ಹುಬ್ಬಳ್ಳಿ :ಈ ಬಾರಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನಮ್ಮ ಉದ್ದೇಶ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ನಾಳೆಯಿಂದ ಅಧಿವೇಶನ ಎರಡು ವಾರ ನಡೆಯಬೇಕು ಅಂತ ನಮ್ಮ ‌ಉದ್ದೇಶ ಆಗಿದೆ. ಆದರೆ ವಿಪಕ್ಷ ಹೇಗೆ ಸಹಕಾರ ನೀಡುತ್ತೆ ನೋಡೋಣ ಎಂದರು. ಆರ್ಥಿಕ ಸಂಕಷ್ಟ ಇಲ್ಲೆ ಇಲ್ಲ ಬಿಜೆಪಿ ಸುಳ್ಳು ಹೇಳುತ್ತಿದ್ದು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ವಿರೋಧ ಮಾಡತ್ತಾರೆ
ಬೇರೆ ಕಡೆ ಬಿಜೆಪಿ ಅವರೇ ಗ್ಯಾರಂಟಿ ಘೋಷಣೆ ಮಾಡ್ತಾರೆ
ಇದು ಇಬ್ಬಂಧಿತನ ಅಲ್ವಾ..? ಇದರಲ್ಲಿ
ಬಿಜೆಪಿಗೆ ಸ್ಪಷ್ಟ ನಿಲುವು ಇಲ್ಲ ಬರೀ ಸುಳ್ಳು ಅಪ್ರಚಾರ ಮಾಡತ್ತಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಇಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಯಾವ ಕೆಲಸ ದುಡ್ಡು ಇಲ್ಲದೆ ನಿಂತಿದೆ ಅನ್ನೋದನ್ನ ಬಿಜೆಪಿ ಅವರು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಬಳ್ಳಾರಿಯಲ್ಲಿ ಬಾಣಂತಿಯ ಸಾವು ಪ್ರಕರಣ ನಿಜವಾಗಿದೆ. ಮೀಟಿಂಗ್ ಮಾಡಿ ಕಳಪೆ ಔಷಧಿ ಕೊಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ಬ್ಲಾಕ್ ಲಿಸ್ಟ್ ಗೆ ಹಾಕಲು‌ ಹೇಳಿದ್ದೆನೆ, ಅವರ ವಿಚಾರಣೆ ಮಾಡಲು ಹೇಳಿದ್ದಿನಿ
ಡ್ರಗ್ ಕಂಟ್ರೋಲ್ ರನ್ನಾ ಅವರನ್ನು ಅಮಾನತು ಮಾಡಲಾಗಿದೆ. ಇದರ ಜೊತೆಗೆ ಒಂದು ಕಮಿಟಿ ರಚನೆ ಮಾಡಲಾಗಿದೆ. ಆ ಕಮಿಟಿ ವರದಿ ನೀಡಿದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೆವೆ. ಇದು ಮೋಸ್ಟ್ ಅನ್ಫಾರ್ಚುನೆಟ್ ಆದರೆ
ಔಷಧೀಯ ತಯಾರಿಕೆ ಸಂಸ್ಥೆ ಕಳಪೆ ಔಷಧೀಯ ಕೊಟ್ಟಿರೋದು ಸಾಬೀತು ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ನಿಡುತ್ತೆವೆ.

ಕಳಪೆ ಗುಣಮಟ್ಟದ ಔಷಧೀಯ ಖರೀದಿಗೆ ನಾನೇನು ಆದೇಶ ಮಾಡಿದ್ದಿನಾ ಎಂದ ಅವರು ಬಿಜೆಪಿಯವರು ಕೋವಿಡ್ ಹಗರಣದಲ್ಲಿ ಕಳಪೆ ಔಷಧೀಯ ಖರೀದಿ ಮಾಡಿದ್ದಾರೆ. ಅಲ್ಲದೆ ಒಂದಕ್ಕೆ ಹತ್ತು ಪಟ್ಟು ದುಡ್ಡು ಕೊಟ್ಟು, ಟೆಂಡರ್ ಕರೆಯದೆ ಖರೀದಿ ಮಾಡಿದ್ದಾರೆಅಂದಿನ ಸಿಎಂ ಮತ್ತು ಆರೋಗ್ಯ ಸಚಿವರು ಅದಕ್ಕೆ ಹೊಣೆ ಎಂದರು

ಪಂಚಮಸಾಲಿ ಹೋರಾಟ ವಿಚಾರ
ಪ್ರಜಾಪ್ರಭುತ್ವದಲ್ಲಿ ಹೋರಾಟ ಎಲ್ಲರು ಮಾಡಬಹುದು ಅದಕ್ಕೆ ನನ್ನ ವಿರೋಧ ಇಲ್ಲ ನಮ್ಮ ಜೊತೆಗೆ ಮಾತನಾಡಿದ್ರೆ ಅದಕ್ಕೆ ಸಮಂಜಸ ಉತ್ತರ ನೀಡತ್ತೆವೆ ಎಂದರು

error: Content is protected !!