Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಆಸ್ತಿ ಕೊಟ್ಟವರ ಬಾರಾ ಬಾನಗಡಿಗೆ ಬಲಿಯಾಯ್ತು ಜೀವ..!  ಮುಂಡಗೋಡಿನಲ್ಲಿ ಬಂಗಾರದಂಗಡಿ ಮಾಲೀಕನ ಆತ್ಮಹತ್ಯೆ..!

ಆಸ್ತಿ ಕೊಟ್ಟವರ ಬಾರಾ ಬಾನಗಡಿಗೆ ಬಲಿಯಾಯ್ತು ಜೀವ..! ಮುಂಡಗೋಡಿನಲ್ಲಿ ಬಂಗಾರದಂಗಡಿ ಮಾಲೀಕನ ಆತ್ಮಹತ್ಯೆ..!

ಮುಂಡಗೋಡ ಪಟ್ಟಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೋಲ್ಡ್ ಸ್ಮಿತ್ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಭೂ ವ್ಯವಹಾರದಲ್ಲಿ ಆಗಿರೋ ದಗಲ್ಬಾಜಿಗೆ ಮನನೊಂದು ಸುಸೈಡ್ ಮಾಡಿಕೊಂಡಿದ್ದಾರೆ ಅಂತಾ ಮೃತನ ಪತ್ನಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಪರಿಣಾಮ ಹುಬ್ಬಳ್ಳಿಯ 6 ಜನರ ವಿರುದ್ಧ ಕೇಸು ದಾಖಲಾಗಿದೆ. ಜ್ಯುವೇಲ್ಲರಿ ಶಾಪ್ ಮಾಲೀಕ..! ಅಂದಹಾಗೆ, ಮುಂಡಗೋಡ ಪಟ್ಟಣದಲ್ಲಿ ಜ್ಯುವೇಲ್ಲರಿ ಶಾಪ್ ನಡೆಸುತ್ತಿದ್ದ ಆಶ್ರಿತ್ ಮೋಹನ್ ವೇರ್ಣೇಕರ್(45) ಎಂಬುವವನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೂ ವ್ಯವಹಾರದಲ್ಲಿ ಮೋಸ..!...

Post
ಕಾರವಾರದಲ್ಲಿ ಉದ್ಯಮಿಯ ಭೀಕರ ಹತ್ಯೆ, ಹೆಂಡತಿ ಬಚಾವ್, ಗಂಡ ಫಿನಿಶ್..!

ಕಾರವಾರದಲ್ಲಿ ಉದ್ಯಮಿಯ ಭೀಕರ ಹತ್ಯೆ, ಹೆಂಡತಿ ಬಚಾವ್, ಗಂಡ ಫಿನಿಶ್..!

ಕಾರವಾರ : ಮನೆಯಲ್ಲಿದ್ದ ಪತಿ ಹಾಗೂ ಪತ್ನಿಯ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ‌ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಣಕೋಣ ಸಾಂತೇರಿ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ನಡೆದಿದೆ‌. ಘಟನೆಯಲ್ಲಿ ವಿನಾಯಕ ನಾಯ್ಕ(58) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ‌ ಇನ್ನೂ ಆತನ ಪತ್ನಿ ವಿಶಾಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದಾಳೆ. ಇವರಿಬ್ಬರೂ ಪುಣೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇತ್ತಿಚೇಗೆ ಹಣಕೋಣದ ಸಾಂತೇರಿ ದೇವರ ಜಾತ್ರೆಗಾಗಿ ಊರಿಗೆ ಬಂದಿದ್ದು, ಕೆಲ ದಿನಗಳಿಂದ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ‌. ಇಂದು ಬೆಳಿಗ್ಗಿನ ಜಾವ 5ಗಂಟೆ...

Post
ಮುಂಡಗೋಡ ಸಂತೆ ಮಾರುಕಟ್ಟೆ ಬಳಿ ಶ್ರೀಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ..!

ಮುಂಡಗೋಡ ಸಂತೆ ಮಾರುಕಟ್ಟೆ ಬಳಿ ಶ್ರೀಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ..!

ಮುಂಡಗೋಡ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರ ಶ್ರೀಗಂಧ ಮರ ಕಳ್ಳತನ ವಿಫಲ ಯತ್ನ ನಡೆದಿದೆ. ಎಸ್.ನಾರಾಯಣರಾವ್ ಎಂಬುವವರ ಮನೆ ಆವರಣದಲ್ಲಿ ಘಟನೆ ನಡೆದಿದ್ದು ಮರ ಕಡಿದು ಸಾಗಿಸಲಾಗದೇ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂದಹಾಗೆ, ಇದೇ ಸ್ಥಳದಲ್ಲಿ ಈ ಹಿಂದೆಯೂ ಶ್ರೀಗಂಧದ ಮರಗಳ ಕಳ್ಳತನದ ವಿಫಲ ಯತ್ನಗಳು ನಡೆದಿತ್ತು. ಆದ್ರೆ, ಇವತ್ತು ನಡೆದಿರೋ ಘಟನೆ ಖಚಿತತೆಯಿಂದಲೇ ಕಳ್ಳರು ಬಂದು, ಇನ್ನೇನು ಸಾಗಿಸುವ ಹಂತದಲ್ಲಿ ಅರ್ದಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ....

