NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ‌ ಸಂಖ್ಯೆ..!


ಮುಂಡಗೋಡಿನ NMD ಜಮೀರ್ ಹತ್ಯೆ ಕೇಸಲ್ಲಿ ಮತ್ತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಖಡಕ್ ತನಿಖೆಗೆ ಇಳಿದಿರೋ ತಂಡ, ಮತ್ತೆ ನಾಲ್ವರನ್ನು ಬಂಧಿಸಿದೆ. ಈ ಮೂಲಕ NMD ಹತ್ಯೆ ಕೇಸಲ್ಲಿ ಇದುವರೆಗೂ ಒಟ್ಟೂ 11ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ.

ಇವರೇ ಆರೋಪಿಗಳು..!
ಮುಂಡಗೋಡ ಕಿಲ್ಲೆ ಓಣಿಯ ಮಲ್ಲಿಕಜಹಾನ @ ಜಹೀರ ತಂದೆ ಶಬ್ಬೀರ ಶೇಖ್, ಮಹಮ್ಮದ ಸಾಧೀಕ ತಂದೆ ಅಬ್ದುಲ್ ರಜಾಕ ದರ್ಗಾವಾಲೆ ಮುಂಡಗೋಡ ಮಾರಿಕಾಂಬಾ ನಗರದ ಅಸಗರ ಅಲಿ ತಂದೆ ಮಕ್ತುಮ ಅಲಿ ದೊಡ್ಮನಿ , ಹಾಗೂ ಸಾಹೀಲ್ ತಂದೆ ಬಾಬಾಬುಡನ್ ಶೇಖ @ ನಂದಿಕಟ್ಟಿ ಎಂಬುವವರನ್ನು ಪೊಲೀಸ್ರು ಬಂಧಿಸಿದ್ದಾರೆ.

ಪಿಸ್ತೂಲ್ ತರೋಕೆ ಹೋದವರಿವರು..!
ಅಂದಹಾಗೆ, ಜಮೀರ್ ಹತ್ಯೆ ಕೇಸಲ್ಲಿ ಸದ್ಯ ಏ1 ಆರೋಪಿ ಮಂಜುನಾಥ್ ಕಾಜಗಾರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಇವ್ರು, NMD ಜಮೀರ್ ಹತ್ಯೆ ಕೇಸಲ್ಲಿ ಫಿಟ್ ಆಗಿದ್ದಾರೆ. ಅಲ್ದೆ, ಹತ್ಯೆ ಕೇಸಲ್ಲಿ ಬಳಸಲಾಗಿದ್ದ ಎರಡು ಪಿಸ್ತೂಲ್ ಗಳನ್ನು ಇವ್ರೇ ತರೋಕೆ ಅಂತಾ ಹೊರ ರಾಜ್ಯಕ್ಕೆ ಹೋಗಿ ಬಂದಿದ್ದರು. ಹೀಗಾಗಿ, ತನಿಖೆ ವೇಳೆ ವಿಚಾರ ಬಯಲಾದ ಹಿನ್ನೆಲೆಯಲ್ಲಿ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಅಸಲು, ಜಮೀರ್ ಹತ್ಯೆಗೆ ಬಳಸಿದ್ದ ಕಂಟ್ರಿ ಮೇಡ್ ಪಿಸ್ತೂಲ್ ಅನ್ನು ಕಳೆದ ಎರಡು ವರ್ಷಗಳ ಹಿಂದೆಯೇ ಉತ್ತರ ಪ್ರದೇಶದ ಗೋರಖಪುರದಿಂದ ತರಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದೇ ಪಿಸ್ತೂಲ್ ಬಳಸಿ NMD ಜಮೀರ್‌ನ ಹತ್ಯೆ ನಡೆಸಲಾಗಿದೆ ಅನ್ನೋದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಈ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ, NMD ಜಮೀರ್ ಹತ್ಯೆ ಕೇಸಲ್ಲಿ ಈ ನಾಲ್ವರೂ ಸೇರಿದಂತೆ ಒಟ್ಟೂ 11ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ.