿಗೆ ಹಗ್ಗದಿಂದ ಕಟ್ಟಿದ್ದು, ಮುಖಕ್ಕೆ ಚಚ್ಚಿ ಭೀಕರವಾಗಿ ಕೊಲೆ ಮಾಡಿ ಬೀಸಾಕಿರೋ ಅನುಮಾನ ವ್ಯಕ್ತವಾಗಿದೆ.

ಅಂದಹಾಗೆ, ಲಾಮಾ ಕ್ಯಾಂಪ್ ನಂಬರ್ 1 ರ ತಶಿ ದುಂಡುಪ್ (38) ಎಂಬುವನದ್ದೇ ಶವ ಅಂತಾ ಗುರುತಿಸಲಾಗಿದ್ದು, ಧಾರವಾಡ ಗ್ರಾಮೀಣ ಠಾಣೆಯ ಕ್ರೈಂ ಟೀಂನ ಪೊಲೀಸರು ಮುಂಡಗೋಡಿಗೆ ಬಂದು ಮಾಹಿತಿ ಕಲೆ ಹಾಕಿದ್ದಾರೆ. ಅದ್ರಂತೆ ಮುಂಡಗೋಡ ಪೊಲೀಸರೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸನ್ಯಾಸಿನಾ ಕೊಲ್ಲುವಷ್ಟು ದುಷ್ಮನಿ ಏನಿತ್ತು..?
ಅಷ್ಟಕ್ಕೂ, ಅಕ್ಷರಶಃ ಅಹಿಂಸಾ ಬೋಧನೆ ಮಾಡುವ ಬೌದ್ದ ಸನ್ಯಾಸಿಯನ್ನ ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿದ್ದು ಯಾಕೆ ಅನ್ನೋ ಅನುಮಾನ ಮೂಡಿದೆ. ಹಣಕ್ಕಾಗಿ ಲಾಮಾ ಹತ್ಯೆಯಾದ್ನಾ..? ಅಥವಾ ಇನ್ಯಾವುದೋ ಬೇರೆ ಕಾರಣವಿದೆಯಾ..? ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

