Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ  ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!

ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!

ಮುಂಡಗೋಡ ಹೊರ ವಲಯದ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಅಪಘಾತವಾಗಿದೆ. ಟಾಟಾ ಎಸ್ ವಾಹನ ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದ್ರೆ, ಗಾಯಗೊಂಡ ಬೈಕ್ ಸವಾರ ಯಾರು, ಎಲ್ಲಿಯವನು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈಗಷ್ಟೇ ಕೆಲವೇ ನಿಮಿಷಗಳ ಹಿಂದೆ ನಡೆದಿರೋ ಘಟನೆ ಇದಾಗಿದ್ದು, ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಬಿದ್ದು ಹೊರಳಾಡುತ್ತಿದ್ದರೂ, ಅಪಘಾತ ಪಡಿಸಿದ ಟಾಟಾ ಎಸ್ ವಾಹನದ ಚಾಲಕ, ಪರಾರಿಯಾಗಿದ್ದಾನೆ. ದಾರಿಹೋಕರು, ಗಾಯಗೊಂಡ...

Post
ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!

ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!

ಕಾರವಾರ: ಮುಂಬರುವ ಮಳೆಗಾಲದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಅವಘಡಗಳು ಸಂಭವಿಸದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಾವುದೇ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು, ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಚರಂಡಿ ಕಾಮಗಾರಿಗಳನ್ನು...

Post
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!

ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!

ಮುಂಡಗೋಡ ತಾಲೂಕಿನ ನಂದೀಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಹೀನ ಕೃತ್ಯವೆಸಗಿದ್ದಾರೆ. ರೈತರೋರ್ವರ ಅಡಿಕೆ ತೋಟಕ್ಕೆ ನುಗ್ಗಿ ಬರೋಬ್ಬರಿ 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ನಂದಿಪುರ ಗ್ರಾಮದ ರತ್ನಾ ಬಸವರಾಜ ಓಣಿಕೇರಿ ಎಂಬುವವರಿಗೆ ಸೇರಿದ ಮುಂಡಗೋಡ ತಾಲೂಕಿನ ಕಾತೂರ ಪಂಚಾಯತ ವ್ಯಾಪ್ತಿಯ ಸಿಂಗನಳ್ಳಿ ಗ್ರಾಮದ ಸ.ನಂ:35ಅ ರಲ್ಲಿ 3-19-00 ಜಮೀನಿನಲ್ಲಿ, ಅಂದಾಜು 1800 ಅಡಿಕೆ ಸಸಿಗಳನ್ನು ನೆಡಲಾಗಿದೆ. ಅವು ಸುಮಾರು 3 ವರ್ಷ ಗಿಡಗಳಾಗಿ ಬೆಳೆದಿವೆ. ಹೀಗಿರೋವಾಗ, ದಿನಾಂಕ 7-5-2025 ರಂದು ಸದರ ತೋಟದಲ್ಲಿರುವ 240 ಅಡಿಕೆ ಗಿಡಗಳನ್ನು...

Post
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!

ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!

ಕಾರವಾರ: ಯುದ್ಧದಂತ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಬಗ್ಗೆ ಸ್ವಯಂ ಸೇವಕರ ಅಗತ್ಯವಿರುವುದರಿಂದ ಸಿವಿಲ್ ಡಿಫೆನ್ಸ್ ಆಕ್ಟ್-1968 ರಂತೆ ಪ್ರತಿ ನೂರು ನಾಗರಿಕರಿಗೆ ಒಬ್ಬರಂತೆ ಪೌರರಕ್ಷಣಾ ಸ್ವಯಂಸೇವಕರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು. ಜಿಲ್ಲೆಯ ಆಸಕ್ತ ಅರ್ಹ ಅಭ್ಯರ್ಥಿಗಳು ಮೇ.9 ರಿಂದ ಜೂನ್.9 ರವರೆಗೆ ನಿಗದಿತ ಅರ್ಜಿ ನಮೂನೆ ತುಂಬಿ ನೇಮಕಾತಿಯಲ್ಲಿ ಭಾಗವಹಿಸಬಹುದಾಗಿದೆ. ಈ ಕುರಿತ ಅರ್ಜಿಯನ್ನು ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಟರ ಕಚೇರಿ, ದಿವೇಕರ ಕಾಮರ್ಸ್ ಕಾಲೇಜ್ ಎದುರು, ಕೋಡಿಭಾಗ ಕಾರವಾರ ಅಥವಾ hgcd.karnataka.gov.in ವೆಬ್‌ಸೈಟ್ ಮೂಲಕ...

Post
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್  ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!

ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!

