ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ಮುಂದಿನ 2 ದಿನ ಭಾರೀ ಮಳೆ, ‘ರೆಡ್ ಅಲರ್ಟ್’ ಘೋಷಣೆ..!

ಬೆಂಗಳೂರು ಹವಾಮಾನ ಕೇಂದ್ರದ ಅಧಿಕೃತ ವರದಿಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಅತ್ಯಂತ ಜಾಗರೂಕರಾಗಿರಲು ಸೂಚಿಸಲಾಗಿದೆ.

ಕರಾವಳಿಗೆ ರೆಡ್ ಅಲರ್ಟ್..!
​ಮುಂದಿನ 2 ದಿನಗಳ ಕಾಲ ಕರಾವಳಿಯ ಉತ್ತರ ಕನ್ನಡ, ​ಉಡುಪಿ ಹಾಗೂ ​ದಕ್ಷಿಣ ಕನ್ನಡ ಸೇರಿ ಮೂರು ಪ್ರಮುಖ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ (>204.5mm) ಸಾಧ್ಯತೆ ಇದೆ. ​ಉತ್ತರ ಕನ್ನಡ, ​ಉಡುಪಿ ಹಾಗೂ ​ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

ಯಲ್ಲೋ ಅಲರ್ಟ್..!
ಬೆಳಗಾವಿ, ಧಾರವಾಡ, ಹಾವೇರಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಸೇರಿದಂತೆ ​ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜಾಗೃತರಾಗಿರಲು ತಿಳಿಸಲಾಗಿದೆ.

ಭಾರೀ ಗಾಳಿ ಮಳೆ..!
ಭಾರಿ ಮಳೆಯ ಜೊತೆಗೆ ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಹವಾಮಾನ ಇಲಾಖೆ ಸೂಚಿಸಿದೆ.