ಹಳಿಯಾಳದ ರೌಡಿಶೀಟರ್ ಮಚ್ಚ ಮಂಜನ ಲೈವ್ ಆ್ಯಂಡ್ ಲೈವ್ “ದಾದಾ”ಗಿರಿ ಕೇಸಲ್ಲಿ, ಅನಾಮತ್ತಾಗಿ ಅಮಾನತ್ತುಗೊಂಡಿದ್ದ ಪಿಎಸ್ಐ ಬಸವರಾಜ್ ಮಬನೂರು ಮರಳಿ ಮುಂಡಗೋಡ ಠಾಣೆಗೆ ಬರ್ತಿದಾರಾ..? ಇಂತಹದ್ದೊಂದು ರೂಮರ್ರು ಜಿಲ್ಲೆಯ ಖಾಕಿ ವಲಯದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡ್ತಿದೆ.

ಅಸಲು, ಮುಂಡಗೋಡಿನ ಕ್ರೈಂ ಪಿಎಸ್ಐ ಆಗಿ ಹೊಸ ಜವಾಬ್ದಾರಿಯ ಜೊತೆ ಬಸವರಾಜ್ ರೀ ಎಂಟ್ರಿ ಕೊಡ್ತಿದಾರೆ ಅನ್ನೊ ಮಾತು ಕೇಳಿ ಬರ್ತಿದೆ. ಅದಕ್ಕಾಗಿ, ಏನೇಲ್ಲ ವ್ಯವಸ್ತೆ ಬೇಕೊ ಅದೇಲ್ಲ ತನ್ನಷ್ಟಕ್ಕೆ ತಾನೇ ನಡೆದು ಹೋಗ್ತಿದೆಯಂತೆ. ದೊಡ್ಡವರ “ಕೈ” ಬಲದಲ್ಲಿ ಇದೇಲ್ಲ ಜಸ್ಟ್ “ಪಾಸ್” ಆಗ್ತಿದೆಯಂತೆ.

ಮುಂಡಗೋಡ to ಹಳಿಯಾಳ..?
ಆದ್ರೆ, ಸದ್ಯ ಮುಂಡಗೋಡ ಠಾಣೆಗೆ ಕ್ರೈಂ ಪಿಎಸ್ಐ ಆಗಿ ವಿನೋದ್ ರೆಡ್ಡಿ ಇದ್ದಾರೆ. ಅಸಲು, ರೆಡ್ಡಿಯವರು ಮುಂಡಗೋಡಿಗೆ ಕಾಲಿಟ್ಟ ಎರಡೇ ಎರಡು ತಿಂಗಳಲ್ಲಿ ಧರ್ಮಸ್ಥಳದ ಕೇಸಿನ SIT ತನಿಖಾ ತಂಡದಲ್ಲಿ ನಿಯೋಜನೆಗೊಂಡಿದ್ದರು, ಅಲ್ಲಿಂದ ಇಲ್ಲಿವರೆಗೂ ಅವ್ರು SIT ಕಾರ್ಯದಲ್ಲೇ ಇದ್ದಾರೆ. ಬಹುಶಃ ಸದ್ಯದ ರೂಮರ್ರು ನಿಜವಾದ್ರೆ ವಿನೋದ್ ರೆಡ್ಡಿ ಸಾಹೇಬ್ರು, ಮುಂಡಗೋಡಿನಿಂದ ಅದ್ಯಾವ ಠಾಣೆಗೆ ಹೋಗಿ ರಿಪೋರ್ಟ್ ಮಾಡಕೊತಾರೆ..? ಮತ್ತೊಮ್ಮೆ ಮರಳಿ ಹಳಿಯಾಳ ಠಾಣೆಯ ಗೂಡು ಸೇರ್ತಾರಾ..? ಬಹುಶಃ ಇದೇಲ್ಲ ಅಂದುಕೊಂಡಂತೆ ನಡೆದ್ರೆ ಇನ್ನೇರಡೇ ದಿನದಲ್ಲಿ ಒಂದು ಸ್ಪಷ್ಟತೆ ಸಿಗಲಿದೆ ಅನ್ನೋದು ಬಲ್ಲ ಮೂಲಗಳ ಮಾಹಿತಿ.
ಅಂದಹಾಗೆ, ನಾನಿಲ್ಲಿ ಹೇಳಿದ್ದೇಲ್ಲ ಜಿಲ್ಲೆಯ “ಖಾಕಿ” ಪಡಸಾಲೆಯಲ್ಲಿ ನಡೆದಿರೋ ಮತ್ತು ನಡೀತಿರೋ ಚರ್ಚೆಗಳ ಜಸ್ಟ್ ಮಾಹಿತಿ ಅಷ್ಟೆ..! ಬಿಟ್ರೆ ಇದ್ರಲ್ಲಿ ನಮ್ದೇನೂ ಇಲ್ಲ..!
