ಮುಂಡಗೋಡ ತಾಲೂಕಿನ ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು KSRTC ಅಧಿಕಾರಿಗಳನ್ನು ತೀವ್ರ ತರಾಟೆಗೆ ಪಡೆದಿದ್ದಾರೆ.

ಇನ್ನು, ಮಳಗಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯೂಸಿ ವಿದ್ಯಾರ್ಥಿನಿ ಮಂಜುಳಾ ವಿಠ್ಠಲ ಗಾವಡೆ ಎಂಬುವವಳೆ ಗಾಯಗೊಂಡಿರೋ ವಿದ್ಯಾರ್ಥಿನಿಯಾಗಿದ್ದಾಳೆ.

ಅಸಲು, ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿಗಳು ಹತ್ತುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿ ಬಸ್ ನಿಂದ ಕೆಳಗೆ ಬಿದ್ದಿದ್ದಾಳೆ. ನಂತರ ಬಸ್ ಆಕೆಯ ಕೈಗೆ ತೆರೆದಿದೆ ಎನ್ನಲಾಗಿದ್ದು, ಕೈಗೆ ಗಾಯ ಆಗಿದೆ ಅಂತಾ ತಿಳಿದು ಬಂದಿದೆ.

ಸದ್ಯ ಗಾಯಗೊಂಡಿರೋ ವಿದ್ಯಾರ್ಥಿನಿಯನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿತ್ಯವೂ ಇದೇ ಗೋಳು..!
ನಿಜ ಅಂದ್ರೆ, ಮಳಗಿ ಪ್ರೌಢಶಾಲೆ, ಕಾಲೇಜಿಗೆ ವರುವ ಸುತ್ತ ಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಅಕ್ಷರಶಃ ಆತಂಕದಲ್ಲಿದ್ದಾರೆ. ಈ ವಿದ್ಯಾರ್ಥಿಗಳು ನಿತ್ಯವೂ ಬಸ್ ನಲ್ಲಿ ಜೋತು ಬಿದ್ದೇ ಹೋಗುವ ಅನಿವಾರ್ಯತೆ ಇದೆ.

ಅಸಲು, ಮುಂಡಗೋಡಿಗೆ KSRTC ಡೀಪೋ ಅನ್ನೋದು ಜಸ್ಟ್ ನಾಮಕೆ ವಾಸ್ತೆ ಅನ್ನೋ ಹಾಗೆ ಆಗಿದೆ. ಯಾಕಂದ್ರೆ ಈ ಡೀಪೋದಲ್ಲಿ ಇರುವ ಬಹುತೇಕ ಬಸ್ ಗಳು ಇನ್ನೇನು ಗುಜರಿಗೆ ಸೇರುವಂತಾಗಿವೆ. ಹೀಗಾಗಿ, ತಾಲೂಕಿನ ಹಲವೆಡೆ ಬಸ್ ಗಳು ಸಮರ್ಪಕವಾಗಿ ಜನರಿಗೆ, ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ. ದುರಂತ ಅಂದ್ರೆ KSRTC ಅಧಿಕಾರಿಗಳಿಗೆ ಇದೇಲ್ಲ ಗೊತ್ತಿದ್ರೂ ಏನೂ ಮಾಡುತ್ತಿಲ್ಲ. ಇದೇ ಇಲ್ಲಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.