Post
ಮೀಟರ್ ಬಡ್ಡಿ ಮಾಫಿಯಾಗೆ ಬಲೆ ಬೀಸಿದ ಪೊಲೀಸ್ರು, 25 ಬಡ್ಡಿ ದಂಧೆಕೋರರ ಬಂಧನ..!

ಮೀಟರ್ ಬಡ್ಡಿ ಮಾಫಿಯಾಗೆ ಬಲೆ ಬೀಸಿದ ಪೊಲೀಸ್ರು, 25 ಬಡ್ಡಿ ದಂಧೆಕೋರರ ಬಂಧನ..!

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಭರ್ಜರಿ ಯುದ್ಧ ಸಾರಿದ್ದಾರೆ. ಪರಿಣಾಮ 25 ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ. ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮೀಟರ್ ಬಡ್ಡಿ ಹಾವಳಿಯ ಬಗ್ಗೆ ನೋವು ತೋಡಿಕೊಂಡಿದ್ದರಲ್ಲದೇ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಪತ್ತೆಗೆ ಮುಂದಾಗಿ ಹುಬ್ಬಳ್ಳಿ,...

Post
ಶಿಡ್ಲಗುಂಡಿ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಯಾರಿಗಾದ್ರೂ ಈತನ ಗುರುತು ಇದ್ರೆ ಮಾಹಿತಿ ನೀಡಿ..

ಶಿಡ್ಲಗುಂಡಿ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಯಾರಿಗಾದ್ರೂ ಈತನ ಗುರುತು ಇದ್ರೆ ಮಾಹಿತಿ ನೀಡಿ..

ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 60-65 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು ಯಾರಿಗಾದ್ರೂ ಈತನ ಬಗ್ಗೆ ಗುರುತು ಇದ್ರೆ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಮುಂಡಗೋಡ ಪೊಲೀಸ್ ಠಾಣೆ ಫೋನ್ ನಂಬರ್ 08301 222211 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕ್ರೈ ಪಿಎಸ್ಐ ಹೆಚ್.ಬಿ.ಕುಡುಗುಂಟಿ ತಿಳಿಸಿದ್ದಾರೆ

Post
ಜಸ್ಟ್ ಪೋನಿನಲ್ಲಿ ಮಹಿಳೆ ಜೊತೆ ಮಾತಾಡಿದ ಅಂತಾ ಮೂಳೆ ಮುರಿಯುವಂಗೆ ಹೊಡೆದ್ರು..!

ಜಸ್ಟ್ ಪೋನಿನಲ್ಲಿ ಮಹಿಳೆ ಜೊತೆ ಮಾತಾಡಿದ ಅಂತಾ ಮೂಳೆ ಮುರಿಯುವಂಗೆ ಹೊಡೆದ್ರು..!

ಧಾರವಾಡ: ಮಹಿಳೆ ಜೊತೆ ಪೋನಿನಲ್ಲಿ ಮಾತನಾಡಿದ್ದಾನೆಂದು ಸಂಶಯ ಪಟ್ಟು ಟಂಟಂ ಚಾಲಕನ ಮೇಲೆ ಒಂದೇ ಕುಟುಂಬದವರಿಂದ ಹಲ್ಲೆ ನಡೆದಿದೆ. ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದ ಮಾವಿನ ತೋಟದಲ್ಲಿ ಘಟನೆ ನಡೆದಿದೆ. ಇಮಾಮ್ ಸಾಬ್ ದೇವರಮನೆ (34) ಎನ್ನುವ ಟಂಟಂ ಚಾಲಕನ ಮೇಲೆ, ಸುಮಾರು 10 ಜನರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ತೀವ್ರ ಹಲ್ಲೆಗೆ ಒಳಗಾದ ಇಮಾಮಸಾಬ್ ನ ಎರಡು ಕೈ ಮುರಿತಗೊಂಡಿವೆ. ಎಲುಬು ಮುರಿಯುವಂತೆ ಹೊಡೆದು ಕೈ ಮುರಿದಿರುವ ದುಷ್ಕರ್ಮಿಗಳು. ಕೊಟೂರು ಗ್ರಾಮದ ಅಗಸಿಮನಿ ಎಂಬ ಕುಟುಂಬದ...

Post
ಅಕ್ರಮ ಗೋ ಸಾಗಾಟ, ಮುಂಡಗೋಡ ಪೊಲೀಸ್ರ ಭರ್ಜರಿ ರೈಡ್:  ಆರು ಜಾನುವಾರು ರಕ್ಷಣೆ..!

