ಮುಂಡಗೋಡಿನಲ್ಲಿ ಗೃಹಬಳಕೆ ಸಿಲಿಂಡರಿಗಾಗಿ ಇಡೀ ತಾಲೂಕಿನ ಜನ ಹೈರಾಣಾಗಿದ್ದಾರೆ. ಬೆಳಿಗ್ಗೆ ಎದ್ದಕೂಡಲೇ ಮುಂಡಗೋಡಿನ HP ಗ್ಯಾಸ್ ಗೋಡೌನ ಎದುರು ಸಾಲುಗಟ್ಟಿ ನಿಲ್ಲುವ ಜನ ರೋಸಿಹೋಗಿದ್ದಾರೆ. ಹೀಗಾಗಿ, ಇವತ್ತು ಬುಧವಾರ ಬೆಳ್ಳಂಬೆಳಿಗ್ಗೆ ಮುಂಡಗೋಡಿನ HP GAS ಗೋಡೌನ್ ಎದುರು ಖಾಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದ್ರು.

ಅಂದಹಾಗೆ, ಇಡೀ ಮುಂಡಗೋಡ ತಾಲೂಕಿನಾಧ್ಯಂತ ಸಿಲಿಂಡರ್ ಸಮಸ್ಯೆ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಾಗಲೂ ಕಾಯ್ದು ಕಾಯ್ದು ಕುಳಿತು ಸಿಲಿಂಡರ್ ಪಡೆಯಲು ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬುಕ್‌ಮಾಡಿದಾಗಲೂ ನಮಗೆ ಸಿಲಿಂಡರ್ ಸಿಗುತ್ತಿಲ್ಲ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ HP GAS ನ ಬಸವರಾಜ್ ಓಸಿಮಠ ಸಾರ್ವಜನಿಕರಿಗೆ ಸಮಾಧಾನ ಪಡಿಸಲು ಯತ್ನಿಸಿದ್ರು. ಆದ್ರೆ ನಮಗೆ ತಕ್ಷಣವೇ ಸಿಲಿಂಡರ್ ಬೇಕು ಅಂತಾ ಸಾರ್ವಜನಿಕರು ಹಠ ಹಿಡಿದು ಪ್ರತಿಭಟನೆ ನಡೆಸಿದ್ರು.