ಮುರುಡೇಶ್ವರ: ರಾಜ್ಯದಲ್ಲಿ ಮೀನುಗಾರರಿಗೆ ನೀಡಲಾಗುತ್ತಿರುವ ಸಂಕಷ್ಟ ಪರಿಹಾರ ನಿಧಿ ಮೊತ್ತವನ್ನು 8 ಲಕ್ಷದಿಂದ 10 ಲಕ್ಷ ಕ್ಕೆ ಏರಿಕೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಹೇಳಿದರು.
ಅವರು ಗುರುವಾರ ಮುರುಡೇಶ್ವರ ದ ಆರ್.ಎನ್. ಎಸ್. ಗಾಲ್ಫ್ ಕ್ಲಬ್ ಮೈದಾನದಲ್ಲಿ ನಡೆದ ವಿಶ್ವ ಮೀನುಗಾರಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಕ್ಕೆ ಮೀನುಗಾರರ ಬದುಕು ಹಸನು ಮಾಡುವ ಆಸೆ ಇದೆ. ಮೀನುಗಾರರ ಮಕ್ಕಳು ಉದ್ಯೋಗ ಅರಸಿ ಹೊರ ಜಿಲ್ಲೆ , ರಾಜ್ಯಗಳಿಗೆ ಹೋಗುತ್ತಿದ್ದಾರೆ..ಕರಾವಳಿ ಪ್ರದೇಶದಲ್ಲಿ ಕೋಮು ವಾತಾವರಣ ಕ್ಕೆ ಅವಕಾಶ ನೀಡಬಾರದು. ಇಲ್ಲಿನ ಯುವಕರಿಗೆ ಉತ್ತಮ ಭವಿಷ್ಯ ಸೃಷ್ಟಿ ಮಾಡಿಕೊಳ್ಳಲು ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಅವಕಾಶ ನೀಡಲಾಗುವುದು.
ಈ ಭಾಗದ. ಯುವಕರಿಗೆ ದೊಡ್ಡ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದರು.
.ಮೀನುಗಾರರ ಬದುಕಿನಲ್ಲಿ ಸ್ವಾವಲಂಬನೆ ತರಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಶೇ.99% ಮೀನುಗಾರರು ಹಿಂದುಳಿದಿದ್ದಾರೆ ಎಂಬ ಅಂದಾಜಿದೆ. ಬಯಲು ಸೀಮೆಯ ರೈತರ ಅಭಿವೃದ್ಧಿ ಗೆ ನೀಡುವ ನೆರವಿನ ರೀತಿಯಲ್ಲಿ ಮೀನುಗಾರರ ಅಭಿವೃದ್ಧಿ ಮಾಡಲಾಗುವುದು, ಈ ವರ್ಷ ರಾಜ್ಯದ ಮೀನುಗಾರರಿಗೆ 10000 ಮನೆ ನೀಡುವ ಗುರಿ ಇದೆ ಎಂದರು.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರೆಗೆ ಗ್ಯಾರಂಟಿ ಯೋಜನೆ ನೆರವಾಗಿದೆ. ಪ್ರತಿ ಕುಟುಂಬ ಕ್ಕೆ ವಾರ್ಷಿಕ 50000 ನೆರವು ದೊರೆಯುತ್ತಿದೆ ಎಂದರು.
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಮಾತನಾಡಿ, ಇಲಾಖೆಯಲ್ಲಿ ಮೀನುಗಾರರ ಅಭಿವೃದ್ಧಿ ಗೆ ಹಣದ ಕೊರತೆ ಇಲ್ಲ..650 ಕೋಟಿ ವೆಚ್ಚದಲ್ಲಿ ಕರಾವಳಿ ಯ 13 ಬಂದರು ಅಭಿವೃದ್ಧಿ ಮಾಡಲಾಗುತ್ತಿದೆ. ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಗೆ ಸಕಲ ನೆರವು ನೀಡಲಾಗುವುದು ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಅರ್. ವಿ.ದೇಶಪಾಂಡೆ ಮಾತನಾಡಿ, ಮೀನುಗಾರರು ವಿಶ್ವದ ದೊಡ್ಡ ಶಕ್ತಿ, ನಮ್ಮ ದೇಶದ ಆಸ್ತಿ, ಅವರು ಸಾಹಸಿ ಮತ್ತು ಕಷ್ಟಕರ ಜೀವನ ಸಾಗಿಸುತ್ತಾರೆ ಯಾವುದೇ ಸಂದರ್ಭದಲ್ಲೂ ಕರ್ತವ್ಯ ಮರೆಯೋಲ್ಲ. ನೆರೆಯ ಗೋವಾ ಮತ್ತು ಮಹಾರಾಷ್ಟ್ರರಾಜ್ಯದಲ್ಲಿ ನಮ್ಮ ಮೀನುಗಾರರಿಗೆ ತೊಂದ್ರೆ ಆಗುತ್ತಿದೆ ಈ ಬಗ್ಗೆ ಸರ್ಕಾರ ನೆರೆ ರಾಜ್ಯಗಳೊಂದಿಗೆ ಈ ಮಾತಾಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೀನುಗಾರರಿಗೆ ಸನ್ಮಾನ, ಮೀನುಗಾರರಿಗೆ ವಿವಿಧ ಸವಲತ್ತುಗಳ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ವ್MCA ಅಧ್ಯಕ್ಷ ಸತೀಶ್ ಸೈಲ್, ಶಾಸಕರಾದ ಭೀಮಣ್ಣ ನಾಯಕ್, ಶಿವರಾಮ ಹೆಬ್ಬಾರ್,ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೆಕರ್, ತಿಪ್ಪಣ್ಣ ಕಬಕನೂರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣ ರಾವ್, ಕಾಯ್ಕಿಣಿ ಗ್ರಾ.ಪಂ ಅಧ್ಯಕ್ಷ ರಾಜು ನಾಯ್ಕ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯ, ಜಿ.ಪಂ. ಸಿಇಒ ಈಶ್ವರ ಕಾಂದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.