ಮುಂಡಗೋಡ: 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ಬಾರಾಬಾನಗಡಿ ಆಗಿದೆಯಾ..? ಅದ್ಯಾವನೋ ಕಾಂಟ್ರಾಕ್ಟರ್ ಕಾಮಗಾರಿ ಹಳ್ಳ ಹಿಡಿಸಿದ್ರಾ..? ಇಂತಹದ್ದೊಂದು ಅನುಮಾನದೊಂದಿಗೆ ಶನಿವಾರ ನಡೆದ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಕಾವೇರಿದ ಆರೋಪ, ಚರ್ಚೆಗೆ ಕಾರಣವಾಯ್ತು.
ಅಂದಹಾಗೆ, ಕಾಮಗಾರಿಯ ದಾಖಲೆಯಲ್ಲಿ ಪೈಪ್ ಲೈನ್ ತೋರಿಸಲಾಗಿದೆ ಆದರೆ ಆ ಸ್ಥಳಗಳಲ್ಲಿ ಪೈಪ್ ಇಲ್ಲದೆ ಇರುವುಕಂಡು ಬಂದಿದೆ. ಹಾಗಾದರೇ ಆ ಪೈಪಗಳು ಎಲ್ಲಿ ಹೋದವು ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಪ.ಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಏಕದಂ ಏರುದನಿಯಲ್ಲಿ ಆಗ್ರಹಿಸಿದ್ರು.
ಶನಿವಾರ ಇಲ್ಲಿನ ಪ.ಪಂ ಸಭಾಭವನದಲ್ಲಿ ಪ.ಪಂ ಅಧ್ಯಕ್ಷೆ ಜಯಸುಧಾ ಭೋವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಮ್ಮದಗೌಸ ಮಕಾಂದಾರ್ ಈ ಬಗ್ಗೆ ಆರೋಪಿಸಿ ಮಾತನಾಡಿದರು, ಸರಕಾರದ ಕೋಟ್ಯಾಂತರ ರೂ ಅನುದಾನದಲ್ಲಿ ಪಟ್ಟಣದ ಜನರಿಗೆ 24×7 ಕುಡಿಯುವ ಯೋಜನೆ ಇದಾಗಿತ್ತು. ಆದರೆ ಗುತ್ತಿಗೆದಾರರು ಈ ಯೋಜನೆಯ ಮ್ಯಾಪ್ ನಲ್ಲಿ ಪೈಪ್ ಲೈನ್ ಅಳವಡಿಸಿದ ಬಗ್ಗೆ ತೊರಸಿದ್ದಾರೆ. ಮ್ಯಾಪಿನ ಪ್ರಕಾರ ಕೆಲ ಕಡೆ ಪೈಪ್ ಗಳೆ ಇಲ್ಲ. ಅಲ್ಲದೆ ಈ ಯೋಜನೆ ಪೂರ್ಣಗೊಂಡ ಬಗ್ಗೆ ಹಿಂದಿನ ಮುಖ್ಯಾಧಿಕಾರಿಗಳು ಹಸ್ತಾಂತರ ಮಾಡಿಕೊಂಡಿದ್ದಾರೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು ಇದಕ್ಕೆ ಕೆಲ ಸದಸ್ಯರು ಧ್ವನಿ ಗೂಡಿಸಿದರು.
ಪಟ್ಟಣದಲ್ಲಿರುವ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕವು ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. ಇದೊಂದು ದೊಡ್ಡ ಹಗರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಸದಸ್ಯ ಮಂಜುನಾಥ ಹರಮಲಕರ ಆಗ್ರಹಿಸಿದರು. ಈ ಬಗ್ಗೆ ಪ್ರತ್ಯೇಕವಾಗಿ ಒಂದು ವಾರದ ಒಳಗೆ ಸಭೆ ಕರಿದು ಚರ್ಚೆಸಿ ಕ್ರಮ ಕೈಗೊಳ್ಳವ ಬಗ್ಗೆ ಅಧ್ಯಕ್ಷರು ಭರವಸೆ ನೀಡಿದರು.
