ಕಾರವಾರ: ತಾಲೂಕಿನಾದ್ಯಂತ ಇಂದು (ಜುಲೈ 2, 2026) ಬೆಳಗ್ಗಿನಿಂದಲೇ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರವಾರ ತಾಲೂಕಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಆದೇಶ ಹೊರಡಿಸಿದ್ದಾರೆ.
ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ.
ಕಲಿಕಾ ದಿನಗಳ ಸರಿದೂಗಿಸಲು ಸೂಚನೆ..!
ಇಂದು ನೀಡಲಾಗಿರುವ ರಜಾವಧಿಯಿಂದಾಗಿ ಉಂಟಾಗುವ ಪಠ್ಯಪ್ರವಚನಗಳ ಕೊರತೆಯನ್ನು ನೀಗಿಸಲು, ಮುಂದಿನ ದಿನಗಳಲ್ಲಿ (ಶನಿವಾರ ಪೂರ್ಣ ದಿನ ಅಥವಾ ಇತರೆ ರಜಾ ದಿನಗಳಂದು) ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಕಲಿಕಾ ದಿನಗಳನ್ನು ಸರಿದೂಗಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
