ಶಿರಸಿ: ಜೀವನದ ಸಮತೆ ಪಡೆಯೋಕೆ ಯೋಗಾನುಷ್ಠಾನ ಮಹತ್ವದ್ದು ಅಂತ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದ್ರು.

ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶಿರಸಿಯ ಸೋಂದಾದಲ್ಲಿ ಯೋಗಾನುಷ್ಠಾನ ನಡೆಸಿದ ಶ್ರೀಗಳು ಆಶೀರ್ವಚನ ನುಡಿದರು. ಆಸನ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ. ಆದರೆ ಯೋಗ ದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಆಗದು. ಯೋಗ ದಿನಾಚರಣೆಯ ಮರು ದಿನ ಯೋಗ ಮಾಡದೇ ಇದ್ದವರೂ ಇದ್ದಾರೆ. ಇದಾಗದೇ ಜೀವನದಲ್ಲಿ ನಿರಂತರ ಯೋಗ ಅನುಷ್ಠಾನ ಮಾಡಬೇಕು. ಆಸನ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಪ್ರತಿದಿನವೂ ಮಾಡಬೇಕು. ವಿಶ್ವ ಯೋಗದ ದಿನಾಚರಣೆಯು ಯೋಗದ ಮೂಲಕ ಎಲ್ಲರೂ ಆರೋಗ್ಯ ಪಡೆಯುವಲ್ಲಿ ನೆರವಾಗಲಿ. ಯೋಗದ ಮೂಲಕ ವಿಶ್ವ ಒಂದಾಗಬಹುದು ಎಂಬುದನ್ನು ಮತ್ತೆ ಒಂದಾಗಬಹುದು ಎಂಬುದನ್ನು ತಿಳಿಸಲಿ ಎಂದರು.

ಯೋಗ ಸಾಧಕ ಶ್ರೀ..!
ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸುತ್ತಿರುವ ಸ್ವರ್ಣವಲ್ಲೀ ಶ್ರೀಗಳು ಸ್ವತಃ ಯೋಗ ಸಾಧಕ ಗುರುಗಳೂ ಹೌದು. ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ಶ್ರೀಗಳು ಯೋಗಾಸನ, ಪ್ರಾಣಾಯಾಮ ನಡೆಸಿ ಗಮನ ಸೆಳೆದರು.

 

error: Content is protected !!