ಉತ್ತರ ಕನ್ನಡ ಜಿಲ್ಲೆಯ ಕೈಗಾ, ನೇವಿ ಹಾಗೂ ಗ್ರಾಸಿಯಂ ಇಂಡಸ್ಟ್ರೀಸ್ ಪ್ರದೇಶಗಳಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಅಣುಕು ಕಾರ್ಯಾಚರಣೆಯ ಪ್ರಯುಕ್ತ ಪೂರ್ವಸಿದ್ಧತೆಯ ಕುರಿತು ಪರಿಶೀಲನೆ ನಡೆಸಲಾಯಿತು. ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಮಾಕ್ ಡ್ರಿಲ್ ನಡೆಸುವ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ರು.  

Post
ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!

ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!

ಕಾರವಾರ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಜೂನ್ ತಿಂಗಳಿನಲ್ಲಿ ಲಘು ಮೋಟಾರ ವಾಹನ ಚಾಲನೆ, ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಹಾಗೂ ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್ ಮತ್ತು ಜುಲೈ ತಿಂಗಳಲ್ಲಿ ಸೋಲಾರ ಟೆಕ್ನೀಶಿಯನ್ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸವನ್ನು ನೋಂದಾಯಿಸಿಕೊಳ್ಳಲು ಮೇ.25 ಕೊನೆಯ ದಿನವಾಗಿದೆ. ತರಬೇತಿ ಅವಧಿಯಲ್ಲಿ ಊಟ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ...

Post
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!

ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!

ಕಾರವಾರ; ಜಿಲ್ಲೆಯಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ನೀಡಲಾಗುವ ಅಡುಗೆ ಅನಿಲದ ಸಿಲೆಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದ ರೀತಿಯಲ್ಲಿ ಹೆಚ್ಚಿನ ನಿಗಾವಹಿಸಿ, ವಾಣಿಜ್ಯ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯ ಸೂಚನೆ ನೀಡಿದರು.

Post
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!

ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!

ಕಾರವಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮೇ 7 ರಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮುರುಡೇಶ್ವರದ ಗೃಹ ಕಚೇರಿಯಲ್ಲಿ “ಜನತಾ ದರ್ಶನ” ಕಾರ್ಯಕ್ರಮ ಹಮ್ಮಿಕೊಂಡಿದ್ದು , ಜಿಲ್ಲೆಯ ಹಾಗೂ ಕ್ಷೇತ್ರದ ಸಾರ್ವಜನಿಕರು ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಿ ಅಹವಾಲುಗಳನ್ನು ನೀಡಬಹುದಾಗಿದೆ ಎಂದು ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Post
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!

ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!

 ಶಿರಸಿ; ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಶಿರಸಿ ಮತ್ತು ಸಿದ್ಧಾಪುರ ದಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ ಶಿರಸಿ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದ ಹೆಲಿಪ್ಯಾಡ್ ಗೆ ಬಂದಿಳಿದರು. ರಾಜ್ಯಪಾಲ ಥಾವರ ಚಂದ್ ಗೆಹಲೊಟ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ ಉಪರಾಷ್ಟ್ರಪತಿಗಳನ್ನು ಸ್ವಾಗತಿಸಿಕೊಂಡರು. ಶಿರಸಿಯಲ್ಲಿ ನಡೆದ ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪರಾಷ್ಟ್ರಪತಿ ಗಳು, ತಾಯಿಯ ಸ್ಮೃರಣೆಯಲ್ಲಿ ಒಂದು ವೃಕ್ಷ ದಡಿ, ಶಿರಸಿಯ ಅರಣ್ಯ ಕಾಲೇಜಿನ ಆವರಣದಲ್ಲಿ ತಮ್ಮ ದಿವಂಗತ ತಾಯಿ ಶ್ರೀಮತಿ ಕೇಸರಿ ದೇವಿ...

Post
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!

ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!

ಮುಂಡಗೋಡ ತಾಲೂಕಿನ ಅತ್ತಿವೇರಿ ಜಲಾಶಯದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆಕಸ್ಮಿಕವಾಗಿ ಬಿದ್ದು ಸಾವು ಕಂಡಿರೋ ಘಟನೆ ನಡೆದಿದೆ. ಹುನಗುಂದ ಗ್ರಾಮದ ಅಂದಾನಯ್ಯ ಗದಗಯ್ಯ ಚಿಕ್ಕಮಠ(45) ಎಂಬುವವನೇ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಶನಿವಾರ ಬೆಳಿಗ್ಗೆ ಮನೆಯಿಂದ ಹೋಗಿದ್ದ ಮೃತ ವ್ಯಕ್ತಿ, ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಹುಡುಕಾಡಿದ್ದರು. ಆದ್ರೆ, ರವಿವಾರ ಸಂಜೆ ವೇಳೆಗೆ ಅತ್ತಿವೇರಿ ಡ್ಯಾಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈತ ನೀರು ಕುಡಿಯಲು ಹೋಗಿ ಜಲಾಶಯದಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಅಂತಾ ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು...

error: Content is protected !!