ತಡಸ ತಾಯವ್ವನ ಸನ್ನಿಧಿಯಲ್ಲೇ ನಡೀತು ಭಯಂಕರ ಘಟನೆ, ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಆತ್ಮಹತ್ಯೆಗೆ ಯತ್ನ.‌!

ಮುಂಡಗೋಡ ತಾಲೂಕಿನ ವಡಗಟ್ಟಾ ಸಮೀಪದ ತಾಯವ್ವನ ದೇವಸ್ಥಾನದ ಹತ್ತಿರ ನಡೆಯಬಾರದ ಘಟನೆಯೊಂದು ನಡೆದಿದೆ. ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರಾಣ ತಿಂದ ಯುವಕನೋರ್ವ ಆ ಯುವತಿಯ ಕಣ್ಣೇದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೀಗಾಗಿ, ಸದ್ಯ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಿದಾನೆ.

ಆತನ ಹೆಸ್ರು ಪ್ರವೀಣಾ..!
ಅಂದಹಾಗೆ, ಆತನ ಹೆಸ್ರು ಪ್ರವೀಣ ಬರಮಪ್ಪ ಬೆಟದೂರ್, ವಯಸ್ಸು ಈಗಷ್ಟೆ 25 ರ ಆಸು ಪಾಸು.. ಹುಬ್ಬಳ್ಳಿ ತಾಲೂಕಿನ ಬೆಳಗಲಿಯ ಹುಡುಗ.. ಈತ ಇವತ್ತು ಬೆಳ್ಳಂ ಬೆಳಿಗ್ಗೆ ತಾನು ಪ್ರೀತಿಸಿದ್ದ ಹುಡುಗಿಯನ್ನ ತನ್ನದೇ ಬೈಕ್ ಮೇಲೆ ಕೂರಿಸಿಕೊಂಡು, ತನ್ನ ಹೃದಯದ ಪ್ರೇಮ ನಿವೇದನೆ ಮಾಡಲು ಹೊರಟಿದ್ದ. ವಡಗಟ್ಟಾ ಸಮೀಪದ, ಅಂದ್ರೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸದ ತಾಯವ್ವ ದೇವಸ್ಥಾನದ ಹತ್ರ ಬಂದು ನಿಂತಿದ್ದ. ಅಲ್ಲಿ ತಾಯವ್ವನ ಸಾಕ್ಷಿಯಾಗಿ ನಾನು ನಿನ್ನ ಪ್ರೀತಿಸ್ತಿನಿ ಅಂತಾ ಆ ಯುವತಿಗೆ ಗಂಟು ಬಿದ್ದಿದ್ದ. ಆದ್ರೆ ಯುವತಿ ಅದ್ಯಾಕೋ ಎನೋ ನೋ ಅಂದಿದ್ಲಂತೆ.. ಜಸ್ಟ್ ಪ್ರೆಂಡ್ಸ್ ಆಗಿ ಇರೋಣ ಅಂತ ಹೇಳಿದ್ಲಂತೆ‌. ಹೀಗಾಗಿ, ಹುಡುಗ ಮೊದಲೇ ಸಾಯೋಕೆ ರೆಡಿಯಾಗಿ ಬಂದಿದ್ನೊ ಏನೋ, ತಕ್ಷಣವೇ ಪೆಟ್ರೊಲ್ ಸುರಿದುಕೊಂಡು ಕಡ್ಡಿ ಗೀರಿಕೊಂಡಿದ್ದಾನೆ. ಅಷ್ಟೆ.. ಹೊತ್ತಿ ಉರಿದಿದ್ದಾನೆ.

ತಕ್ಷಣವೇ…!
ಯಾವಾಗ, ತನ್ನ ಹುಡುಗಿ ಪ್ರೀತಿ ನಿರಾಕರಿಸಿದ್ಲೋ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡ ಪ್ರವೀಣಾ, ಅರ್ದ ಮರ್ದ ಸುಟ್ಟು ಹೋಗಿದ್ದ. ಹೀಗಾಗಿ, ಅಕ್ಷರಶಃ ಗಾಬರಿಗೊಂಡ ಯುವತಿ ಸ್ಥಳೀಯರ ಸಹಕಾರದೊಂದಿಗೆ, ಆಸ್ಪತ್ರೆಗೆ ಸಾಗಿಸಿದ್ದಳು. ಅಸಲು, ಆ ಯುವತಿ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ, ಊರು ಕುಂದಗೋಳ ತಾಲೂಕಿನ ಶಿರೂರು. ಹೆಸರು ಬೇಡ ಬಿಟ್ಟಾಕಿ..

ತಡಸ ಪೊಲೀಸ ಠಾಣೆ..!
ಸದ್ಯ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯುವಕ, ಪಾಗಲ್ ಪ್ರೇಮಿ ಪ್ರವೀಣ ಸಾವು ಬದುಕಿನ ನಡುವೆ ಹೋರಾಡ್ತಿದಾನೆ.

error: Content is protected !!