ಅಕ್ರಮ ಗೋ ಸಾಗಾಟ, ಮುಂಡಗೋಡ ಪೊಲೀಸ್ರ ಭರ್ಜರಿ ರೈಡ್: ಆರು ಜಾನುವಾರು ರಕ್ಷಣೆ..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಟಾಟಾ ಎಸ್ ನಲ್ಲಿ ಸಾಗಿಸುತ್ತಿದ್ದ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಥೇಟು ಸಿನಿಮಾ ಸ್ಟೈಲಿನಲ್ಲೇ ಚೇಸ್ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ತಾಲೂಕಿನ ಬಡ್ಡಿಗೇರಿಯಿಂದ ಹಾನಗಲ್ಲಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಟಾಟಾ ಎಸ್ ನಲ್ಲಿ ಆರು ಜಾನುವಾರುಗಳನ್ನು ಅಮಾನುಷವಾಗಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಹಾನಗಲ್ಲಿನ ಕಡೆಗೆ ವಾಹನ ಹೊರಟಿದೆ ಅನ್ನೊ ಮಾಹಿತಿ ತಿಳಿದ ಪೊಲೀಸ್ರು, ಪಟ್ಟಣದ ಹೊರ ವಲಯದ...

Post
ಉತ್ತರ ಕನ್ನಡದ ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ರಾಜ್ಯ ಡಕಾಯಿತರ ಬಂಧನ..!

ಉತ್ತರ ಕನ್ನಡದ ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ರಾಜ್ಯ ಡಕಾಯಿತರ ಬಂಧನ..!

ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ಟೀಂ ನಿಜಕ್ಕೂ ಅದ್ಭುತ ಕಾರ್ಯ ಮಾಡಿದೆ. ದರೋಡೆಗೆ ಸಂಚು ರೂಪಿಸಿ ಬಸ್ ಹತ್ತಿ ಹೊರಟಿದ್ದ, ಇಬ್ಬರು ಖತರ್ನಾಕ್ ಅಂತರ್ ರಾಜ್ಯ ದರೋಡೆಕೋರರನ್ನ ಹೆಡೆಮುರಿ ಕಟ್ಟಿದ್ದಾರೆ. ಫಿಲ್ಡಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಕ್ರಿಮಿಗಳು ಮಾತ್ರ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಅನಮೋಡ್ ಚೆಕ್ ಪೊಸ್ಟ್..! ಅಂದಹಾಗೆ, ನಿನ್ನೆ ಶನಿವಾರ, ಅಂದ್ರೆ, ಜುಲೈ 27 ರಂದು ರಾಮನಗರದ ಅನಮೋಡ್ ಅಬಕಾರಿ ಚೆಕ್ ಪೊಸ್ಟ್ ನಲ್ಲಿ ಸಿಬ್ಬಂದಿಯವ್ರು ತಪಾಸಣೆ...

Post
“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..!  ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?

“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..! ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?

ಮುಂಡಗೋಡ ತಾಲೂಕಿನ ಪಾಳಾದ ಹುಡುಗ ರವಿ ಅಕ್ಕಸಾಲಿ ಸಾವಿನ ಹಿಂದೆ ಅನುಮಾನ ಇದೆಯಾ..? ಹುಡೇಲಕೊಪ್ಪದ ಮಾವಿನ ಗಿಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರವಿಯ ಸಾವಿನ ಸುತ್ತ ಹತ್ತಾರು ಪ್ರಶ್ನೆಗಳು ಎದ್ದಿವೆ. ವಯಸ್ಸಲ್ಲದ ವಯಸ್ಸಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದರ್ದಾದ್ರೂ ಏನಿತ್ತು ಅನ್ನೋದು ಕೆಲವರ ಪ್ರಶ್ನೆ..! ಅಣಬೆ ತಂದಿದ್ದ..! ಅಸಲು, ನಿನ್ನೆ ಇಡೀ ದಿನವೂ ಲವಲವಿಕೆಯಿಂದಲೇ ಇದ್ದ ರವಿ, ಮದ್ಯಾನ ಮನೆಗೆ ಕಾಡಿನಿಂದ ತಾಜಾ ಮಶರೂಮ್ (ಅಣಬೆ) ತಂದಿದ್ದ. ನಿಮಗೆ ಗೊತ್ತಿರಲಿ, ಉತ್ತರ ಕನ್ನಡದ ಕಾಡಲ್ಲಿ ಈ...

Post
ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ

ಅಮೇರಿಕಾದ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಿನ್ನೆ ಸಂಜೆ ನಡೆದ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ರ್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಟ್ರಂಪ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದೆ. ಘಟನೆ ನಡೆಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರೆದು ರಕ್ಷಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಕೈಗೊಂಡಿರುವ ಅಮೇರಿಕಾದ ಸೀಕ್ರೆಟ್ ಸರ್ವಿಸ್, ಟ್ರಂಪ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ. ಅಲ್ಲದೆ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆದಿದ್ದು, ಗುಂಡಿನ...

error: Content is protected !!