ಮುಂಡಗೋಡಿನ ಹೆಸ್ಕಾಂ ನ AEE ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. 65 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿಯೇ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಕಾರವಾರ ಹಾಗೂ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ಎರಡು ತಂಡ ಕಾರ್ಯಾಚರಣೆ ನಡೆಸಿದೆ.

ಮುಂಡಗೋಡಿನ ಹೆಸ್ಕಾಂ ಉಪವಿಭಾಗದ AEE ಧರ್ಮರಾಜ ಬೆಡಸಗಾಂವ್ ಎಂಬುವವರೇ ಲೋಕಾ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಮುಂಡಗೋಡಿನ ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ನೀಡಿದ ದೂರಿನ ಮೇರೆಗೆ ದಾಳಿಗೆ ಇಳಿದಿದ್ದ ಲೋಕಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಲಕ್ಷ ಲಕ್ಷ ಲಂಚ ಬೇಕಂತೆ..!
ಅಂದಹಾಗೆ, ಮುಂಡಗೋಡಿನ ಬಿಸಿಎಂ ಹಾಸ್ಟೆಲ್ ನ ವಿದ್ಯುತ್ ಕಾಮಗಾರಿಯ ಸಂಬಂಧವಾಗಿ ಹಾಗೂ ಇನ್ನಿತರ ಹಲವು ಕಾಮಗಾರಿಗಳನ್ನು ನೀಡುವ ಸಲುವಾಗಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ AEE ಧರ್ಮರಾಜ್ ಬೆಡಸಗಾಂವ್ ಮುಂಗಡ ಹಣವಾಗಿ 65 ಸಾವಿರ ರೂ. ಪಡೆಯುತ್ತಿದ್ದಾಗ ತಮ್ಮ ಕಚೇರಿಯಲ್ಲೇ ಲೋಕಾ ಖೆಡ್ಡಾಕ್ಕೆ ಬಿದ್ದಿದ್ದಾರೆ.
ಕಾರವಾರ ಲೋಕಾಯುಕ್ತ, ಧಾರವಾಡ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ.