ಕೆಲ ಕಾಮಗಾರಿಗಳಿಗೆ ಶೇ20 ಕ್ಕಿಂತ ಹೆಚ್ಚು ಬಿಲೊ ಹೋಗಿರುವ ಸಿಂಗಲ್ ಟೆಂಡರನ್ನು ಮರು ಟೆಂಡರ ಮಾಡುವಂತೆ ಸದಸ್ಯರಾದ ಶೇಖರ ಲಮಾಣಿ, ರಜಾಖಾನ ಪಠಾಣ ಆಗ್ರಹಿಸಿದರು. ಅಲ್ಲದೆ ಕಾರ್ಯಾಲಯದ ವಾಹನ ಟೆಂಡರ ಸಹ ಮರು ಟೆಂಡರ್ ಮಾಡಬೇಕೆಂದು ಠರಾವಿಸಲಾಯಿತು. ಆಶ್ರಯ ಬಡಾವಣೆಯಲ್ಲಿ ಅತಿಕ್ರಮಣ ತೆರವುಗೊಳಿಸುವ ಕ್ರಮ ಕೈಗೊಳ್ಳಲು ಠರಾವು ಕೈಗೊಂಡರು.
ಸ್ಲಮ್ ಬೋರ್ಡ್ ವ್ಯಾಪ್ತಿಗೆ ಬರುವಂತಹ ಏರಿಯಾಗಳಿಗೆ ಸರ್ವೆ ಮಾಡಿಕೊಡಲು ಸರ್ವೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅಯ್ಯೋ ದೇವ್ರೆ..!
ಹೈಟೆಕ್ ಸಂತೆ ಮಾರುಕಟ್ಟೆ ಕಾಮಗಾರಿಯ ಹತ್ತಿರ ಮಣ್ಣು ಇರುವುದರಿಂದ ಮಳೆ ಬಿದ್ದರೆ ವಿದ್ಯಾರ್ಥಿಗಳಿಗೆ, ಸಂತೆಗೆ ಬರುವ ಜನರಿಗೆ, ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಮಾರುಕಟ್ಟೆ ಯಲ್ಲಿ ಬೀದಿ ದೀಪಗಳು ಇಲ್ಲ. ಮತ್ತು ಸಂತೆಯಾದ ಮರು ದಿನ ದುರ್ವಾಸನೆ ಆಗುತ್ತಿದ್ದರ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಸದಸ್ಯ ಮಂಜುನಾಥ ಹರಮಲಕರ ಸಭೆಯ ಪೂರ್ವ ದಲ್ಲಿ ಅರ್ಜಿ ನೀಡಿ ಸಮಸ್ಯೆ ಹೇಳಿಕೊಂಡ ಪ್ರಸಂಗ ನಡೆಯಿತು. ಇದಕ್ಕೆ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಒಬ್ಬ ಸದಸ್ಯರಾದವರು ಅರ್ಜಿ ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಭೂ ಕಬಳಿಕೆ ನ್ಯಾಯಾಲಯದಲ್ಲಿ ಪ.ಪಂ ಯಲ್ಲಿರುವ ದಾಖಲೆಗಳನ್ನು ದುರುಪಯೋಗ ಮಾಡಿಕೊಂಡು ಖಾಸಗಿ ದೂರ ಸಲ್ಲಿಸಿದ ಅಧಿಕಾರಿ ಸೇರಿ ಮೂರು ಸಿಬ್ಬಂದಿಗಳ ವಿರುದ್ಧ ಕ್ರಮವಾಗಬೇಕು ಹಾಗೂ ನಾಲ್ಕು ವಾರ್ಡಿನ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಸರ್ವ ಸದಸ್ಯರು ಠರಾವಿಸಿದರು.
ಪ.ಪಂ ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ಮುಖ್ಯಾಧಿಕಾರಿ ಚಂದ್ರಶೇಖರ ಬಿ, ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.