ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..?  ಯಾರ ಭಯವೂ ಇಲ್ಲದೇ ಹೋಯ್ತಾ..?


ಮುಂಡಗೋಡಿನಲ್ಲಿ ಅದ್ಯಾಕೋ ಏನೋ ನಡೆಯಬಾರದ ಘಟನೆಗಳು ನಡೆದು ಹೋಗ್ತಿವೆ. ಹಾಡಹಗಲೇ ಜನನೀ ಬೀಡ ಪ್ರದೇಶಗಳಲ್ಲಿ ಭಯಾನಕ ವೆಂಬಂತ ಘಟನೆಗಳೂ ಜಾರಿಯಲ್ಲಿವೆ. ‌ಇಲ್ಲಿ, ಯಾವ ಹೊತ್ತಿನಲ್ಲಿ ಯಾರ ಮಾಂಗಲ್ಯ ಸರ ಅದ್ಯಾರ ಕಿತ್ತುಕೊಳ್ತಾರೋ ಯಾರಿಗೂ ಅರ್ಥವಾಗದ ಹಾಗಾಗಿದೆ. ನಿಜ ಅಂದ್ರೆ ಒಡವೆಗಳನ್ನು ಹಾಕೊಂಡು ಹೊರಗಡೆ ತಿರುಗಾಡಲೂ ಮಹಿಳೆಯರು ಹೆದರುವಂತಾಗಿದೆ.

ಕಳ್ಳಕಾಕರಿಗೆ ಸೇಫಿಯಸ್ಟ್ ಜಾಗ..?
ಸರಗಳ್ಳತ‌ನ, ಬೈಕ್ ಕಳ್ಳತನ, ಮನೆಗಳ್ಳತನಗಳು ನಿತ್ಯದ ಭಯವಾಗಿದೆ. ಇದೇಲ್ಲ ಯಾಕೆ ಆಗ್ತಿದೆಯೋ ಯಾರಿಗೂ ಗೊತ್ತಿಲ್ಲ. ಘಟನೆ ನಡೆದು ಎರಡು ದಿನ ಚರ್ಚೆ ಆಗತ್ತೆ ಬಿಟ್ರೆ, ಮೂರನೇ ದಿನ ಖತಂ ಆಗಿರತ್ತೆ‌. ಹೀಗಾಗಿ, ಮುಂಡಗೋಡ ಸದ್ಯ ಕಳ್ಳಕಾಕರಿಗೆ, ಸರಗಳ್ಳರಿಗೆ, ಮನೆಗಳ್ಳರಿಗೆ, ಅದೇನೋ ಅಂತಾರಲ್ಲ ಹಾಗಾಗಿದೆ ಅನ್ನೋದು ಜನರ ಆರೋಪ.. ನಿಜ ಅಂದ್ರೆ, ಇಲ್ಲಿ ನಡೆದ ಕಳ್ಳತನ, ಸರಗಳ್ಳತನ ಕೇಸುಗಳು “ಬೇಧ”ವಾಗಿದ್ದೇ ಅಪರೂಪ..! ಹೀಗಾಗಿ, ಈ ಬಗ್ಗೆ ಜನರಲ್ಲಿ ನಂಬಿಕೆನೇ ಹೊರಟು ಹೋದಂತಾಗಿದೆ.

