Home ಸ್ಪೋರ್ಟ್ಸ್ ಕಾರ್ನರ್

Category: ಸ್ಪೋರ್ಟ್ಸ್ ಕಾರ್ನರ್

Post
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26 ನೇ ಸಾಲಿಗೆ ಕುಸ್ತಿ (ಬಾಲಕರು/ಬಾಲಕಿಯರು),ಅರ್ಚರಿ (ಬಾಲಕರು) ಫೆನ್ಸಿಂಗ್(ಬಾಲಕರು), ಬಾಕ್ಸಿಂಗ್ (ಬಾಲಕರು/ಬಾಲಕಿಯರು) ಕ್ರೀಡೆಗಳಿಗೆ ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪರಿಶಿಷ್ಟ ಪಂಗಡದ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಏ.14 ರಂದು ಯಲ್ಲಾಪುರ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಸಲಾಗಿದೆ. ಭಾಗವಹಿಸುವ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳು 2025-26 ನೇ ಸಾಲಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ಗೆ ಅರ್ಹತೆ ಪಡೆದಿರಬೇಕು ಜೂನ್ 1 ಕ್ಕೆ...

Post
ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!

ಶಿಗ್ಗಾವಿ ಕುಸ್ತಿ ಹಬ್ಬದಲ್ಲಿ 800 ಪೈಲ್ವಾನರ, 5 ದಿನಗಳ ಕಾದಾಟಕ್ಕೆ ವಿದ್ಯುಕ್ತ ತೆರೆ..!

ಶಿಗ್ಗಾವಿ: ಅದೊಂದು ಅಪ್ಪಟ ದೇಸೀ ಗ್ರಾಮೀಣ ಕ್ರೀಡೆ.. ಅಲ್ಲಿನ ಅಖಾಡದಲ್ಲಿ ಧೂಳೆಬ್ಬಿಸುವ ಕುಸ್ತಿ ಕಲಿಗಳು ತೊಡೆ ತಟ್ಟಿ ನಿಂತಿದ್ರು. ನೀನಾ..? ನಾನಾ..? ಅಂತಾ ಕಣದಲ್ಲಿ ಕೇಕೆ ಹಾಕಿದ್ರು. ಇದು, ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನಡೆದ ಕುಸ್ತಿ ಹಬ್ಬದ ರಣರೋಚಕ ದೃಷ್ಯಗಳು. ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಕರ್ನಾಟಕ ಕುಸ್ತಿ ಹಬ್ಬ 2022-23 ಸಮಾರೋಪ ಸಮಾರಂಭ ರವಿವಾರ ನಡೆಯಿತು. ವಿವಿಧ ರಾಜ್ಯಗಳ...

Post
72 ರ ಹರೆಯದಲ್ಲೂ ಬತ್ತದ ಕ್ರೀಡೋತ್ಸಾಹ, Y.R.ಗೇಟಿಯವರ್ ಸಾಧನೆಗೆ ಬೇಕಿದೆ ಇನ್ನಷ್ಟು ಪ್ರೋತ್ಸಾಹ..!

72 ರ ಹರೆಯದಲ್ಲೂ ಬತ್ತದ ಕ್ರೀಡೋತ್ಸಾಹ, Y.R.ಗೇಟಿಯವರ್ ಸಾಧನೆಗೆ ಬೇಕಿದೆ ಇನ್ನಷ್ಟು ಪ್ರೋತ್ಸಾಹ..!

ಅವ್ರು 72 ವರ್ಷದ ಹಿರಿಯ ಕ್ರೀಡಾಪಟು.. ಇವತ್ತಿಗೂ ಆ ಹಿರಿಯ ಜೀವ ಓಟಕ್ಕೆ ನಿಂತರೆ ಸಾಕು ಯಾರಿಗೂ ಕಡಿಮೆಯಿಲ್ಲ ಅನ್ನೋ ಛಾಪು ಮೂಡಿಸ್ತಾರೆ. ಪ್ರಶಸ್ತಿಗಳನ್ನು ಬಾಚಿಕೊಳ್ತಾರೆ. ದಶಕಗಳಿಂದಲೂ ಕ್ರೀಡಾಕ್ಷೇತ್ರದಲ್ಲಿ ತಮ್ಮದೇ ಆದ ನಿರಂತರ ಸೇವೆ ಸಲ್ಲಿಸ್ತಿದಾರೆ. ಆದ್ರೆ, ಇವ್ರ ಸಾಧನೆಯ ಹೆಜ್ಜೆಗಳನ್ನು ಅದ್ಯಾಕೋ ಏನೋ ರಾಜ್ಯ ಸರ್ಕಾರ ಮಾತ್ರ ಇನ್ನೂ ಗುರುತಿಸಿಯೇ ಇಲ್ಲ. ಹೀಗಾಗಿ, ಈ ಹಿರಿಯ ಕ್ರೀಡಾಪಟುವಿಗೆ ಸದ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಲೇ ಬೇಕು ಅಂತಾ ಉತ್ತರ ಕರ್ನಾಟಕದ ಅಸಂಖ್ಯ ಕ್ರೀಡಾಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ....

