ಶಿಗ್ಗಾವಿ ತಾಲೂಕಿನ ತಡಸ ಕ್ರಾಸ್ ಬಳಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ಕಾರುಗಳ ನಡುವೆ ನಡೆದ ಮುಖಾಮುಕಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಭಯಾನಕ ಸಾವು ಕಂಡಿದ್ದಾರೆ.
ಹಾವೇರಿ-ಧಾರವಾಡ ಗಡಿಯ ಸಮೀಪ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಿಳಿ ಮಹೀಂದ್ರಾ ಎಕ್ಸ್‌ಯುವಿ 700 ವಾಹನವು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಟಾಟಾ ಆಲ್ಕ್ರೋಜ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕೆಂಪು ವಾಹನದಲ್ಲಿ 10-12 ವರ್ಷದ ಒಂದು ಮಗು ಸೇರಿದಂತೆ 4 ಜನರಿದ್ದರು, ಅವರೆಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 2 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಮೃತ ಪಟ್ಟವರು
ಚಂದ್ರಮ್ಮ( 59) , ಬೆಂಗಳೂರಿನ ಚಾಮರಾಜಪೇಟೆಯವರು, ಮೀನಾ(38) (ಮೃತ ಚಂದ್ರಮ್ಮ ಅವರ ಪುತ್ರಿ) ( ದಾವಣಗೆರೆ ಜಿಲ್ಲೆ ಹರಿಹರ ಮೂಲದವರು), ಮಹೇಶ್ ಕುಮಾರ್ ಸಿ (41) (ದಾವಣಗೆರೆ ಜಿಲ್ಲೆ ಹರಿಹರದವರು) (ಕಾರು ಚಾಲಕ ಹಾಗೂ ಮಾಲೀಕ), ಧನವೀರ್(11) (ದಾವಣಗೆರೆ ಜಿಲ್ಲೆ ಹರಿಹರದವರು) ಟಾಟಾ ಅಲ್ಟ್ರೋಸ್ ಮಾಡೆಲ್ ಕಾರ್( ನಂಬರ್ KA 05, NC 4963 )ಇದ್ದವರು ಎಂದು ತಿಳಿದು ಬಂದಿದೆ.