ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!

ಮುಂಡಗೋಡ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ‌.

ಉತ್ತರ ಕನ್ನಡ ಖಡಕ್ ಎಸ್ಪಿ ಎಂ. ನಾರಾಯಣ್ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಯಲಿದ್ದು ಸಾರ್ವಜನಿಕರು ತಮ್ಮ ಸಂಕಷ್ಟಗಳನ್ನು, ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಬಹುದಾಗಿದೆ.

ಇತ್ತಿಚೆಗೆ ಪಟ್ಟಣದಲ್ಲಿ ನಡೆದ ಕೆಲ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ, ಆತಂಕದಲ್ಲಿದ್ದ ಮುಂಡಗೋಡಿಗರಿಗೆ “ನಿಮ್ಮೊಂದಿಗೆ ನಾವಿದ್ದೇವೆ” ಎನ್ನುವ ಅಭಯದ ಸಂದೇಶ ನೀಡುವಲ್ಲಿ ಎಸ್ಪಿ ನಾರಾಯಣ್ ಮಹತ್ತರ ಹೆಜ್ಜೆ ಇರಿಸಿದ್ದಾರೆ ಎನ್ನಲಾಗ್ತಿದೆ. ಅಸಲು, ಎಸ್ಪಿ ಸಾಹೇಬರ ನಿರ್ಧಾರ ಮುಂಡಗೋಡಿನ ಹಿರಿಯ ನಾಗರಿಕರು, ಪ್ರಜ್ಞಾವಂತರ ಮೆಚ್ಚುಗೆಗೆ ಕಾರಣವಾಗಿದೆ.

error: Content is protected !!