ಭಯಾನಕ ಅಲ್ವಾ..?
ಆದ್ರೆ ಇದರ ನಡುವೆ, ಶನಿವಾರ ಮತ್ತೊಂದು ಭಯಾನಕ ಘಟನೆ ನಡೆದು ಹೋಗಿದೆ. ಮಂಗಳ ಮುಖಿಯರ ರೌಡಿಸಂಗೆ ಕೆಲಹೊತ್ತು ಮುಂಡಗೋಡ ಪಟ್ಟಣ ಗಡಗಡ ನಡುಗಿದೆ. ಅಕ್ಷರಶಃ ಆತಂಕಗೊಡಿದ್ದಾರೆ ಜನ. ಇದು ಕಳೆದ ಕೆಲ ತಿಂಗಳ ಹಿಂದೆ ನ್ಯಾಯಾಲಯದ ಆವರಣದಲ್ಲೇ ನಡೀತಲ್ಲ “ಚಾಕು ಚೂರಿಗಳಾಟ..? ಥೇಟು ಅದನ್ನೇ ನೆನಪಿಸುವಂತಾಗಿದೆ. ಹೀಗಾಗಿ, ಮುಂಡಗೋಡಿನ ಮಂದಿಗೆ ನಾವು ಸೇಫಾಗಿದಿವಾ? ಅನ್ನೋ ಪ್ರಶ್ನೆ ಬಂದಾಗಿದೆ. ಆದ್ರೆ, ಯಾರ ಹತ್ರ ಹೇಳಿಕೊಳ್ಳೊಣ ನಮ್ ಪ್ರಾಬ್ಲೆಮ್ಮು..? ಅಂತಿದಾರೆ ಜನ. ಅದಿರಲಿ‌ ಬಿಡಿ. ಆದ್ರೆ, ಶನಿವಾರ ನಡೆದ ಘಟನೆ..? ಛೇ.. ಮುಂಡಗೋಡಿನ ವ್ಯಾಪಾರಿಗಳು ಥರಗುಟ್ಟುವಂತೆ ಆಗಿದೆ.

ಅಲ್ಲಿ ನಡೆದಿದ್ದು ಭಯಾನಕ ಅಟ್ಯಾಕ್..!
ಅಸಲು, ಅದು ಮುಂಡಗೋಡಿನ ಹೃದಯಭಾಗ, ಗಿಜಿಗಿಡುವ ಜನನೀಬೀಡ ಪ್ರದೇಶ.. ಅವಾಗ ಅಂದಾಜು 11 ಗಂಟೆಯ ಬೆಳಗಿನ ಹೊತ್ತು.. ಶನಿವಾರದ ಪೂಜೆ ಮುಗಿಸಿ ಇನ್ನೇನು ತನ್ನ ವ್ಯಾಪಾರ ಶುರು ಮಾಡಲು ರೆಡಿಯಾಗಿದ್ದ ರಾಜೇಶ ನಿಡುಗುಂದಿಯ ಮೇಲೆ ಆಟೋದಲ್ಲಿ ಬಂದಿಳಿದಿದ್ದ ಐವರು ಮಂಗಳಮುಖಿಯರು ಭೀಕ್ಷೆ ಕೇಳಲು ಬಂದು ದಾಳಿ ಮಾಡಿದ್ದರು. ಅಂಗಡಿಯಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ, ಅಶ್ಲೀಲ ಪದಗಳಿಂದ ಬೈದಾಡುತ್ತ, ಅಂಗಡಿ ಮಾಲೀಕ ರಾಜೇಶನಿಗೆ ಮನಸೋ ಇಚ್ಚೆ ಥಳಿಸಿದ್ದಾರೆ. ಅಲ್ದೇ ಮನೆಲಿದ್ದ ಮಹಿಳೆಯರಿಗೂ ಎಳೆದಾಡಿ, ಪುಟ್ಟ ಕಂದಮ್ಮನಿಗೂ ರಕ್ತ ಬರುವಂತೆ ಹಲ್ಲೆ‌ಮಾಡಿದ್ದಾರೆ. ಇದು ಒ‌ಂರ್ಥದಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲಿ ನಡೆದು ಹೋಗಿದೆ.

