ಮುಂದಿನ 6 ದಿನಗಳ ಕಾಲ ಉತ್ತರ ಕನ್ನಡ ಸೇರಿ, ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ..!

ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ (ಜೂನ್ 29 ರಿಂದ ಜುಲೈ 05, 2026 ರವರೆಗೆ) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯಲ್ಲಿ ಭಾರೀ ಮಳೆ..!
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಜೂನ್ 30 ರಿಂದ ಜುಲೈ 5 ರವರೆಗೆ ಅತಿ ಭಾರೀ ಮಳೆಯಾಗುವ (Very heavy rain) ಸಾಧ್ಯತೆಯಿದೆ. ಜೂನ್ 29 ರಂದು ಕರಾವಳಿಯ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದ್ದು, ಗಂಟೆಗೆ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸಲಿದೆ.

​ಉತ್ತರ ಒಳನಾಡು..!
ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಜುಲೈ 1 ರಿಂದ ಜುಲೈ 5 ರವರೆಗೆ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 29 ಮತ್ತು 30 ರಂದು ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

​ದಕ್ಷಿಣ ಒಳನಾಡು..!
ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಜುಲೈ 3 ರಿಂದ ಜುಲೈ 5 ರವರೆಗೆ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 30 ರಿಂದ ಜುಲೈ 2 ರವರೆಗೆ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು, ಜೂನ್ 29 ರಿಂದಲೇ ರಾಜ್ಯದ ಈ ಭಾಗಗಳಲ್ಲಿ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

​ಮಳೆಯ ತೀವ್ರತೆ ಹೆಚ್ಚಿರುವ ಕಾರಣ ಸಾರ್ವಜನಿಕರು ಮತ್ತು ಮೀನುಗಾರರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲು ಸೂಚಿಸಲಾಗಿದೆ.

 ಪ್ರಮುಖ ಸುದ್ದಿಗಳು,👉 ಜೋಗೇಶ್ವರಹಳ್ಳ ಶಾಲೆ ಆವರಣದಲ್ಲಿ ಯುವಕನ ಸಾವು ಕೇಸ್; ಸ್ಥಳಕ್ಕೆ BEO ಭೇಟಿ, ಕಟ್ಟು ನಿಟ್ಟಿನ ಕ್ರಮ..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!!

ಮುಂಡಗೋಡಿನ ಇಬ್ಬರಿಗೆ 6 ತಿಂಗಳು ಗಡಿಪಾರು ಮಾಡಿ ಎಸ್ಪಿ ಆದೇಶ, ಓರ್ವ ಕೆಜಿಎಫ್ ಜಿಲ್ಲೆಗೆ, ಮತ್ತೋರ್ವ ಮಂಡ್ಯ ಜಿಲ್ಲೆಗೆ..! ಅಷ್ಟಕ್ಕೂ ಯಾರ್ಯಾರು ಗಡಿಪಾರು..? ಯಾಕೆ..?

ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿ..? ದೇವರಿಗಂತ ಹೂವು ಕೀಳಲು ಹೋದ ಪೂಜಾರಿ ಹೆಣವಾದ..! ಶಾಲಾ ಆವರಣದ ಬೇಲಿಯಲ್ಲೇ ವಿದ್ಯುತ್..!