Post
ಕ್ರಿಕೆಟ್ ನಲ್ಲಿ “ವಿರಾಟ” ಪರ್ವ ಕೊನೆಯಾಗತ್ತಾ..? ನಾಯಕತ್ವ ಬದಲಾಗತ್ತಾ..?

ಕ್ರಿಕೆಟ್ ನಲ್ಲಿ “ವಿರಾಟ” ಪರ್ವ ಕೊನೆಯಾಗತ್ತಾ..? ನಾಯಕತ್ವ ಬದಲಾಗತ್ತಾ..?

ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ಅಪ್ರತಿಮ ಆಟಗಾರ. ಬ್ಯಾಟ್ಸ್ ಮೆನ್ ಆಗಿ ಕ್ರೀಸ್ ಗೆ ಅಂಟಿಕೊಂಡು ನಿಂತ್ರೆ ಸುನಾಮಿಯಂತೆ ರನ್‍ಗಳು ಹರಿದುಬರುತ್ತೆ. ಎದುರಾಳಿಯ ಸವಾಲು ಎಷ್ಟೇ ಇರಲಿ, ಬ್ಯಾಟ್ ಝಳಪಿಸಲು ಶುರು ಮಾಡಿದ್ರೆ ಚೇಸಿಂಗ್ ಗಾಡ್. ಇನ್ನು ಫಿಟ್ ನೆಸ್ ಬಗ್ಗೆ ಹೇಳುವುದೇ ಬೇಡ. ಮಿಂಚಿನ ಗತಿಯಲ್ಲಿ ಓಡಾಡುತ್ತಾ ಚುರುಕಿನ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಾರೆ. ಆಕ್ರಮಣಕಾರಿ ಪ್ರವೃತ್ತಿ, ಹೋರಾಟ ಛಲ, ಗೆಲ್ಲಲೇಬೇಕು ಅನ್ನೋ ಹಠ ಹಾಗೂ ಸೋಲನ್ನು ಒಪ್ಪಿಕೊಳ್ಳದಂತಹ ಮನಸ್ಥಿತಿಯ ಆಟಗಾರ. ಒಬ್ಬ ಆಟಗಾರನಾಗಿ...

Post

ಉತ್ತರ ಕನ್ನಡ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ

  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ಸುಂಕಸಾಳ ಹೆದ್ದಾರಿಯಲ್ಲಿ ತುಂಬಿದ್ದ ನೆರೆ ನೀರಿನಲ್ಲಿ ಬೈಕ್ ಸವಾರ ಹಾಗೂ ಸಹ ಸವಾರನು ಕೊಚ್ಚಿಹೋಗಿದ್ದು ಕೊಚ್ಚಿಹೋದ ಸಹ ಸವಾರ ಕೇಶವ್ ನಾಯ್ಕ ಎಂಬುವವರನ್ನು ಅಂಕೋಲ ಪಿ.ಎಸ್.ಐ ಸಂಪತ್ ರವರು ರಕ್ಷಣೆಮಾಡಿ ಕರೆತಂದಿದ್ದಾರೆ‌. ಇನ್ನು ಬೈಕ್ ಸವಾರ ಹೊನ್ನಾವರ ಮೂಲದ ಸಂತೋಷ್ ನಾಯ್ಕ್ (30) ನೀರಿನಲ್ಲಿ ಕೊಚ್ಚಿ ಹೋಗಿದ್ದು ಈತನಿಗಾಗಿ ಅರಣ್ಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ರಸ್ತೆಯನ್ನು ಬೈಕ್‌ನಲ್ಲಿ ದಾಟುವಾಗ ಆಯತಪ್ಪಿ ಬಿದ್ದು ಕೊಚ್ಚಿ ಹೋದ ಸಂತೋಷ್ ನಾಯ್ಕ್...

error: Content is protected !!