ಜೋಗೇಶ್ವರಹಳ್ಳ ಶಾಲೆ ಆವರಣದಲ್ಲಿ ಯುವಕನ ಸಾವು ಕೇಸ್; ಸ್ಥಳಕ್ಕೆ BEO ಭೇಟಿ, ಕಟ್ಟು ನಿಟ್ಟಿನ ಕ್ರಮ..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!!

​ಮುಂಡಗೋಡ ತಾಲೂಕಿನ ಜೋಗೇಶ್ವರಹಳ್ಳ ಗೌಳಿ ದಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿನ್ನೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ‘ಪಬ್ಲಿಕ್ ಫಸ್ಟ್ ನ್ಯೂಸ್’ ಪ್ರಕಟಿಸಿದ ವಿಶೇಷ ವರದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ತಕ್ಷಣವೇ ಸ್ಪಂದಿಸಿದ್ದಾರೆ. ಇಂದು ಶಾಲೆಗೆ ಖುದ್ದಾಗಿ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ವಿದ್ಯುತ್ ಟ್ರಾನ್ಸ್‌ಫಾರ್ಮರ್ ತೆರವುಗೊಳಿಸಲು ಸೂಚನೆ..!
​ಶಾಲಾ ಆವರಣದ ಪಕ್ಕದಲ್ಲೇ ಅಪಾಯಕಾರಿಯಾಗಿರುವ ಹೈಟೆನ್ಷನ್ ಟ್ರಾನ್ಸ್‌ಫಾರ್ಮರ್ ಇರುವುದನ್ನು ಗಮನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅದನ್ನು ತಕ್ಷಣವೇ ಅಲ್ಲಿಂದ ತೆರವುಗೊಳಿಸಿ ಶಾಲೆಯಿಂದ ಸುರಕ್ಷಿತ ದೂರಕ್ಕೆ ವರ್ಗಾಯಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಲು ಶಾಲೆಯ ಮುಖ್ಯ ಶಿಕ್ಷಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಮಕ್ಕಳ ಸುರಕ್ಷತೆಗೆ ತ್ರಿಸೂತ್ರ ಕ್ರಮ..!
ಇನ್ನು, ಜೋಗೇಶ್ವರ ಹಳ್ಳ ಗೌಳಿದಡ್ಡಿ​ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸುರಕ್ಷತೆಗೆ ತ್ರಿಸೂತ್ರ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಬಿಇಒ ಮೇಡಮ್ಮು ಶಿಕ್ಷಕರಿಗೆ ಸೂಚಿಸಿದ್ರು. ​ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಇಂತಹ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಹಾಗೂ ಮಕ್ಕಳ ಸಂಪೂರ್ಣ ರಕ್ಷಣೆಗೆ ಸಂಬಂಧಿಸಿದಂತೆ ಬಿಇಒ ಅವರು ಮುಖ್ಯಸ್ಥರಿಗೆ ಪ್ರಮುಖವಾಗಿ ಮೂರು ಸೂಚನೆಗಳನ್ನು ನೀಡಿದ್ದಾರೆ.

ಇವು ತ್ರಿಸೂತ್ರ ಕ್ರಮಗಳು..!

​ವಿದ್ಯುತ್ ಸುರಕ್ಷತೆ..!
ಶಾಲಾ ಆವರಣದಲ್ಲಿ ಯಾವುದೇ ರೀತಿಯ ವಿದ್ಯುತ್ ಸೋರಿಕೆಯಾಗದಂತೆ ಹಾಗೂ ವಿದ್ಯುತ್ ಲೈನ್‌ಗಳಿಂದ ಮಕ್ಕಳಿಗೆ ಅಪಾಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು.

​ಸರಪಳಿ ಮತ್ತು ಹಾವಿನ ಭಯ ನಿವಾರಣೆ..!ಶಾಲಾ ಆವರಣದ ಸ್ವಚ್ಛತೆ ಕಾಪಾಡಿ, ಹಾವು ಅಥವಾ ಇತರೆ ವಿಷಜಂತುಗಳಿಂದ ಮಕ್ಕಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು.

​ಬಿಸಿಯೂಟದ ಸುರಕ್ಷತೆ (SOP ಪಾಲನೆ)..! ವಿದ್ಯಾರ್ಥಿಗಳಿಗೆ ತಯಾರಿಸುವ ಬಿಸಿಯೂಟದ ವಿಷಯದಲ್ಲಿ ಸರ್ಕಾರದ ನಿಯಮಾವಳಿಗಳನ್ನು (SOP) ಕಡ್ಡಾಯವಾಗಿ ಪಾಲಿಸಿ, ಆಹಾರ ಮತ್ತು ಆರೋಗ್ಯದ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುವುದು.

ಹೀಗೆ, ಪಬ್ಲಿಕ್ ಫಸ್ಟ್ ನ್ಯೂಸ್ ವರದಿ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ತಕ್ಷಣದ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ: 👉ಮುಂಡಗೋಡ ಹೆಸ್ಕಾಂ ನಿರ್ಲಕ್ಷಕ್ಕೆ ಯುವಕ ಬಲಿ..? ದೇವರಿಗಂತ ಹೂವು ಕೀಳಲು ಹೋದ ಪೂಜಾರಿ ಹೆಣವಾದ..! ಶಾಲಾ ಆವರಣದ ಬೇಲಿಯಲ್ಲೇ ವಿದ್ಯುತ್..!

ಇಂದಿನ ಪ್ರಮುಖ ಸುದ್ದಿ👉 ಮುಂಡಗೋಡಿನ ಇಬ್ಬರಿಗೆ 6 ತಿಂಗಳು ಗಡಿಪಾರು ಮಾಡಿ ಎಸ್ಪಿ ಆದೇಶ, ಓರ್ವ ಕೆಜಿಎಫ್ ಜಿಲ್ಲೆಗೆ, ಮತ್ತೋರ್ವ ಮಂಡ್ಯ ಜಿಲ್ಲೆಗೆ..! ಅಷ್ಟಕ್ಕೂ ಯಾರ್ಯಾರು ಗಡಿಪಾರು..? ಯಾಕೆ..?