ಅಲ್ಲಿ ಸಿಕ್ಕವರು ಆರು ಜನ..!
ನಿಜ ಅಂದ್ರೆ, ಆ ವ್ಯಾಪಾರಸ್ಥ ಕುಟುಂಬದ ಮೇಲೆ ಎಗರಿ ಬಿದ್ದ ಮಂಗಳಮುಖಿಯರ ರೌಡಿಸಂಗೆ ಆ ಪ್ರದೇಶದ ಜನರೇಲ್ಲ ಏಕದಂ ಥರಗುಟ್ಟಿದ್ದಾರೆ. ಅಸಲು, ಅಲ್ಲಿ ಅದೇ ಹೊತ್ತಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಮೂವರು ಪೊಲೀಸರು ಅದೇ ಸ್ಥಳದಲ್ಲಿ ಬಂದಿದ್ದರಂತೆ. ನಿಜ ಅಂದ್ರೆ, ಅವರಿಗೂ ಈ “ರೌಡಿ” ಮುಖಿಯರ ಎಗರಾಟದ ಮುಂದೆ ಬಿಲ್ ಕುಲ್ ಮಿಸುಕಾಡಲು ಆಗಿಲ್ಲವಂತೆ. ಆ ರೌಡಿ ಬೇಬಿಗಳ ಅಶ್ಲೀಲ ಬೈಗುಳ, ಅಶ್ಲೀಲ “ದರ್ಶನ”ಕ್ಕೆ ಪೊಲೀಸರೂ ಕೂಡ ಕಕ್ಕಾಬಿಕ್ಕಿಯಾಗಿದ್ದಾರೆ. ಅಷ್ಟೊತ್ತಿಗಾಗಲೇ ಅದೇ‌ ಪೊಲೀಸರ ಎದುರೇ ಪುಟ್ಟ ಮಗು ಸೇರಿದಂತೆ ಹಲವರ ಮೇಲೆ ಹಲ್ಲೆಯಾಗಿದೆ. ಅಲ್ದೇ, ಅಂಗಡಿಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ‌. ಸ್ಥಳದಲ್ಲಿ ಆತಂಕ ಅನ್ನೋದು ಎಲ್ಲರನ್ನೂ ಕಾಡಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಆರು ಜ‌ನ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅವ್ರೇಲ್ಲ ಹುಬ್ಬಳ್ಳಿಯವರಂತೆ..!
ಘಟನೆಯಲ್ಲಿ ನಿಗರಾಡಿದ್ದ, ಹುಬ್ಬಳ್ಳಿ ಮೂಲದವರು ಎನ್ನಲಾದ, ನಕ್ಷತ್ರಾ ತಂದೆ ಗುರುನಾಥ ಜಲ್ಲಿ (26), ವರುಣ ತಂದೆ ಬಸವರಾಜ ಗದಗ (20), ತಾನು ತಂದೆ ಮಾಬುಬ ಸವಣೂರ (20), ಸನಮ್ ದಾವಣಗೆರೆ (20), ಪ್ರೀತಿ ತಂದೆ ಮಾಬುಬಸಾಬ ಶ್ಯಾಡಗುಪ್ಪಿ(25), ಜಾನಕಿ (22) ಎಂಬುವ ಮಂಗಳ ಮುಖಿಯರನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಇವ್ರ ವಿರುದ್ಧ ಹಲ್ಲೆಗೊಳಗಾದ ರಾಜೇಶ್ ನಿಡುಗುಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ಕೂಡ ದಾಖಲಾಗಿದೆ. ಕಠಿಣ ಕ್ರಮ ಜಾರಿಯಲ್ಲಿದೆ. ಇದು ಇವತ್ತಿ‌ನ ಹಕೀಕತ್ತು.

“ಕಠಿಣ” ಕ್ರಮದ ಭರವಸೆ..!
ಅಂದಹಾಗೆ, ಯಾವಾಗ ಇಂತಹ ಭಯಾನಕ ಅಟ್ಯಾಕ್ ನಡೀತೊ ನಾವು ಇನ್ಮೇಲೆ ಸುಮ್ಮನೆ ಇದ್ರೆ, ಸರಿಯಿರಲ್ಲ ಅಂತಾ ವ್ಯಾಪಾರಸ್ಥರು, ಸ್ಥಳೀಯ ನಾಗರಿಕರು ಪೊಲೀಸು ಠಾಣೆಯ ಆವರಣದಲ್ಲಿ ಜಮೆ ಗೊಂಡಿದ್ರು. ನಮಗೆ ರಕ್ಷಣೆ ನೀಡಿ ಅಂತಾ ಮನವಿ ಮಾಡಿದ್ರು. ಹೀಗಾಗಿ, ಮುಂಡಗೋಡಿನ ಪೊಲೀಸ್ ಅಧಿಕಾರಿಗಳು, ಜನ್ರಿಗೆ “ಕಠಿಣ” ಕ್ರಮದ ಭರವಸೆ ನೀಡಿ ಕಳಿಸಿದ್ದಾರೆ. ಹೀಗಾಗಿ,
ಮುಂದೆನೋ.. ಕಾದು ನೋಡಬೇಕಿದೆ..!

error: Content is protected !!